ಬೆಂಗಳೂರು:ತನ್ನ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ ಕೇಳಿ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ ಎನ್ನಲಾಗಿದ್ದು, ಸಾಕಷ್ಟು ಗೊಂದಲಗಳ ನಡುವೆ ಪ್ರಕರಣಕ್ಕೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಹರ್ಷಿತಾ(32) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಶನಿವಾರ ರಾತ್ರಿ ಆರ್.ಆರ್.ನಗರದ ಜವರೇಗೌಡ ಬಡಾವಣೆಯಲ್ಲಿನ ಮನೆಯಲ್ಲಿ‌ ನೇಣಿಗೆ ಶರಣಾಗಿದ್ದಾರೆ. ಫೆ. 17ರಂದು ಚಿಕ್ಕಮಗಳೂರಿನಲ್ಲಿ ದಂತ ವೈದ್ಯ ರೇವಂತ್​ ಎಂಬಾತ ತನ್ನ ಪತ್ನಿ ಕವಿತಾಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದ. ಇತ್ತ ರಾಜರಾಜೇಶ್ವರಿ ನಗರದಲ್ಲಿ ವಾಸವಿದ್ದ ಗೃಹಿಣಿ ಹರ್ಷಿತಾ, ರೇವಂತ್​ ಸಾವಿನ ಸುದ್ದಿ ಕೇಳಿ ತಾನೂ ನೇಣಿಗೆ ಶರಣಾಗಿದ್ದಾಳೆ.
ಹರ್ಷಿತಾ ಮತ್ತು ರೇವಂತ್​ ನಡುವೆ ಇತ್ತು ಲವ್ವಿಡವ್ವಿಹರ್ಷಿತಾ ಹಾಗೂ ರೇವಂತ್ ನಡುವೆ ಮದುವೆಗೂ ಮುಂಚೆಯೇ ಲವ್ವಿ ಡವ್ವಿ ಇತ್ತು ಎನ್ನಲಾಗಿದೆ. ಮದುವೆಗೂ ಮುಂಚೆ ಕೆಲಸ ಮಾಡುತ್ತಿದ್ದ ಹರ್ಷಿತಾ ಚಿಕ್ಕಮಗಳೂರಲ್ಲಿ ರೇವಂತ್ ಮನೆಯಲ್ಲಿ ಬಾಡಿಗೆಗೆ ಇದ್ದಳು. ಈ ವೇಳೆ ರೇವಂತ್ ಜತೆ ಲವ್ವಿಡವ್ವಿ ಶುರುವಾಗಿದೆ. ಈ ಸಂಬಂಧ ಮದುವೆ ನಂತರವೂ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೂ ಫೋನ್​ ಸಂಭಾಷಣೆಆತ್ಮಹತ್ಯೆಗೆ ಶರಣಾಗುವ ಮುನ್ನ ರೇವಂತ್​, ಹರ್ಷಿತಾಗೆ ಕರೆಮಾಡಿದ್ದ. ಈ ವೇಳೆ ಹರ್ಷಿತಾ ಕೂಡ ಆತ್ಮಹತ್ಯೆಗೆ ನಿರ್ಧಾರ ಮಾಡಿ, ಗಂಡನ ವಿರುದ್ಧ ಡೆತ್​​​ನೋಟ್ ಬರೆದಿಟ್ಟು ಆತ್ಮಹತ್ಯೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ.
ಗಂಡನ ವಿರುದ್ಧ ಕಿರುಕುಳ ಪ್ರಕರಣಹರ್ಷಿತಾ ಮೂಲತಃ ತುಮಕೂರು ನಗರದ ನಿವಾಸಿ. ಸದ್ಯ ಮರಣೋತ್ತರ ಪರೀಕ್ಷೆಯ ಬಳಿಕ ಆಕೆಯ ಮೃತದೇಹವನ್ನು ತುಮಕೂರಿನ ಮನೆಗೆ ಪಾಲಕರು ಕೊಂಡೊಯ್ದಿದ್ದಾರೆ. ಅಲ್ಲದೆ, ಬಿಎಂಟಿಸಿ ಚಾಲಕನಾಗಿರುವ ಗಂಡ ಸುಧೀರ್​ನ ಕಿರುಕುಳಕ್ಕೆ ಬೇಸತ್ತು ಸತ್ತಿದ್ದಾಳೆ ಎಂದು ಆರ್.ಆರ್.ನಗರದಲ್ಲಿ ಪಾಲಕರು ದೂರು ದಾಖಲಿಸಿದ್ದಾರೆ.
ಗಂಡ ಸುಧೀಂದ್ರ ಪೊಲೀಸ್ ವಶಕ್ಕೆಡೆತ್​ನೋಟ್​ನಲ್ಲಿ ಪತಿ ಸುಧೀಂದ್ರ ವಿರುದ್ಧದ ಆರೋಪ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪತ್ನಿಯ ಲವ್ವಿಡವ್ವಿ ಬಗ್ಗೆ ಸುಧೀಂದ್ರನಿಗೆ ಮೊದಲೇ ಗೊತ್ತಿದ್ದರು ಸುಮ್ಮನಿದ್ದ ಎನ್ನಲಾಗಿದೆ. ಪ್ರತಿದಿನ ಮನೆಯಲ್ಲಿ ಇದೆ ವಿಚಾರಕ್ಕೆ ಗಲಾಟೆ ಕೂಡ ನಡೆಯುತ್ತಿತ್ತಂತೆ. 15 ದಿನಗಳ ಹಿಂದೆ ಹರ್ಷಿತಾ ಗಂಡನನ್ನು ಮನೆಯಿಂದ ಹೊರಹಾಕಿದ್ದಳು. ಮೂರು ದಿನಗಳ ಹಿಂದೆ ಮನೆಯ ಹೊರಗಿನ ಪ್ಯಾಸೇಜ್​ನಲ್ಲಿ ಸುಧೀಂದ್ರ ಮಲಗಿದ್ದರು. ತನ್ನ ಮಗುವನ್ನು ಸ್ಕೂಲ್​ಗೆ ಬಿಡುವಾಗ ಮತ್ತು ಕರೆದುಕೊಂಡು ಬರುವಾಗ ಯಾವಾಗ ನೋಡಿದರು ಹರ್ಷಿತಾ, ರೇವಂತ್​ ಜತೆ ಫೋನ್​ನಲ್ಲಿ ಬಿಜಿಯಾಗಿರುತ್ತಿದ್ದಳು. ನಿನ್ನೆ ಸಂಜೆ ಪತಿ ಮನೆಗೆ ಬಂದಾಗಲೂ ಹರ್ಷಿತಾ ಬಾಗಿಲು ತೆರೆದಿಲ್ಲ. ಸಾಕಷ್ಟು ಬಾರಿ ಬಾಗಿಲು ಬಡಿದರು ತೆಗೆಯದಿದ್ದಾಗ, ಪ್ರತಿದಿನ ಇವಳದ್ದು ಇದ್ದದ್ದೆ ಎಂದು ಸುಧೀಂದ್ರ ಪ್ಯಾಸೇಜ್​ನಲ್ಲೇ ಮಲಗಿದ್ದ. ಈತನ ಪರಿಸ್ಥಿತಿ ನೋಡಿ, ಸುಧೀಂದ್ರನ ಮೊಬೈಲ್​ನಿಂದಲೇ ಅಕ್ಕಪಕ್ಕದವರು ಪೊಲೀಸ್​ರಿಗೆ ಕರೆ ಮಾಡಿದ್ದರು. ಈ ವೇಳೆ ಪೊಲೀಸರು ಬಂದು ಬಾಗಿಲು ಒಡೆದು ನೋಡಿದಾಗ ಹರ್ಷಿತಾ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ.
ನಮಗೆ ಸ್ಪಷ್ಟತೆ ಇಲ್ಲಹರ್ಷಿತಾ ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಯುಡಿಆರ್ ಕೇಸ್ ದಾಖಲು ಮಾಡಿಕೊಂಡಿದ್ದೇವೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಒಂದು ಡೆತ್ ನೋಟ್ ಬರೆದು ಇಟ್ಟಿದ್ದಾರೆ. ಗಂಡ ಸುಧೀಂದ್ರ ಕಿರುಕುಳ ನೀಡುತ್ತಿದ್ರು ಅಂತಾ ಬರೆದಿದ್ದಾರೆ‌. ಸುಧೀಂದ್ರ ಅವರನ್ನು ವಶಕ್ಕೆ ಪಡೆದಿದ್ದೇವೆ. ಆದರೆ, ಡಾ ರೇವಂತ್ ಸಂಬಂಧದ ಬಗ್ಗೆ ಇನ್ನೂ ನಮಗೆ ಸ್ಪಷ್ಟತೆ ಇಲ್ಲ ಅದರ ಬಗ್ಗೆ ಕಡೂರು ಪೊಲೀಸರ ಹತ್ತಿರ ವಿಚಾರಿಸಲು ಹೇಳಿದ್ದೇನೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಹೇಳಿಕೆ ನೀಡಿದ್ದಾರೆ.
ಕಡೂರು ಪೊಲೀಸರಿಂದಲೂ ಪರಿಶೀಲನೆಹರ್ಷಿತಾ ಆತ್ಮಹತ್ಯೆ ಮಾಡಿಕೊಂಡ ಮನೆಯಲ್ಲಿ ಕಡೂರು ಪೊಲೀಸರು ಸಹ ಪರಿಶೀಲನೆ ನಡೆಸಿದ್ದಾರೆ. ಕಡೂರಿನಿಂದ ಬಂದಿದ್ದ ಐವರು ಪೊಲೀಸರು ಆರ್.ಆರ್.ನಗರ ಪೊಲೀಸ್ ಠಾಣೆಗೆ ತೆರಳಿ ಹರ್ಷಿತಾ ಆತ್ಮಹತ್ಯೆ ಬಗ್ಗೆಯು ಮಾಹಿತಿ ಸಂಗ್ರಹ ಮಾಡಿಕೊಂಡಿದ್ದಾರೆ.
ಸದ್ಯ ಈ ಸಂಬಂಧ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಪ್ರಕರಣ ಸ್ಪಷ್ಟತೆಗೆ ಇನ್ನಷ್ಟು ತನಿಖೆ ನಡೆಯುತ್ತಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 3 =
Remember me
