ಬೆಂಗಳೂರು:ಕರೊನಾ ಸೋಂಕಿನ ನಾಗಾಲೋಟ ಮುಂದುವರಿದ ಹಿನ್ನೆಲೆಯಲ್ಲಿ ‘ಬೆಂಗಳೂರಿನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ’ಯಿದೆ ಎಂದು ಸರ್ಕಾರ ವ್ಯಾಖ್ಯಾನಿಸಿದ್ದು, ಇಂದು ಎರಡು ಮಹತ್ವದ ಆದೇಶಗಳನ್ನು ಹೊರಡಿಸಲಿದೆ.
ಮೈಸೂರಿಗೆ ತೆರಳುವ ಮುನ್ನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ನಿರ್ದೇಶನದಂತೆ ಎರಡು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಮೈಸೂರಿನಿಂದ ವಾಪಸ್ಸಾದ ಬಳಿಕ ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಮುಖ್ಯಸ್ಥರ ಜತೆಗೆ ಮಹತ್ವದ ಚರ್ಚೆ ನಡೆಸಲಿರುವೆ ಎಂದರು.
ನಿರ್ಧಾರ-1ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಗಳಡಿ ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಬೆಂಗಳೂರಿ 13 ವೈದ್ಯಕೀಯ ವಿಜ್ಞಾನಗಳ ಕಾಲೇಜುಗಳ ಹಾಸಿಗೆಗಳನ್ನು ಸರ್ಕಾರದ ಸುಪರ್ದಿಗೆ ಪಡೆದು ಕರೊನಾ ಸೋಂಕಿತರ ಚಿಕಿತ್ಸೆಗೆ ಮೀಸಲಿರಿಸುವುದು.
ಈ ಕಾಲೇಜುಗಳ ಡಯಾಲಿಸಿಸ್, ತುರ್ತು ಆರೋಗ್ಯ ಪರಿಸ್ಥಿತಿ, ತಾಯಿ-ಮಗುವಿನ ಹಾಸಿಗೆಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂದರೆ 7,500 ಹಾಸಿಗೆಗಳು ಸೋಂಕಿತರ ಚಿಕಿತ್ಸೆಗೆ ಲಭ್ಯವಾಗಲಿವೆ ಎಂದು ಸುಧಾಕರ್ ಹೇಳಿದರು.
ನಿರ್ಧಾರ-2ರಾಜಧಾನಿಯಲ್ಲಿರುವ 30 ಹಾಸಿಗೆಗಳುಳ್ಳ ನರ್ಸಿಂಗ್ ಹೋಮ್ ಮತ್ತು ಆಸ್ಪತ್ರೆಗಳನ್ನು ಸಂಪೂರ್ಣವಾಗಿ ಕರೋನೇತರ ರೋಗಿಗಳ ಚಿಕಿತ್ಸೆಗೆ ಮೀಸಲಿರಿಸುವುದು ಕಡ್ಡಾಯ.
30 ಹಾಸಿಗೆಗಳು ಮೇಲ್ಪಟ್ಟಿರುವ ಖಾಸಗಿ ಆಸ್ಪತ್ರೆಗಳ ಒಟ್ಟು ಹಾಸಿಗೆಗಳ ಸಾಮರ್ಥ್ಯದ ಶೇ.80ರಷ್ಟು ಮೀಸಲಿರಿಸಬೇಕು. ಈ ಹಿಂದೆ ಶೇ.50 ಇದ್ದುದನ್ನು ಶೇ.80ಕ್ಕೆ ಏರಿಸಲಾಗಿದೆ.
ಸಾಮಾನ್ಯ, ಐಸಿಯು, ವೆಂಟಿಲೇಟರ್, ಆಕ್ಸಿಜನೇಟೆಡ್ ಒಳಗೊಂಡು ಎಲ್ಲ ವಿಧದ ಹಾಸಿಗೆಗಳು ಶೇ.80ರ ಅನುಪಾತದಲ್ಲಿ ಸೋಂಕಿತರ ಚಿಕಿತ್ಸೆಗೆ ಮೀಸಲು. ಈ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.
ಬಿಎಲ್ ಡಿಇ ಮಾದರಿಮಾಜಿ ಸಚಿವ ಎಂ.ಬಿ.ಪಾಟೀಲ್ ನೇತೃತ್ವದ ವಿಜಯಪುರದ ಬಿಎಲ್ ಡಿಇ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಐಸಿಯು, ಆಕ್ಸಿಜನ್ ಬೆಡ್ ಗಳನ್ನು ದ್ವಿಗುಣಗೊಳಿಸಿದೆ. ಸೋಂಕಿತರ ಚಿಕಿತ್ಸೆ ವೆಚ್ಚ ಭರಿಸಲೆಂದು ಸರ್ಕಾರದ ಟ್ರಸ್ಟ್ ನಿಂದ ತಲಾ 10,000 ರೂ ಭರಿಸಲಾಗುವುದು ಎಂದು ಹೇಳಿದರೂ 3,000 ರೂ ಕೊಡಿ ಸಾಕು ಎಂದು ಎಂ.ಬಿ.ಪಾಟೀಲ್ ಹೇಳುವ ಮೂಲಕ ಮಾದರಿ ಹಾಕಿಕೊಟ್ಟಿದ್ದಾರೆ. ಈ ಸಂಸ್ಥೆಗೆ ಅಗತ್ಯಕ್ಕೆ ಅನುಸಾರ‌ 1,000 ರೆಮ್ ಡಿಸಿವಿರ್ ಚುಚ್ಚುಮದ್ದು ವಯಲ್ಸ್ ಗಳನ್ನು ರವಾನಿಸಲಾಗಿದೆ ಎಂದು ಡಾ.ಕೆ.ಸುಧಾಕರ್ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 6 =
Remember me
