ಬೆಂಗಳೂರು:ಮುಂದೇನಾಗುತ್ತೆ ಎಂಬ ಅರಿವಿಲ್ಲದೆ ಸ್ನೇಹಿತರ ಮಾತು ಕೇಳಿ ಕೆಟ್ಟೆ ಎಂದು ಎಫ್​ಡಿಎ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತಳಾಗಿರುವ ಕಿಂಗ್​ಪಿನ್ ಸನಾಬೇಡಿ ವಿಚಾರಣೆ ವೇಳೆ ಅಧಿಕಾರಿಗಳ ಬಳಿ ಕಣ್ಣೀರಿಟ್ಟರು.
ಒಳ್ಳೆಯ ಕೆಲಸ ಸಿಕ್ಕಿತು. ಮದುವೆ ಮಾಡಬೇಕೆಂದು ಕುಟುಂಬಸ್ಥರು ತಯಾರಿ ನಡೆಸಿದ್ದರು. ಇದೇ ಸಮದಲ್ಲಿ ನಂಬಿದ್ದ ಸ್ನೇಹಿತನ ಮಾತು ಕೇಳಿಕೊಂಡು ಲೈಫ್ ಹಾಳು ಮಾಡಿಕೊಂಡೆ ಎಂದು ಸನಾ ದುಃಖಿತರಾದರು.
ಇದನ್ನೂ ಓದಿರಿ:ಮದನಪಲ್ಲಿ ದುರಂತ ಬೆನ್ನಲ್ಲೇ ಮತ್ತೊಂದು ಭಯಾನಕ ಘಟನೆ: ಪತ್ರ ಬರೆದಿಟ್ಟು ಯುವಕ ನಾಪತ್ತೆ!
ಪೆನ್​ಡ್ರೈವ್​ನಲ್ಲಿ ಕಾಪಿ ಮಾಡಿಕೊಡು ಎಂದು ಸ್ನೇಹಿತ ರಮೇಶ್ ಕೇಳಿದ. ಆದ್ರೆ ಈ ರೀತಿಯಾಗುತ್ತದೆ ಎಂದು ನನ್ನ ಅರಿವಿಗೇ ಬರಲಿಲ್ಲ. ಯಾರಿಂದಲೂ ಒಂದು ರೂಪಾಯಿ ಪಡೆದಿಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಬೇಕೆಂದು ಉದ್ದೇಶವೂ ನನಗೆ ಇರಲಿಲ್ಲ. ಸ್ನೇಹಿತ ರಮೇಶ್ ಮಾತು ನಂಬಿ ಪ್ರಶ್ನೆಪತ್ರಿಕೆಗೆ ಪೆನ್​ಡ್ರೈವ್​ಗೆ ಹಾಕಿ ಕೊಟ್ಟೆ ಎಂದು ಅಧಿಕಾರಿಗಳ ಬಳಿ ಸನಾಬೇಡಿ ಗೋಳಾಡಿದ್ದಾಳೆ.
ಸದ್ಯ ರಮೇಶ್, ಚಂದ್ರು ಹಾಗೂ ರಾಚಪ್ಪನನ್ನು ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಚಂದ್ರು ಮತ್ತು ರಾಚಪ್ಪ ಬೇರೆ ಯಾವ ಅಭ್ಯರ್ಥಿಗಳ ಸಂಪರ್ಕ ಮಾಡಿದರು ಎಂಬ ತನಿಖೆ ನಡೆಸುತ್ತಿದೆ. ರಾಚಪ್ಪ ಸಂಪರ್ಕಿತ ಕೆಲ ಅಭ್ಯರ್ಥಿಗಳ ಪೋನ್ ಸ್ವಿಚ್ ಆಫ್ ಬರ್ತಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಪತ್ರ ಬರೆದಿಟ್ಟು ಯುವಕ ನಾಪತ್ತೆ: ಪತ್ರ ಓದಿ ಬೆಚ್ಚಿಬಿದ್ದ ತಂದೆ-ತಾಯಿ ಪೊಲೀಸ್​ ಠಾಣೆಗೆ ದೌಡು!

ಹೊಸ ಗೌಪ್ಯತಾ ನೀತಿ ಘೋಷಣೆ ಬಳಿಕ ವ್ಯಾಟ್ಸ್​ಆ್ಯಪ್​ಗೆ ಗುಡ್​ಬೈ ಹೇಳಿದವರೆಷ್ಟು? ಇಲ್ಲಿದೆ ಮಾಹಿತಿ

ಬೆಳ್ಳಂಬೆಳಗ್ಗೆ ಬಸ್​-ಟ್ರಕ್​ ನಡುವೆ ಭೀಕರ ಅಪಘಾತ: 10 ಮಂದಿಯ ದುರ್ಮರಣ- ಹಲವರಿಗೆ ಗಾಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × one =
Remember me
