ಬೆಂಗಳೂರು:ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಐವರು ಶಂಕಿತ ಭಯೋತ್ಪಾದಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಈ ಮೂಲಕ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಪೊಲೀಸರ ಈ ಕಾರ್ಯಾಚರಣೆಯ ಹಿಂದೆ ಒಂದು ರೋಚಕ ಸ್ಟೋರಿ ಇದೆ.
ಶಂಕಿತರ ಬಗ್ಗೆ ಸಿಸಿಬಿ ಪೊಲೀಸರಿಗೆ ಸಿಕ್ಕ ಒಂದು ಲೀಡ್‌ನಿಂದಾಗಿ ಐವರು ಶಂಕಿತ ಉಗ್ರರು ಲಾಕ್ ಆಗಿದ್ದಾರೆ. ವಿಧ್ವಂಸಕ ಕೃತ್ಯದ ಬಗ್ಗೆ ಸಿಸಿಬಿಗೆ ಮೊದಲೇ ಮಾಹಿತಿಯೊಂದು ಸಿಕ್ಕಿತ್ತು.  ಈ ಪ್ರಕರಣದ ಪ್ರಮುಖ ಆರೋಪಿ ಜುನೈದ್‌ನಿಂದ ಬರ್ತಿದ್ದ ಫಂಡ್ ಬಗ್ಗೆ ಪಕ್ಕಾ ಮಾಹಿತಿಯನ್ನು ಸಿಸಿಬಿ ಟೆಕ್ನಿಕಲ್ ಟೀಂ ಕಲೆಹಾಕಿತ್ತು.
ಇದನ್ನೂ ಓದಿ:“ನನಗೆ ಅದರ ಮೇಲೆ ಯಾವುದೇ ನಿಯಂತ್ರಣವಿಲ್ಲ”: ತನ್ನ ಭಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ ನಟಿ ಹುಮಾ ಖುರೇಷಿ
ನಾಸೀರ್ ಕಾಂಟ್ಯಾಕ್ಟ್ ಮೇಲೆ ಅಬ್ರಾಡ್ ಗೆ ಹೋಗಿದ್ದ ಜುನೈದ್,  ಅಲ್ಲಿಂದ ವಿಧ್ವಂಸಕ ಕೃತ್ಯಕ್ಕೆ ಬೇಕಾದ ಫಂಡ್ ಕಲೆಕ್ಟ್ ಮಾಡುತ್ತಿದ್ದನು.  ಆದರೆ ಇತ್ತ ಸಿಸಿಬಿ ಟೀಮ್​ ಶಂಕಿತರ ಅಕೌಂಟ್‌ಗಳ ಮೇಲೆ ಕಣ್ಣಿಟ್ಟಿತ್ತು. ಅಕೌಂಟ್‌ಗೆ ಫಂಡ್ ಹಾಕಿ ಮೇಜರ್ ಕ್ಯೂ ಕೊಟ್ಟಿದ್ದ ಜುನೈದ್. ಆದರೆ  ಮೇಜರ್ ಲೀಡ್‌ಗಾಗಿ ಸಿನಿಬಿ ಟೀಮ್​​ ಅಕೌಂಟ್ ಮಾನಿಟರ್ ಮಾಡುತ್ತಿದ್ದರು.

ಇದನ್ನೂ ಓದಿ:ಪಾಸ್‌ಪೋರ್ಟ್ ಒಂದಿದ್ದರೆ ಸಾಕು, ವೀಸಾ ಇಲ್ಲದೆ ಯಾವ ದೇಶಗಳಿಗೆ ಪ್ರಯಾಣಿಸಬಹುದು ಗೊತ್ತಾ?
ಜುನೈದ್‌ನಿಂದ ಹಣ ಬಂದಿದ್ದೇ ತಡ ಸಿಸಿಬಿಗೆ ಕನ್ಫರ್ಮ್ ಆಗಿತ್ತು. ನಂತರ ಶಂಕಿತರ ಮುಂದಿನ ನಡೆಗೆಗಾಗಿ ಸಿಸಿಬಿ ಪೊಲೀಸರು ಕಾಯುತ್ತಿದ್ದರು, ವಿಧ್ವಂಸಕ ಕೃತ್ಯದ ಬಗ್ಗೆ ಸಭೆ ನಡೆಸುವಾಗ ದಾಳಿ ನಡೆಸಿ ಬಂಧನ ಮಾಡಲಾಗಿದೆ.
ಈ ಮೂಲಕ ಪೊಲೀಸರು ದೊಡ್ಡ ಭಯೋತ್ಪಾದಕ ಸಂಚನ್ನು ತಪ್ಪಿಸಿದ್ದು, ಸೈಯದ್ ಸುಹೇಲ್, ಉಮರ್, ಜುನೈದ್, ಮುದಾಸಿರ್ ಮತ್ತು ಜಾಹಿದ್ ಎಂಬುವವರನ್ನು ಬಂಧಿಸಿದ್ದಾರೆ. ಈ ಆರೋಪಿಗಳಿಂದ ಸ್ಪೋಟಕ ವಸ್ತುಗಳು, 4 ವಾಕಿಟಾಕಿ, 7 ಕಂಟ್ರಿ ಮೇಡ್ ಪಿಸ್ತೂಲ್, 42 ಸಜೀವ ಗುಂಡುಗಳು, ಮದ್ದುಗುಂಡು, 2 ಡ್ರ್ಯಾಗರ್, 2 ಸೆಟಲೈಟ್ ಫೋನ್ ಹಾಗೂ 4 ಗ್ರೆನೈಡ್​​ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ಸಿಟಿಯನ್ನು ಟಾರ್ಗೆಟ್ ಮಾಡಿದ್ದ ಶಂಕಿತ ಉಗ್ರರು, ವಿದ್ವಂಸಕ ಕೃತ್ಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದಿದ್ದರು. ಅಲ್ಲದೇ. ಬೆಂಗಳೂರಿನಲ್ಲಿ ಎಲ್ಲೆಲ್ಲಿ, ಏನು, ಹೇಗೆಲ್ಲಾ ಸ್ಫೋಟಿಸಬೇಕು ಎನ್ನುವುದರ ಬಗ್ಗೆ ಟ್ರೈನಿಂಗ್ ಪಡೆದಿದ್ದ ಶಂಕಿತರು, ಸುಮಾರು ಹತ್ತು ಕಡೆ ಬ್ಲಾಸ್ಟಿಂಗ್​​ಗೆ ಪ್ಲಾನ್ ಮಾಡಿದ್ದರು. ಎಲ್ಲಾ ಕಡೆಯೂ ಆ್ಯಕ್ಟೀವ್ ಆಗಿದ್ದ ಶಂಕಿತರ ಟೀಂ, ಎಲ್ಲಾ ಪ್ಲಾನ್ ಮಾಡಿಕೊಂಡು ಅದನ್ನು ಕಾರ್ಯಗತಗೊಳಿಸಲು ಕಾಯುತ್ತಿದ್ದರು ಎಂದು ಹೇಳಲಾಗಿದೆ.
ವಿದೇಶಿ ಯುವತಿಯರಿಗೆ ಭಾರತೀಯ ಯುವಕರ ಮೇಲೆ ಮನಸ್ಸು; ಮದುವೆಯಾಗಿ ಯುವಕನನ್ನು ಬಾಂಗ್ಲಾದೇಶಕ್ಕೆ ಕರೆದುಕೊಂಡು ಹೋದ್ಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 14 =
Remember me
