ಬೆಂಗಳೂರು:ಫರ್ನೀಚರ್ ತುಂಬಿದ್ದ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದಿದ್ದು 12 ಮಂದಿ ಅದೃಷ್ಟವಶಾತ್​ ಪಾರಾಗಿದ್ದಾರೆ. ಅವಘಡ ತಡರಾತ್ರಿ 2.30ಕ್ಕೆ ಹೆಗಡೆನಗರದಲ್ಲಿ ನಡೆದಿದೆ
ನೋಡ ನೋಡುತ್ತಲೆ ಗೋದಾಮು ಸುತ್ತ ಅಗ್ನಿ ಆವರಿಸಿದೆ. ಸ್ಥಳಕ್ಕೆ 6 ಆಗ್ನಿಶಾಮಕ ವಾಹನ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದವು. ಸದ್ಯ ಬೆಂಕಿ ಹತೋಟಿಗೆ ಬಂದಿದೆ. ಸತತ ಒಂದೂವರೆ ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ. ದಾಮೋದರ್ ಎಂಬುವರಿಗೆ ಸೇರಿದ ಗೋದಾಮು ಎಂದು ತಿಳಿದು ಬಂದಿದೆ.
ಮಧ್ಯರಾತ್ರಿ 2.30ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಗೋದಾಮಿನ ಹೊರಗಿರುವ ಕಸದ ರಾಶಿಗೆ ಹೊತ್ತಿಕೊಂಡುನಂತರ ಎಲ್ಲೆಡೆ ಆವರಿಸಿತ್ತು.
ರಾತ್ರಿ ವೇಳೆ ಫರ್ನೀಚರ್ ಗೋದಾಮಿನಲ್ಲಿ 12 ಮಂದಿ ಮಲಗಿದ್ದರು. ಒಳಗೆ ಮಲಗಿದ್ದ ಫರ್ಹಾನ್ ಎಂಬ ಕಾರ್ಮಿಕನಿಗೆ ಎಚ್ಚರವಾಗಿದ್ದು, ತಕ್ಷಣವೇ ಇನ್ನುಳಿದ 11 ಮಂದಿ ಕಾರ್ಮಿಕರನ್ನು ಎಬ್ಬಿಸಿ ಹೊರ ಕರೆದುಕೊಂಡು ಬಂದಿದ್ದಾನೆ. ಫರ್ಹಾನ್ ಸಮಯ ಪ್ರಜ್ನೆಯಿಂದ 11 ಮಂದಿ ಕಾರ್ಮಿಕರ ಪ್ರಾಣ ಉಳಿದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 14 =
Remember me
