ಬೆಂಗಳೂರು:ವೃದ್ಧನನ್ನು ಸ್ಕೂಟರ್​ನಲ್ಲಿ ಎಳೆದೊಯ್ದ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಮತ್ತೊಂದು ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ. ಕಾರಿನ ಬಾನೆಟ್​ ಮೇಲೆ ವ್ಯಕ್ತಿಯೊಬ್ಬ ಸಿಲುಕಿದ್ದರೂ ಕಾರು ನಿಲ್ಲಿಸದ ಮಹಿಳೆ ಹಾಗೇ ಚಲಾಯಿಸಿಕೊಂಡು ಹೋದ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳ ಮುಖ್ಯರಸ್ತೆಯ ಜಂಕ್ಷನ್ ಬಳಿ ನಡೆದಿದೆ. ಗಮನಾರ್ಹವೆಂದರೆ, ಈ ಪ್ರಕರಣದಲ್ಲಿ ಮಹಿಳಾ ಚಾಲಕಿ ಮತ್ತು ಕಾರಿನ ಬಾನೆಟ್​ ಮೇಲೆ ಸಿಲುಕಿದ ವ್ಯಕ್ತಿ, ಇಬ್ಬರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಲಾಗಿದೆ.
ಎರಡು ಕಾರಿನ ನಡುವೆ ಸಣ್ಣ ಅಪಘಾತ ಸಂಭವಿಸಿತು. ಪ್ರಿಯಾಂಕಾ ಎಂಬುವರು ಟಾಟಾ ನಿಕ್ಸಾನ್ ಕಾರನ್ನು ಚಲಾಯಿಸುತ್ತಿದ್ದರು. ಮಾರುತಿ ಸ್ವಿಫ್ಟ್ ಕಾರನ್ನು ದರ್ಶನ್ ಎಂಬುವರು ಚಲಾಯಿಸುತ್ತಿದ್ದರು. ಅಪಘಾತದ ಬೆನ್ನಲ್ಲೇ ಪ್ರಿಯಾಂಕಾ ಅವರು ದರ್ಶನ್​ಗೆ ಮಧ್ಯದ ಬೆರಳನ್ನು ತೋರಿಸಿ ಕೆಟ್ಟದಾಗಿ ವರ್ತಿಸಿದರು ಎನ್ನಲಾಗಿದೆ. ಇದರಿಂದ ಕೋಪಗೊಂಡ ದರ್ಶನ್​, ಪ್ರಿಯಾಂಕಾ ಅವರ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ.
ಮಂಗಳೂರು ಪಿಯು ಕಾಲೇಜ್ ಬಳಿ ಕಾರನ್ನು ಅಡ್ಡಗಟ್ಟಿ ದರ್ಶನ್, ಪ್ರಶ್ನಿಸಲು ಹೋದಾಗ ಕೋಪಗೊಂಡ ಪ್ರಿಯಾಂಕಾ, ಕಾರನ್ನು ಮುಂದೆ ಚಲಾಯಿಸಲು ಹೋಗುತ್ತಿದ್ದಂತೆ, ದರ್ಶನ್​, ಕಾರಿನ ಬಾನೆಟ್ ಮೇಲೆ ಹತ್ತಿ ಕುಳಿತ್ತಿದ್ದಾರೆ. ಪ್ರಿಯಾಂಕಾ ಅವರು ಕಾರನ್ನು ಸುಮಾರು ಒಂದು ಕಿ.ಮೀ. ವರೆಗೂ ಚಲಾಯಿಸಿಕೊಂಡು ಹೋಗಿದ್ದಾರೆ.
ದರ್ಶನ್ ಕಡೆಯ ಹುಡುಗರು ಬಂದು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿ ಕಾರಿನ ಗಾಜುಗಳನ್ನು ಹೊಡೆದು ಹಾಕಿರುವುದಲ್ಲದೆ, ಪ್ರಿಯಾಂಕಾ ಅವರ ಗಂಡ ಪ್ರಮೋದ್​ವರಿಗೆ ಕೈನಿಂದ ಗುದ್ದಿ ಗಾಯಪಡಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಪ್ರಿಯಾಂಕಾ ಅವರ ವಿರುದ್ಧ ದರ್ಶನ್​ ಕೂಡ ದೂರು ದಾಖಲಿಸಿದ್ದು, ಎರಡು ಪ್ರಕರಣ ಜ್ಞಾನ ಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾನೆಟ್ ಮೇಲೆ ಕುಳಿತಿದ್ದ ದರ್ಶನ್ ಹಾಗೂ ಸ್ನೇಹಿತರ ಮೇಲೆ ಲೈಂಗಿಕ ದೌರ್ಜನ್ಯ 354, 506, ಸೇರಿ ಐಪಿಸಿ ಸೆಕ್ಷನ್​ಗಳ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಬಾನೆಟ್ ಮೇಲಿದ್ದ ದರ್ಶನ್, ಸ್ನೇಹಿತರಾದ ಸುಜಯ್, ಯಶವಂತ್ ಹಾಗೂ ವಿನಯ್ ಎಂಬುವರನ್ನು ಬಂಧಿಸಲಾಗಿದೆ. ಪ್ರಿಯಾಂಕಾ ಹಾಗೂ ಪ್ರಮೋದ್ ಹಾಗೂ ನಿತೀಶ್ ಮೇಲೆ 307 ಕೊಲೆ ಮಾಡಲು ಯತ್ನ 506 ಸೇರಿ ಐಪಿಸಿ ಸೆಕ್ಷನ್​ಗಳ ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.(ದಿಗ್ವಿಜಯ ನ್ಯೂಸ್​)
ಮಾಜಿ ಪ್ರೇಯಸಿ ಜತೆ ಸಿಕ್ಕಿಬಿದ್ದ ಮೈಕೆಲ್​ ಕ್ಲಾರ್ಕ್​ಗೆ ಕಪಾಳಮೋಕ್ಷ ಮಾಡಿದ ಹಾಲಿ ಪ್ರೇಯಸಿ! ವಿಡಿಯೋ ವೈರಲ್​

ಫೆ.17ರಂದು ರಾಜ್ಯ ಬಜೆಟ್: ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಭಾರೀ ನಿರೀಕ್ಷೆ ಮೂಡಿಸಿದೆ ಬಜೆಟ್​

ಬ್ರಿಜ್​ ವಿರುದ್ಧ ಮುಂದುವರಿದ ಧರಣಿ: ಭಾರತೀಯ ಒಲಿಂಪಿಕ್​ ಅಸೋಸಿಯೇಷನ್ ಮುಂದೆ 4 ಬೇಡಿಕೆಯಿಟ್ಟ ಕುಸ್ತಿಪಟುಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + seven =
Remember me
