ಬೆಂಗಳೂರು:ಸಚಿನ್ ಶೆಣೈ ಎಂಬುವವರು ತಮ್ಮ ಕುಟುಂಬದೊಂದಿಗೆ ಪಂಜಾಬ್ ಮತ್ತು ಹಿಮಾಚಲ ಪ್ರದೇಶಕ್ಕೆ ವರ್ಷಾಂತ್ಯದಲ್ಲಿ ಪ್ರವಾಸ ಹೋಗಲು ನಿರ್ಧರಿಸಿದ್ದರು. ಏರ್ ಇಂಡಿಯಾ ವಿಮಾನದಲ್ಲಿ ಮೂರು ತಿಂಗಳ ಮೊದಲೇ ಟಿಕೆಟ್ ಬುಕ್ ಮಾಡಿದ್ದರು. ಅದರಂತೆ ತಮ್ಮ ಪತ್ನಿ ಉಮಾ ಮತ್ತು ಮಗಳು ಆರ್ಯ ಜತೆಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಇನ್ನೇನು ವಿಮಾನ ಹತ್ತಬೇಕು…ಪ್ರವಾಸ ಆರಂಭಿಸಬೇಕು ಎನ್ನುವಾಗಲೇ ಬುಕ್ ಮಾಡಿದ್ದ ಟಿಕೆಟ್ ರದ್ದಾಗಿದೆ. ಇದಕ್ಕೆ ಕಾರಣವೇನೆಂದರೆ ಸಚಿನ್ ಶೆಣೈ ಅವರ ಸಾಕು ನಾಯಿ!
ಸಚಿನ್ ಶೆಣೈ, ಡಾಲ್​ಹೌಸಿ ಎಂಬಲ್ಲಿ ತಮ್ಮ ಪತ್ನಿಯ ಹುಟ್ಟುಹಬ್ಬವನ್ನು ಆಚರಿಸಿಲು ನಿರ್ಧರಿಸಿದ್ದರು. ಹೀಗಾಗಿ ಮೊದಲೇ ಹೊಟೇಲ್​ ಕೂಡಾ ಬುಕ್ ಮಾಡಿಕೊಂಡಿದ್ದರು. ಹೀಗಾಗಿ ಸಂಜೆ 5.10ರ ವಿಮಾನದಲ್ಲಿ ದೆಹಲಿಗೆ ಹೊರಟಿದ್ದಾರೆ. ಆದರೆ ಕೊನೆ ಕ್ಷಣದಲ್ಲಿ ಇವರ ಪ್ರವಾಸ ರದ್ದಾಗಲು ಕಾರಣ ಇವರ ಸಾಕು ನಾಯಿ. ಸಚಿನ್ ಶೆಣೈ ಪ್ರವಾಸಕ್ಕೆಂದು ತಮ್ಮ ಪ್ರೀತಿಯ ಸಾಕು ನಾಯಿಯನ್ನೂ ಕರೆತಂದಿದ್ದರು. ಆದರೆ ವಿಮಾನ ಸಿಬ್ಬಂದಿಗಳು ನಾಯಿಯನ್ನು ವಿಮಾನದೊಳಗೆ ಹತ್ತಿಸಲು ಅವಕಾಶ ನೀಡಿಲ್ಲ. ಕೊನೆಗೆ ತಮ್ಮ ಪ್ರವಾಸವನ್ನು ರದ್ದುಗೊಳಿಸಿ ಮನೆಗೆ ಹಿಂತಿರುಗಿದ್ದಾರೆ. ಸಚಿನ್ ಶೆಣೈ ಪ್ರವಾಸ ಹಾಗೂ ಹೊಟೇಲ್​ ಬುಕ್ಕಿಂಗ್ ಎಂದು ಸುಮಾರು 4 ಲಕ್ಷ ರೂ. ಖರ್ಚು ಮಾಡಿದ್ದರು.
ಏರ್ ಇಂಡಿಯಾ ಸಿಬ್ಬಂದಿಗಳು ಸಚಿನ್ ಕುಟುಂಬಕ್ಕೆ ನಾಯಿಯೊಂದಿಗೆ ಪ್ರಯಾಣಿಸಲು ಅವಕಾಶ ನಿರಾಕರಿಸಿದ್ದಾರೆ. ವಿಮಾನದಲ್ಲಿ ಸಾಕುಪ್ರಾಣಿಯೊಂದಿಗೆ ಪ್ರಯಾಣಿಸಲು ಅವಕಾಶ ಇದೆ. ಇದಕ್ಕೆ ಫಿಟ್ ಟು ಫ್ಲೈ (Fit to Fly) ಸರ್ಟಿಫಿಕೇಟ್ ನೀಡಲಾಗುತ್ತದೆ. ನಿಯಮದನ್ವಯ ನಾಯಿಯ ತೂಕ 5 ಕೆ.ಜಿ. ಗಿಂತ ಕಡಿಮೆ ಇರಬೇಕು. ಆದರೆ ಸಚಿನ್ ಅವರ ನಾಯಿಯ ತೂಕ 5 ಕೆ.ಜಿ. ಗಿಂತ ಹೆಚ್ಚಿತ್ತು. ಹೀಗಾಗಿ ವಿಮಾನ ಸಿಬ್ಬಂದಿಗಳು ನಾಯಿಯನ್ನು ವಿಮಾನದೊಳಗೆ ಕರೆತರಲು ಅವಕಾಶ ನೀಡಿಲ್ಲ.
ಈ ಬಗ್ಗೆ ಸಚಿನ್ ಶೆಣೈ ಮಾತನಾಡುತ್ತಾ, ನಮ್ಮ ಪ್ರೀತಿಯ ನಾಯಿಯ ಪ್ರಯಾಣಕ್ಕಾಗಿ ಸುಮಾರು 4 ಸಾವಿರ ರೂ. ಖರ್ಚು ಮಾಡಿದ್ದೇವೆ. ವಿಮಾನ ನಿಲ್ದಾಣ ತಲುಪುತ್ತಿದ್ದಂತೆ ನಮಗೆ ಬೋರ್ಡಿಂಗ್ ಪಾಸ್ ಕೂಡಾ ನೀಡಲಾಗಿತ್ತು. ಇದಾಗಿ ಬೋರ್ಡಿಂಗ್ ಗೇಟ್ 17 ರಲ್ಲಿ ಕಾಯುತ್ತಿರುವಾಗ, ಅಲ್ಲಿನ ಸಿಬ್ಬಂದಿ ಬಂದು ನೀವು ಸಾಕುಪ್ರಾಣಿಗಳನ್ನು ಬಿಟ್ಟು ವಿಮಾನ ಹತ್ತಬಹುದು ಎಂದರು. ಒಂದು ಬಾರಿ ನಾವೆಲ್ಲರೂ ಗೊಂದಲಕ್ಕೆ ಒಳಗಾದೆವು. ಈ ಘಟನೆಯಿಂದ ನಾವೆಲ್ಲರೂ ಅಸಮಾಧಾನಗೊಂಡಿದ್ದೇವೆ. ವಿಶೇಷವಾಗಿ ನನ್ನ 12 ವರ್ಷದ ಮಗಳು ನೊಂದುಕೊಂಡಿದ್ದಾಳೆ ಎಂದು ಶೆಣೈ ಹೇಳಿದ್ದಾರೆ.
ಸಚಿನ್ ಶೆಣೈ ತಮಗಾಗಿರುವ ಅನುಭವದ ಬಗ್ಗೆ ಅಸಮಾಧಾನ ಹೊರಹಾಕುತ್ತಾ, ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದಕ್ಕೆ ಏರ್​ಇಂಡಿಯಾ ಪ್ರತಿಕ್ರಿಯೆ ನೀಡಿದ್ದು, ದೇಶೀಯ ವಿಮಾನಗಳಲ್ಲಿ ಸಾಕು ಪ್ರಾಣಿಯ ಸಾಗಾಣೆಗೆ ಕೆಲವೊಂದು ನಿಯಮಗಳು ರೂಪಿತವಾಗಿದೆ. ಸಾಕು ಸಾಗಣೆಯು ವಿಮಾನದ ಕಮಾಂಡರ್ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದಿದೆ. ಜತೆಗೆ ಅದೇ ಟಿಕೆಟ್​​ನೊಂದಿಗೆ ಮತ್ತೆ ಕುಟುಂಬ ಸಮೇತರಾಗಿ ವಿಮಾನದಲ್ಲಿ ಸಂಚರಿಸಲು ಅವಕಾಶ ನೀಡಲಾಗುವುದು ಎಂದು ಟ್ವೀಟ್ ಮಾಡಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + eighteen =
Remember me
