ಬೆಂಗಳೂರು:ಪತ್ನಿ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆಂದು ಆರೋಪಿಸಿ ವ್ಯಕ್ತಿಯೊಬ್ಬ ಪ್ರಧಾನಿ ಮೋದಿ ಕಚೇರಿ ಹಾಗೂ ಬೆಂಗಳೂರು ಪೊಲೀಸರಿಗೆ ದೂರು ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಯದುನಂದನ್​ ಆಚಾರ್ಯ ಎಂಬಾತ ಟ್ವಿಟರ್​ ಮೂಲಕ ದೂರು ನೀಡಿದ್ದಾರೆ. ಪತ್ನಿ ಹಲ್ಲೆ ನಡೆಸಿದ್ದಾಳೆ ಎನ್ನಲಾದ ಫೋಟೋವನ್ನು ಶೇರ್​ ಮಾಡಿಕೊಂಡಿರುವ ಯದುನಂದನ್​, ಯಾರಾದರೂ ನನಗೆ ಸಹಾಯ ಮಾಡುವಿರಾ? ಅದರಲ್ಲೂ ಈ ರೀತಿ ನಡೆದಾಗ ಯಾರಾದರೂ ನನಗೆ ಸಹಾಯ ಮಾಡುವಿರಾ? ಯಾರು ಸಹಾಯ ಮಾಡಲ್ಲ. ಏಕೆಂದರೆ ನಾನೊಬ್ಬ ಪುರುಷ. ನನ್ನ ಪತ್ನಿ ನನಗೆ ಚಾಕುವಿನಿಂದ ಹಲ್ಲೆ ಮಾಡಿದಳು. ನೀವು ಉತ್ತೇಜಿಸುತ್ತಿರುವ ನಾರಿ ಶಕ್ತಿ ಇದೆನಾ? ಇದಕ್ಕಾಗಿ ಆಕೆಯ ಮೇಲೆ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸುತ್ತಿರಾ? ಅದು ಕೂಡ ಸಾಧ್ಯವಿಲ್ಲ ಎಂದು ಯದುನಂದನ್​ ನೋವು ತೋಡಿಕೊಂಡಿದ್ದಾರೆ.
ಪತ್ನಿಯ ಕೃತ್ಯದ ವಿರುದ್ಧ ಆಕ್ರೋಶ ಹೊರಹಾಕಿರುವ ಯದುನಂದನ್​, ಪ್ರಧಾನಿ ಮೋದಿ ಕಚೇರಿ, ಕೇಂದ್ರ ಕಾನೂನು ಸಚಿವ ಕಿರಣ್​ ರಿಜಿಜು ಹಾಗೂ ಬೆಂಗಳೂರು ಪೊಲೀಸರಿಗೆ ಟ್ವೀಟ್​ ಟ್ಯಾಗ್​ ಮಾಡಿದ್ದಾರೆ. ಅಲ್ಲದೆ, ಮೀಟೂ ಎಂಬುದಕ್ಕೆ ಸಮನವಾದ ಮೆನ್​​ ಟೂ ಎಂಬ ಹ್ಯಾಶ್​ಟ್ಯಾಗ್ ಸಹ ಬಳಸಿದ್ದಾರೆ.
ಯದುನಂದನ್​ ಎಂಬುವರ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಮತ್ತೊಬ್ಬ ಟ್ವಿಟರ್​ ಬಳಕೆದಾರ ಎನ್​. ರಾಮದಾಸ್​ ಅಯ್ಯರ್​, ಎರಡೂ ಕೈಗೆ ಬ್ಯಾಂಡೇಜ್​ ಸುತ್ತಿರುವ ಪೋಟೋ​ವನ್ನು ಪೋಸ್ಟ್​ ಮಾಡಿ, ಇದು ನನ್ನ ಪತ್ನಿಯಿಂದ 2019ರ ದಸರಾ ಮತ್ತು ನನ್ನ 55 ನೇ ಹುಟ್ಟುಹಬ್ಬದಂದು ಸಿಕ್ಕ ಉಡುಗೊರೆ ಎಂದು ಬರೆದುಕೊಂಡಿದ್ದಾರೆ.
ಸದ್ಯ ಟ್ವೀಟ್​ ವೈರಲ್​ ಆಗಿದ್ದು, ಇದಕ್ಕೆ ಬೆಂಗಳೂರು ಪೊಲೀಸರು ಮತ್ತು ಪ್ರಧಾನಿ ಕಚೇರಿ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.(ಏಜೆನ್ಸೀಸ್​)
ಗುಜರಾತ್​ ಸೇತುವೆ ದುರಂತ: ಅಷ್ಟೊಂದು ಸಾವು ಸಂಭವಿಸಲು ಕಾರಣ ತಿಳಿಸಿದ NDRF ಮುಖ್ಯಸ್ಥ

VIDEO| ಇಡೀ ಜಿಂಕೆಯ ದೇಹವನ್ನೇ ಸೆಕೆಂಡ್​ಗಳಲ್ಲಿ ಗುಳುಂ ಸ್ವಾಹ ಮಾಡಿದ ದೈತ್ಯ ಹೆಬ್ಬಾವು: ರೋಚಕ ವಿಡಿಯೋ ವೈರಲ್​!

ಮೆಟ್ರೋದಲ್ಲಿ 1,669 ಕ್ಯೂಆರ್ ಕೋಡ್ ಟಿಕೆಟ್ ಬಳಕೆ: ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + six =
Remember me
