ಬೆಂಗಳೂರು:ಹಣ ಅಂದರೆ ಹೆಣ ಕೂಡ ಬಾಯಿಬಿಡುತ್ತದೆ ಎಂಬ ಮಾತಿದೆ. ಹಣಕ್ಕೋಸ್ಕರ ಏನು ಬೇಕಾದರೂ ಮಾಡುವವರಿದ್ದಾರೆ. ಅಂತಹುದರಲ್ಲಿ ಮೇಲಿಂದ ನೋಟಿನ ಮಳೆ ಸುರಿದರೆ ಯಾರಾದರೂ ಬಿಡುತ್ತಾರಾ? ನೋವೇ ಚಾನ್ಸೇ ಇಲ್ಲ.
ಬೆಂಗಳೂರಿನ ಕೆ.ಆರ್​. ಮಾರುಕಟ್ಟೆಯಲ್ಲಿ ಇಂದು ನೋಟಿನ ಮಳೆಯಾಗಿದೆ. ವ್ಯಕ್ತಿಯೊಬ್ಬ ಮಾರುಕಟ್ಟೆ ಫೈಓವರ್​ ಮೇಲೆ ನಿಂತು 10 ರೂಪಾಯಿ ನೋಟುಗಳನ್ನು ಕಳೆಗೆ ಎಸೆಯುವ ಮೂಲಕ ಹುಚ್ಚಾಟ ಮೆರೆದಿದ್ದಾನೆ. ಮಳೆಯಂತೆ ಬೀಳುತ್ತಿದ್ದ ನೋಟುಗಳನ್ನು ಪಡೆದುಕೊಳ್ಳಲು ಜನರು ನಾಮುಂದು ತಾಮುಂದು ಅಂತಾ ಪೈಪೋಟಿಗೆ ಬಿದ್ದರು. 10 ರೂಪಾಯಿ ನೋಟಗಳನ್ನು ಎಸೆದ ವ್ಯಕ್ತಿ ಬಳಿಕ ದ್ವಿಚಕ್ರ ವಾಹನದಲ್ಲಿ ಎಸ್ಕೇಪ್​ ಆಗಿದ್ದಾನೆ.
ಈ ಬಗ್ಗೆ ಮಾತನಾಡಿರುವ ಪ್ರತ್ಯಕ್ಷದರ್ಶಿ ಹಾಗೂ ಆಟೋ ಚಾಲಕ ನಾಗರಾಜು, ಯಾರೋ ಬಂದು 10 ರೂಪಾಯಿ ನೋಟುಗಳನ್ನು ಮೇಲಿಂದ ಹಾಕಿ ಹೊರಟರು. ಕೆಳಗಡೆ ಬೀಳುವವರೆಗೂ ಅದು ದುಡ್ಡು ಅಂತಾ ಜನರಿಗೆ ಗೊತ್ತಿರಲಿಲ್ಲ. ಕೆಳಗಡೆ ಬೀಳುತ್ತಿದ್ದಂತೆ ಜನರೆಲ್ಲ ಮುತ್ತಿಕೊಂಡರು. ಸುಮಾರು 2 ರಿಂದ 3 ಸಾವಿರ ರೂ. ಹಣವನ್ನು ಬೀಸಾಕಿದ್ದಾರೆ. ಯಾರೂ ಅಂತಾ ನೋಡುವಷ್ಟರಲ್ಲಿ ಆತ ಅಲ್ಲಿಂದ ಕಾಣೆಯಾಗಿದ್ದ ಎಂದು ತಿಳಿಸಿದ್ದಾರೆ.
ಅರುಣ್​ ಎಂಬಾತನಿಂದ ಹುಚ್ಚಾಟಹಣ ಎಸೆದವನ ಹೆಸರೂ ಕೊನೆಗೂ ಪತ್ತೆಯಾಗಿದೆ. ಅರುಣ್ ಎಂಬಾತನಿಂದ ಈ ಹುಚ್ಚಾಟ ನಡೆದಿದೆ. ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ಆತ ಸ್ಕೂಟರ್ ಏರಿ ಪರಾರಿಯಾಗಿದ್ದಾನೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಅರುಣ್​ ಕುತ್ತಿಗೆಯಲ್ಲಿ ದೊಡ್ಡ ಗಡಿಯಾರ ಹಾಕಿಕೊಂಡಿದ್ದಾನೆ.(ದಿಗ್ವಿಜಯ ನ್ಯೂಸ್​)
1959ರಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ನಿಮ್ಮ ಹುಬ್ಬೇರೋದು ಗ್ಯಾರೆಂಟಿ!

ನಿಖಿಲ್ ಕುಮಾರಸ್ವಾಮಿ ಓರ್ವ ಅಪ್ರಬುದ್ಧ; ಸುಮಲತಾ ತಿರುಗೇಟು!

ಸ್ವಲ್ಪ ದಿನದಲ್ಲೇ ನಮ್ಮ ಹೆಸರು ಕೂಡ ಹೇಳ್ತಾರೆ! ಭಾರೀ ಸಂಚಲನ ಮೂಡಿಸಿದ ಭವಾನಿ ರೇವಣ್ಣ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + one =
Remember me
