ಬೆಂಗಳೂರು:ಊರಿಗೆ ಹೋದ ನನ್ನ ಗಂಡ ಮರಳಿ ಬಂದಿಲ್ಲ. ನಾಪತ್ತೆಯಾಗಿರುವ ಅವರನ್ನು ಹುಡುಕಿಕೊಡಿ ಎಂದು ಯುವತಿಯೊಬ್ಬಳು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ಇದಕ್ಕೆಲ್ಲ ಕಾರಣ ಪತಿಯ ಪಾಲಕರು ಎಂದು ಆರೋಪಿಸಿದ್ದಾಳೆ.
ಪತಿಯನ್ನು ಹುಡುಕಿಕೊಡುವಂತೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ನಂದಗುಡಿ ಪೊಲೀಸ್ ಠಾಣೆ ಎದುರು ಯುವತಿ ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದಾಳೆ.
ಇದನ್ನೂ ಓದಿರಿ:ಕಹಳೆ ಊದಿದ ಕೋಟಿಗೊಬ್ಬ: ಮಾರ್ಚ್​ 15 ರಿಂದ ಪ್ರಚಾರ ಪ್ರಾರಂಭ

ಹೊಸಕೋಟೆ ತಾಲೂಕಿನ ಎತ್ತಿನೊಡೆಯಪುರ ಗ್ರಾಮದ ಯುವತಿ ಅನುಜಾ ಅದೇ ಗ್ರಾಮದ ಸಿಆರ್​ಪಿಎಫ್​ ಪೇದೆ ಪ್ರಮೋದ್ ಇಬ್ಬರು ಕಳೆದ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಆದರೆ ಇಬ್ಬರ ಪ್ರೀತಿಗೆ ಪ್ರಮೋದ್​ ಪಾಲಕರಿಂದ ಒಪ್ಪಿಗೆ ಇರಲಿಲ್ಲವಂತೆ. ಆದಾಗ್ಯು ಇದೇ ಫೆಬ್ರವರಿ 19 ರಂದು ಅನುಜಾ ಜತೆ ಯಲಹಂಕದ ಸಿಆರ್​ಪಿಎಫ್​ ಕ್ಯಾಂಪಸ್​ನಲ್ಲೇ ಪ್ರಮೋದ್ ತಾಳಿಕಟ್ಟಿ ಮದುವೆಯಾಗಿದ್ದಾನೆ.
ಮದುವೆಯಾದ ಮಾರನೇ ದಿನ ತಾಯಿಗೆ ಹುಷಾರಿಲ್ಲ ಎಂದು ಹೇಳಿ ಪ್ರಮೋದ್ ತಂದೆ ಮತ್ತು ಸಹೋದರ ಆತನನ್ನು ಕರೆದೊಯ್ದಿದರು. ಆದರೆ, ಇದುವರೆಗೂ ಪತ್ತೆಯಾಗಿಲ್ಲ. ಫೋನ್​ ಮಾಡಿದ್ರೆ ಪ್ರಮೋದ್​ ಪಾಲರು ರಿಸೀವ್​ ಮಾಡಿ ಅವಾಚ್ಯ ಪದಗಳಿಂದ ನಿಂದಿಸುತ್ತಾರೆಂದು ಅನುಜಾ ದೂರಿದ್ದಾರೆ.
ಇದರಿಂದ ನೊಂದಿರುವ ಅನುಜಾ ಬುಧವಾರ ರಾತ್ರಿ ನಂದಗುಡಿ ಪೊಲೀಸ್ ಠಾಣೆ ಮುಂದೆ ಪೋಷಕರ ಜತೆಗೂಡಿ ಪ್ರತಿಭಟನೆ ನಡೆಸಿದ್ದಾಳೆ. ಜತೆಗೆ ಮತ್ತೊಬ್ಬಳ ಜತೆ ವಿವಾಹಕ್ಕೆ ಸಿದ್ಧತೆ ಆರೋಪ ಮಾಡಿರುವ ಯುವತಿ, ಇದರಲ್ಲಿ ನನ್ನ ಗಂಡನದ್ದು ಯಾವುದೇ ತಪ್ಪಿಲ್ಲ. ಎಲ್ಲ ಅವರ ಪಾಲಕರದ್ದೇ ಕೈವಾಡ. ನನಗೆ ನ್ಯಾಯ ಕೊಡಿಸಿ ಎಂದು ಒತ್ತಾಯಿಸಿದ್ದಾಳೆ.

ಇದನ್ನೂ ಓದಿರಿ:ಇಂದು ಕಿಡ್ನಿ ದಿನ: ಮೂತ್ರಪಿಂಡ ನಿರ್ಲಕ್ಷಿಸಿದರೆ ತೆರಬೇಕಾದೀತು ಭಾರಿ ದಂಡ!
ಅಲ್ಲದೆ ಈ ಬಗ್ಗೆ ದೂರು ನೀಡಿ ಎರಡು ತಿಂಗಳಾಗುತ್ತಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅನುಜಾ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯರಾತ್ರಿ ಪ್ರತಿಭಟನೆ ನಡೆಸಿದ ಅನುಜಾಳಿಗೆ ಪತಿಯನ್ನು ಹುಡುಕಿಕೊಡುವುದಾಗಿ‌ ಭರವಸೆ ನೀಡಿ ಪೊಲೀಸರು ಕಳಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಗುಜರಾತ್​​ ಬಳಿಕ ಭಾರತದಲ್ಲಿ 2ನೇ ಬಾರಿಗೆ ಪತ್ತೆಯಾಯ್ತು ನಿಗೂಢ ಏಕಶಿಲೆ..!

ಹಿಂದು ಬಾಲಕಿಯನ್ನು ಎಳೆದೊಯ್ದು ಮತಾಂತರ ಮಾಡಿ ಮದ್ವೆಯಾದ ಪಾಕ್​ ವ್ಯಕ್ತಿ: ಆದ್ರೆ ಸಂತ್ರಸ್ತೆ ಹೇಳಿದ್ದೇ ಬೇರೆ!

ಅಮೆರಿಕಕ್ಕೆ ಸೈಬರ್ ಶಾಕ್! ವಿಶ್ವಕ್ಕೇ ಎಚ್ಚರಿಕೆ ಗಂಟೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 1 =
Remember me
