ಬೆಂಗಳೂರು:ಪಾನಮತ್ತ ಯುವತಿಯೊಬ್ಬಳು ದ್ವಿಚಕ್ರ ವಾಹನದಲ್ಲಿ ಹಿಮ್ಮುಖವಾಗಿ ಕುಳಿತು ತುಂಟಾಟ ಮೆರೆದಿದ್ದಲ್ಲದೆ, ಸಂಚಾರ ನಿಯಮವನ್ನು ಉಲ್ಲಂಘಿಸಿದ ಘಟನೆ ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಿಡಿಯೋದಲ್ಲಿ ಸ್ಕೂಟಿಯಲ್ಲಿ ಹಿಮ್ಮುಖವಾಗಿ ಕುಳಿತ ಯುವತಿ ಮತ್ತು ಸ್ಕೂಟರ್​ ಸವಾರಿ ಮಾಡುತ್ತಿದ್ದ ಯುವತಿ ಹೆಲ್ಮೆಟ್​ ಧರಿಸಿದೇ, ಸಿಟಿಯ ಪ್ರಮುಖ‌ ರಸ್ತೆಗಳಲ್ಲಿ ಅಡ್ಡಾದಿಡ್ಡಿಯಾಗಿ ಸ್ಕೂಟರ್​ ಚಲಾಯಿಸಿದ್ದಾರೆ.
ಕೇರಳ ನೋಂದಣಿಯ ಸ್ಕೂಟರ್​ನಲ್ಲಿ ಕೈ-ಕಾಲುಗಳನ್ನು ಆಡಿಸುತ್ತಾ, ಮತ್ತಿನಲ್ಲಿ ಎಂಜಾಯ್​ ಮಾಡುತ್ತಾ, ಅಪಾಯಕಾರಿಯಾಗಿ ಸ್ಕೂಟರ್​ ಚಲಾಯಿಸಿದ್ದಾರೆ. ಎಲೆಕ್ಟ್ರಾನಿಕ್ಸ್ ಸಿಟಿ ಕೈಗಾರಿಕಾ ಪ್ರದೇಶ ಮತ್ತು ನಿಲಾದ್ರಿ ನಗರದಲ್ಲಿ ಇಬ್ಬರು ಓಡಾಡಿದ್ದಾರೆ. ಯುವತಿಯರಿಬ್ಬರ ತುಂಟಾಟವನ್ನು ಸ್ಥಳೀಯರು ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.(ದಿಗ್ವಿಜಯ ನ್ಯೂಸ್​)
ಭಾರತ್​ ಜೋಡೋ ಯಾತ್ರೆಗೆ ದೀಪಾವಳಿ ಬ್ರೇಕ್: ತೆಲಂಗಾಣದಿಂದ ದೆಹಲಿಗೆ ತೆರಳಿದ ರಾಹುಲ್ ಗಾಂಧಿ

ಸಚಿವರ ಫೋಟೋ ಇಟ್ಕೊಂಡು ಪೂಜೆ ಮಾಡ್ತೀನಿ: ವಿ. ಸೋಮಣ್ಣರ ಕಪಾಳಮೋಕ್ಷ ವಿವಾದಕ್ಕೆ ಸ್ಪಷ್ಟನೆ ಕೊಟ್ಟ ಮಹಿಳೆ

ಚುನಾಯಿತ ಸದಸ್ಯರಿಗೆ ಸಿಕ್ಕಿತು ಬಂಪರ್ ಗಿಫ್ಟ್; ಇದು ಸಚಿವರು ನೀಡಿದ ದೀಪಾವಳಿ ಉಡುಗೊರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
