ಬೆಂಗಳೂರು:ನವೆಂಬರ್ 25 ಮತ್ತು 26 ರಾಜ್ಯ ರಾಜಧಾನಿಯಲ್ಲಿ ತುಳುನಾಡ ಸಂಪ್ರದಾಯದ ಕಂಬಳ ಉತ್ಸವವನ್ನು ‘ಬೆಂಗಳೂರು ಕಂಬಳ’ ಎಂಬ ಶೀರ್ಷಿಕೆಯಡಿ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮ ನಗರದಲ್ಲಿ ಅದ್ದೂರಿಯಾಗಿ ನೆರವೇರಿದ್ದು, ಕೋಣಗಳ ಓಟ ಕಂಡು ರಾಜ್ಯದ ಜನರು ಅತೀವ ಸಂತಸಗೊಂಡರು. ಆದ್ರೆ, ಇತ್ತೀಚೆಗೆ ಬಿಬಿಎಂಪಿ ಕಂಬಳ ಸಂಘಟಕರಿಗೆ ದಂಡ ವಿಧಿಸಿದ್ದು, 50,000 ರೂ. ಹಣ ಪಾವತಿ ಮಾಡಲು ತಿಳಿಸಿದೆ.
ಇದನ್ನೂ ಓದಿ:ಸೋಮವಾರ ಬೆಳಗಾವಿ ಸುವರ್ಣಸೌಧ ಮುತ್ತಿಗೆ – ವಿವಿಧ ಬೇಡಿಕೆಗಳ ಈಡೇರಿಕೆಗೆ ರೈತ ಸಂಘ ಒತ್ತಾಯ
ಕಳೆದ ವಾರ ಬೆಂಗಳೂರಿನ ಮೇಕ್ರಿ ವೃತ್ತದ ಅರಮನೆ ಮೈದಾನದ ಆವರಣದಲ್ಲಿ ಅಕ್ರಮ ಫ್ಲೆಕ್ಸ್ ಬ್ಯಾನರ್ ಪ್ರದರ್ಶಿಸಿದ ಆರೋಪದ ಮೇಲೆ ನಗರದ ಮೊದಲ ಕಂಬಳ ಕಾರ್ಯಕ್ರಮದ ಆಯೋಜಕರಿಗೆ ಬಿಬಿಎಂಪಿ 50,000 ರೂಪಾಯಿ ದಂಡ ವಿಧಿಸಿದೆ. ಕಂದಾಯ ನಿರೀಕ್ಷಕ ಕೆ. ಸಿದ್ದಗಂಗಯ್ಯ ಅವರ ದೂರಿನ ಮೇರೆಗೆ ಕರ್ನಾಟಕ ಬಯಲು ಬಹಿರ್ದೆಸೆ ವಿರೂಪ ಕಾಯ್ದೆಯಡಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಂಬಳ ಸಂಘಟಕರು ಮೇಕ್ರಿ ವೃತ್ತ ಹಾಗೂ ಬಳ್ಳಾರಿ ರಸ್ತೆಯಲ್ಲಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕಿರುವುದು ತಿಳಿದು ಬಂದಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು. ಕಳೆದ ನವೆಂಬರ್ 25 ರಂದು ಸಂಘಟಕರಿಗೆ 50,000 ರೂ ದಂಡವನ್ನು ವಿಧಿಸಲಾಗಿದೆ. ಅವರು ಬಿಬಿಎಂಪಿ ಮುಖ್ಯ ಆಯುಕ್ತರ ಬ್ಯಾಂಕ್ ಖಾತೆಗೆ ಪಾವತಿಸಬೇಕು ಎಂದು ಅರಮನೆ ನಗರ ವಾರ್ಡ್ ಅಧಿಕಾರಿಗಳು ಹೇಳಿದ್ದಾರೆ,(ಏಜೆನ್ಸೀಸ್).
ಟಿ-20 ವಿಶ್ವಕಪ್‌ 2024: ಕ್ಯಾಪ್ಟನ್ ಆಗಿ ರೋಹಿತ್​ ಮುಂದುವರಿಕೆ?; ಸೌರವ್ ಗಂಗೂಲಿ ಅನಿಸಿಕೆ ಹೀಗಿದೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × one =
Remember me
