ಬೆಂಗಳೂರು:ನವೆಂಬರ್​ 1ರಂದು ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕನ್ನಡ ಭಾಷೆಗೆ ಗೌರವ ಸಲ್ಲಿಸಲು ರಾಜ್ಯ ಸರ್ಕಾರ ಆರಂಭಿಸಿರುವ “ಕೋಟಿ ಕಂಠ ಗಾಯನ” ಅಭಿಯಾನಕ್ಕೆ ಸ್ಪೈಸ್​ ಜೆಟ್​ ವಿಮಾನ ಸಂಸ್ಥೆ ಬೆಂಬಲ ಸೂಚಿಸಿದೆ.
ಬೆಂಗಳೂರಿನಿಂದ ಗ್ವಾಲಿಯರ್​ಗೆ ತೆರಳಿದ ಸ್ಪೈಸ್ ಜೆಟ್ ವಿಮಾನದಲ್ಲಿ ಪೈಲಟ್ ಹಾಗೂ ಪ್ರಯಾಣಿಕರು ಡಾ. ರಾಜ್​ಕುಮಾರ್​ ಅವರು ಹಾಡಿರುವ ಆಕಸ್ಮಿಕ ಚಿತ್ರದ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಎಂಬ ಹಾಡನ್ನು ಹಾಡುವ ಮೂಲಕ ಅಭಿಯಾನಕ್ಕೆ ಸಾಥ್​ ನೀಡಿದ್ದಾರೆ.
ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್​ ಕುಮಾರ್​ ಅವರು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಆಕಾಶದಲ್ಲಿ ಮೊಳಗಿದ ಕೋಟಿ ಕಂಠ ಗಾಯನ. ಕನ್ನಡ ಹಾಡುಗಳನ್ನು ಹಾಡಿ ಕನ್ನಡಾಭಿಮಾನ ಮೆರೆದ ಸ್ಪೈಸ್​ ಜೆಟ್​ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರು ಎಂದು ಬರೆದುಕೊಂಡಿದ್ದಾರೆ.
ಆಕಾಶದಲ್ಲಿ ಮೊಳಗಿದ ಕೋಟಿ ಕಂಠ ಗಾಯನ. ಕನ್ನಡ ಹಾಡುಗಳನ್ನು ಹಾಡಿ ಕನ್ನಡಾಭಿಮಾನ ಮೆರೆದ ವಿಮಾನ ಸಿಬ್ಬಂದಿ ಹಾಗೂ ಪ್ರಯಾಣಿಕರು.@flyspicejet#ಕೋಟಿ_ಕಂಠ_ಗಾಯನ#ನನ್ನ_ನಾಡು_ನನ್ನ_ಹಾಡುpic.twitter.com/iaV7DTPVi8
— Sunil Kumar Karkala (@karkalasunil)October 28, 2022

ಟ್ವಿಟರ್​ ಮಾಲೀಕತ್ವ ವಹಿಸಿಕೊಳ್ಳುತ್ತಿದ್ದಂತೆ ಸಿಇಒ ಪರಾಗ್​ ಅಗರ್ವಾಲ್​ರನ್ನು ವಜಾಗೊಳಿಸಿದ ಎಲಾನ್​ ಮಸ್ಕ್​!

ಆನೆ ಹಲ್ಲು ಮಾರಾಟ ಮಾಡಲು ಯತ್ನ: ಇಬ್ಬರ ಬಂಧನ, 20 ಕೆಜಿ ತೂಕದ 3 ಆನೆ ದವಡೆ ಹಲ್ಲುಗಳು ವಶ

ರಾಜ್ಯಾದ್ಯಂತ ‘ಗಂಧದಗುಡಿ’ ಅದ್ಧೂರಿ ಬಿಡುಗಡೆ: ಬೆಳ್ಳಿಪರದೆಯಲ್ಲಿ ಅಪ್ಪು ನೋಡಿ ಭಾವುಕರಾದ ಅಭಿಮಾನಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
