ಬೆಂಗಳೂರು:ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್​ ರೂಪಿಸಿರುವ ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆಗೆ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಇಂದು (ಅ.27) ಸಾಂಕೇತಿಕವಾಗಿ ಚಾಲನೆ ನೀಡಿದರು.
ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಿಎಂ ಎಚ್​​ಡಿಕೆ, ಗವಿಗಂಗಾಧರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿ ಪಂಚರತ್ನ ರಥಯಾತ್ರೆಗೆ ಚಾಲನೆ ನೀಡಿದ್ದೇವೆ. 1994ರಲ್ಲಿ ದೇವೆಗೌಡರ ನೇತೃತ್ವದಲ್ಲಿ ನಡೆದ ಚುನಾವಣೆಗೂ ಮೊದಲು ಇಲ್ಲೇ ಪೂಜೆ ನೆರವೇರಿಸಲಾಗಿತ್ತು. ನವೆಂಬರ್ 1ರಿಂದ ಪಂಚರತ್ನ ರಥಯಾತ್ರೆ ಆರಂಭ ಮಾಡಲು ಚಿಂತಿಸಿದ್ದೆ. ಆದರೆ, ಇಂದು ಪ್ರಶಸ್ತವಾದ ದಿನವಾದ್ದರಿಂದ ಇಂದೇ ಚಾಲನೆ ನೀಡಿದ್ದೇವೇ ಎಂದರು.
ನವೆಂಬರ್ 1ರಂದು ಕೋಲಾರದಲ್ಲಿ ಕಾರ್ಯಕ್ರಮನಾಳೆ ಅಣ್ಣಮ್ಮ ದೇವಸ್ಥಾನದಲ್ಲಿ ಪೂಜೆ ಮಾಡಿ ಎರಡನೇ ದಿನ ಕಾರ್ಯಕ್ರಮ ಮಾಡಲಿದ್ದೇವೆ. ನವೆಂಬರ್ 1ರಂದು ಕೋಲಾರದಲ್ಲಿ ಕಾರ್ಯಕ್ರಮ ಮಾಡಲಿದ್ದೇವೆ. ಇದು ನನ್ನ ಕನಸಿನ ಕಾರ್ಯಕ್ರಮವಾಗಿದೆ. ಪಂಚರತ್ನ ಕಾರ್ಯಕ್ರಮ ನಾಡಿನ ಜನತೆಗೆ ಪೂರಕವಾದ ಕಾರ್ಯಕ್ರಮವಾಗಿದ್ದು, ನಾಡಿನ ಜನತೆಯ ಅಭಿವೃದ್ಧಿ ಮಾಡೋದು ಹೇಗೆ ಅಂತ ತೋರಿಸುವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.
ತಂದೆಗೆ ಮರುಜನ್ಮ ನೀಡಿದ ದೇವರು ಶಿವಚಾಮುಂಡೇಶ್ವರಿ ಸನ್ನಿಧಿಯಲ್ಲಿ ಏಕೆ ಚಾಲನೆ ನೀಡಿಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಎಚ್​ಡಿಕೆ, ಕಳೆದ ಗುರುವಾರ ನಮ್ಮ ಪಕ್ಷದ 126 ಸಂಭವನೀಯ ಅಭ್ಯರ್ಥಿಗಳ ಜತೆಗೆ ನಾಡದೇವತೆ ಚಾಮುಂಡಿ ದೇವಿಗೆ ಪೂಜೆ ಮಾಡಿದ್ದೇವೆ. ನಾನು ನಂಬುವ ದೇವತೆ ನಾಡದೇವೆತೆ ಚಾಮುಂಡೇಶ್ವರಿ. ಆದರೆ, ನಮ್ಮ ತಂದೆ ಶಿವನನ್ನು ಪೂಜಿಸುತ್ತಾರೆ. ನಮ್ಮ ತಂದೆಗೆ ಮರುಜನ್ಮ ನೀಡಿದ ದೇವರು ಶಿವ. ಹೀಗಾಗಿ ಶಿವನ ಸನ್ನಿಧಾನದಿಂದಲೇ ಯಾತ್ರೆ ಆರಂಭಿಸುತ್ತಿದ್ದೇವೆ ಎಂದು ಹೇಳಿದರು.
ಈಗ ಜ್ಞಾನೋದಯ ಆಯ್ತಾ ನಿಮಗೆ?2018 ರಲ್ಲಿ ಸಾಲಮನ್ನಾ ಯೋಜನೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಲಘುವಾಗಿ ಪರಿಗಣಿಸಿದರು. ಆದರೂ ನಾನು ಸಾಲಮನ್ನಾ ಮಾಡಿ, ಕೊಟ್ಟ ಮಾತನ್ನು ಉಳಿಸಿಕೊಂಡೆ. ಅದೇ ರೀತಿ ಈ ಐದು ಕಾರ್ಯಕ್ರಮಗಳಲ್ಲೂ ನಾನು ಯಶಸ್ವಿಯಾಗುತ್ತೇನೆ ಎಂದರು. ಇದೇ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ, ಮಹದಾಯಿ ಯೋಜನೆಗಾಗಿ ಕಾಂಗ್ರೆಸ್‌ನಿಂದ ಟ್ರ್ಯಾಕ್ಟರ್ ರ್ಯಾಲಿ ವಿಚಾರವಾಗಿ ಪ್ರತಿಕ್ರಿಯಿಸಿ, ಐದು ವರ್ಷ ನಿಮ್ಮ ಕೈಯಲ್ಲೇ ಅಧಿಕಾರ ಇತ್ತು. ಆ ಐದು ವರ್ಷಗಳಲ್ಲಿ ಈ ಯೋಜನೆಗಳಿಗೆ ನೀವು ಕೊಟ್ಟಿದದ್ದೇನು? ಈಗ ಜ್ಞಾನೋದಯ ಆಯ್ತಾ ನಿಮಗೆ ಎಂದು ಎಚ್​ಡಿಕೆ ಪ್ರಶ್ನಿಸಿದರು.
ಮೋದಿಯವರು ಯಾಕೆ ಜಾಣ ಮೌನ ತಾಳಿದ್ದಾರೆತೆಲಂಗಾಣದಲ್ಲಿ ಆಪರೇಷನ್ ಕಮಲ ವಿಚಾರವಾಗಿ ಮಾತನಾಡಿದ ಎಚ್​ಡಿಕೆ, ಇದರಲ್ಲಿ ನನಗೆ ಆಶ್ಚರ್ಯ ಏನೂ ಇಲ್ಲ. ಪಾಪಾದ ಹಣ ಇಟ್ಟುಕೊಂಡು ಕರ್ನಾಟಕದಲ್ಲಿ ಆಪರೇಷನ್​ ಕಮಲ ಮಾಡಿದರು. ಪಾಪದ ಹಣದಲ್ಲಿ ಬೇರೆ ಬೇರೆ ರಾಜ್ಯದಲ್ಲೂ ಮಾಡಿ ಯಶಸ್ವಿಯಾಗಿದ್ದಾರೆ. ತೆಲಂಗಾಣದಲ್ಲಿ ಅಷ್ಟು ಸುಲಭವಾಗಿ ಅಕ್ರಮ ಹಣದಿಂದ ಸರ್ಕಾರ ಅಸ್ಥಿರಗೊಳಿಸುವುದು ಅಸಾಧ್ಯ. ಇವತ್ತು ನೇರವಾಗಿ 17 ಕೋಟಿ ಹಣದೊಂದಿಗೆ ಸಿಕ್ಕಿಬಿದ್ದಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿಯವರು ಯಾಕೆ ಜಾಣ ಮೌನ ತಾಳಿದ್ದಾರೆ. ಪ್ರಧಾನಿ ಹಾಗೂ ಇಡಿಯವರು ಇದಕ್ಕೆ ಉತ್ತರ ಕೊಡಬೇಕಿದೆ. ಈ ಹಣ ಎಲ್ಲಿಂದ? ಹೇಗೆ ಬಂತು? ಹೇಳಬೇಕು ಎಂದು ಒತ್ತಾಯಿಸಿದರು.
ಅವರ ಮುಂದೆ ಯಾವುದೇ ಗಂಡಸು ಇಲ್ಲಕುಮಾರಸ್ವಾಮಿಯವರು ಸಿಎಂ ಆಗಿದ್ದ ಸಂದರ್ಭದಲ್ಲಿ ಮೀಸಲಾತಿ ನೀಡಲಿಲ್ಲ. ಗಂಡೆದೆಯ ಸಿಎಂ ಬೊಮ್ಮಾಯಿಯವರು ಎಸ್ಸಿ ಮತ್ತು ಎಸ್ಟಿಗೆ ಮೀಸಲಾತಿಯನ್ನು ನೀಡಿದ್ದಾರೆ ಎಂಬ ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್​ಡಿಕೆ, ಇದು ಚುನಾವಣೆ ಸ್ಟಂಟ್. ಇದು ಎಷ್ಟು ಫಲಪ್ರದ ಆಗಲಿದೆ ಎಂದು ಮುಂದೆ ನೋಡಬೇಕು. ಇಡೀ ನಾಯಕ ಸಮುದಾಯಕ್ಕೆ ಮೀಸಲಾತಿಯನ್ನು ಕೊಟ್ಟವರು ದೇವೆಗೌಡರು. ಅವರ ಮುಂದೆ ಇವರಾರು ಸಾಟಿಯಾಗಲು ಸಾಧ್ಯವಿಲ್ಲ. ಅವರ ಮುಂದೆ ಯಾವುದೇ ಗಂಡಸು ಇಲ್ಲ. ಗಂಡೆದೆ ಮುಖ್ಯಮಂತ್ರಿ ಎಂದು ಬರಿ ಬಾಯಲ್ಲಿ ಹೇಳಿದ್ರೆ ಆಗೊಲ್ಲ, ಎರಡು ವರ್ಷದ ಹಿಂದೆ ಮಾಡಿದ್ರೆ ಹೇಳಬಹುದಿತ್ತು. ಚುನಾವಣೆ ಸಮಯ ಬಂದಾಗ ಇದನ್ನು ಮಾಡಿದ್ದಾರೆ. ಹಾಗಾದರೆ ನಾಯಕ ಸಮುದಾಯದ ಸ್ವಾಮಿಜಿಯವರನ್ನು 250 ದಿನ ಏಕೆ ಕೂರಿಸಬೇಕಿತ್ತು. ಸ್ವಾಮಿಜಿಯವರಿಗೆ ಶ್ರಮ ಕೊಟ್ಟು ಗಂಡೆದೆ ಸಿಎಂ 250 ದಿನ ತೆಗೆದುಕೊಳ್ಳಬೇಕಿತ್ತಾ? ವಿಪಕ್ಷಗಳು ಸಹಕಾರ ಕೊಟ್ಟಿದ್ದಕ್ಕೆ ಮೀಸಲಾತಿ ಕೊಡಲು ಆಗಿದ್ದು. ನಮ್ಮ ಸಹಮತ ಇದ್ದಿದ್ದರಿಂದಲೇ ಗಂಡೆದೆ ಹೊರಬಂದಿದೆ, ಇಲ್ಲದೆ ಗಂಡೆದೆ ಹೆಣ್ಣೆದೆ ಆಗಿರ್ತಿತ್ತು. ನಾನು ಹೆಣ್ಣು ಮಕ್ಕಳ ಬಗ್ಗೆ ಲಘುವಾಗಿ ಮಾತಾಡಲ್ಲ. ನಮ್ಮ ನಾಡಿನಲ್ಲಿ ಹೆಣ್ಣು ಮಕ್ಕಳು ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.
ಈ ಬಾರಿ ಜನ ನಮಗೆ ಒಂದು ಅವಕಾಶ ಕೊಡಿಎರಡು ರಾಷ್ಟ್ರೀಯ ಪಕ್ಷಗಳ ಪಾಪದ ಕೊಡ ತುಂಬಿದೆ. ಈ ಬಾರಿ ಜನತೆ ಜೆಡಿಎಸ್‌ ಪರ ಒಲವನ್ನ ಹೊಂದಿದ್ದಾರೆ. ಇವರ ಭಾರತ್ ಜೊಡೊ ಯಾತ್ರೆ, ಬಿಜೆಪಿಯವರ ಜನಸಂಕಲ್ಪ ಯಾತ್ರೆಯನ್ನು ಜನ ನೋಡಿದ್ದಾರೆ. ಈ ಬಾರಿ ಜನ ನಮಗೆ ಒಂದು ಅವಕಾಶ ಕೊಡಬೇಕು. ನಾಡಿನ ಜನತೆಗೆ ನಾವು ಏನು ಕೊಡ್ತೇವೆ ಎಂದು ನೋಡಿ. ಪಂಚರತ್ನ ಕಾರ್ಯಕ್ರಮದ ಮೂಲಕ, ಉಚಿತ ಶಿಕ್ಷಣ, ಆರೋಗ್ಯ, ಉದ್ಯೋಗ ಕಾರ್ಯಕ್ರಮ ನೀಡ್ತೇವೆ. ಮಕ್ಕಳಿಗೆ ಕನ್ನಡದ ಜೊತೆಗೆ ಆಂಗ್ಲ ಮಾಧ್ಯಮ ಶಿಕ್ಷಣವನ್ನು ನೀಡ್ತೇವೆ ಎಂದು ಎಚ್​ಡಿಕೆ ಭರವಸೆ ನೀಡಿದರು.
ಭಾರತ್ ಜೋಡೋ ಯಾತ್ರೆಯಿಂದ ಜನರ ಸಮಸ್ಯೆ ಅರಿಯಲು ಆಗುವುದಿಲ್ಲ. ಈಗೇನೋ ಪಟ್ಟಿ ಮಾಡ್ತಿದ್ದಾರಂತೆ ಕಾಂಗ್ರೆಸ್‌ನ ನಾಯಕರು. ಅದೇನೊ ಪಟ್ಟಿ ಮಾಡ್ತಾರೋ ನೋಡೋಣ. ತಳಮಟ್ಟದ ಜನರಿಗೆ ಕಾರ್ಯಕ್ರಮ ರೂಪಿಸಬೇಕು. ಯಾವುದೊ ಪ್ಲೈ ಓವರ್ ಮಾಡಿದ್ರೆ ಅಭಿವೃದ್ಧಿ ಆಗುವುದಿಲ್ಲ. ಜನರ ಸಮಸ್ಯೆಗೆ ಪರಿಹಾರವನ್ನ ಒದಗಿಸಬೇಕೆಂದ ಎಚ್​ಡಿಕೆ, ಎರಡು ಪಕ್ಷಗಳಿಗೂ ಅವಕಾಶ ನೀಡಿದ್ದೀರಾ, ಈ ಒಂದು ಬಾರಿ ನಮಗೆ ಬಹುಮತ ನೀಡಿ ಅಧಿಕಾರ ಕೊಡಿ, ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡ್ತೇವೆ ಎಂದು ಹೇಳಿದರು.
ಒಂದು ಮಹತ್ವದ ಕಾರ್ಯಕ್ರಮವಾಗಿದೆಇಂದು ಗವಿಗಂಗಾಧರ ಸ್ವಾಮಿಗೆ ಪೂಜೆ ಸಲ್ಲಿಸಲಾಗಿದೆ. ಪವಿತ್ರ ದಿನ ಅಂತ ಇಂದು ಚಾಲನೆ ಕೊಡಲಾಗಿದೆ. ಪಂಚರತ್ನ ಕಾರ್ಯಕ್ರಮ ಒಂದು ಮಹತ್ವದ ಕಾರ್ಯಕ್ರಮವಾಗಿದೆ. ಬಡವ ಶ್ರೀಮಂತ ಅಂತ ತಾರತಮ್ಯ ಇಲ್ಲದೆ ಅತ್ಯಾಧುನಿಕ ಶಿಕ್ಷಣ ಕೊಡಿಸಬೇಕು. ಗ್ರಾಮ ಪಂಚಾಯ್ತಿ, ಪ್ರತಿ ವಾರ್ಡ್​ನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಂತೆ ಸರ್ಕಾರ ಶಿಕ್ಷಣ ಕೊಡಬೇಕು. ಉಚಿತ ಶಿಕ್ಷಣ ನೀಡುವ ಕಾರ್ಯಕ್ರಮ ಇದಾಗಿದೆ. ಕರೊನಾ ಸಮಯದಲ್ಲಿ ಶಾಲೆ ನಡೆಯದೇ ಇದ್ದರೂ ಖಾಸಗಿ ಶಿಕ್ಷಣ ಸಂಸ್ಥೆಯವರು ಫೀಸ್ ಕಟ್ಟಲೇ ಬೇಕು ಅಂತ ಒತ್ತಡ ಹಾಕಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಈ ರೀತಿ ಕಾರ್ಯಕ್ರಮ ರೂಪಿಸಲಾಗಿದೆ. ಅತ್ಯುತ್ತಮ ಶಿಕ್ಷಣ ನೀಡಲು ಈ ಯೋಜನೆ ರೂಪಿಸಲಾಗಿದೆ. ಮಕ್ಕಳಿಗೆ ಇಂಗ್ಲಿಷ್ ಕೂಡ ಅನಿವಾರ್ಯ. ವೃತ್ತಿ ಬದುಕಿಗೆ ಇದು ಅನುವಾರ್ಯವಾಗಿದ್ದು, ಸರ್ಕಾರದಿಂದ ಆಂಗ್ಲ ಮಾಧ್ಯಮವನ್ನು ಶುರು ಮಾಡಲಾಗುವುದು ಎಂದರು.
ಆರೋಗ್ಯ ವಿಚಾರವಾಗಿ ಎಲ್ಲರಿಗೂ ಉಚಿತ ಚಿಕಿತ್ಸೆ ಸಿಗಬೇಕು. ಕಾನ್ಸರ್, ಡಯಾಲಿಸಿಸ್​ಗೆ ಲಕ್ಷಾಂತರ ಹಣ ಕಟ್ಟಬೇಕಿದೆ. ಕರೊನಾ ಸಮಯದಲ್ಲಿ ಎಷ್ಟು ಸಾವು-ನೋವು ಆಗಿರೋದನ್ನು ನೋಡಿದ್ದೇವೆ. 6000 ಗ್ರಾಮ ಪಂಚಾಯ್ತಿಯಲ್ಲಿ ದೊಡ್ಡ ಆಸ್ಪತ್ರೆ ಕಟ್ಟಬೇಕು. ಪ್ರತಿ ಆಸ್ಪತ್ರೆಯಲ್ಲಿ ವೈದ್ಯರು, ಲ್ಯಾಬ್ ಹೀಗೆ ಎಲ್ಲವೂ ಇರಬೇಕು. ಖಾಸಗಿ ಆಸ್ಪತ್ರೆಯಲ್ಲಿ ಹೊರಗಡೆ ಹೋಗಿ ಎಕ್ಸರೇ ತೆಗೆಸಿ ಅಂತಾರೆ. ಇದು ಬಡವರಿಗೆ ಸಾಧ್ಯವಿಲ್ಲ. ಆರೋಗ್ಯದ ವಿಮೆ ಸರ್ಕಾರವೇ ಮಾಡಬೇಕು. ಗ್ರಾಮ ಮಟ್ಟದಲ್ಲಿ ಹೆರಿಗೆಗೆ ತಕ್ಷಣಕ್ಕೆ ಬೇಕಾದ ಸೌಲಭ್ಯ ಸಿಗಬೇಕು ಎಂದು ತಮ್ಮ ಕನಸಿನ ಯಾತ್ರೆಯ ಉದ್ದೇಶಗಳ ಬಗ್ಗೆ ಎಚ್​ಡಿಕೆ ವಿವರಣೆ ನೀಡಿದರು.(ದಿಗ್ವಿಜಯ ನ್ಯೂಸ್​)
ನವಾಜ್​ ಎಸೆದ ವೈಡ್​ ಬಾಲ್​ ಸ್ಪಿನ್​ ಆಗಿ ಪ್ಯಾಡ್​ಗೆ ಬಡಿದಿದ್ರೆ ಏನ್​ ಮಾಡ್ತಿದ್ರಿ? ಅಚ್ಚರಿಯ ಉತ್ತರ ಕೊಟ್ಟ ಅಶ್ವಿನ್

ಪರಸ್ತ್ರಿಗಾಗಿ ಪತ್ನಿಯ ಮೇಲೆಯೇ ಕಾರು ಹರಿಸಿದ ಬಾಲಿವುಡ್​ ನಿರ್ಮಾಪಕನ ವಿರುದ್ಧ ದೂರು ದಾಖಲು

ತೆಲಂಗಾಣದ TRS ಸರ್ಕಾರ ಉರುಳಿಸುವ ಯತ್ನ: ಶಾಸಕರಿಗೆ 100 ಕೋಟಿ ರೂ. ಆಫರ್​, ಸಿಕ್ಕಿಬಿದ್ದ ನಾಲ್ವರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
