ಬೆಂಗಳೂರು:ವಿಮಾನ ಹತ್ತಲು ವಿಳಂಬವಾಯ್ತು ಅಂತಾ ಬಾಂಬ್ ಬೆದರಿಕೆ ಹಾಕಿ, ರಂಪಾಟ ಮಾಡಿದ ಮಹಿಳೆಗೆ ದೇವನಹಳ್ಳಿಯ ಜೆಎಂಎಫ್ಸಿ ಕೋರ್ಟ್ ಫೆ. 17 ರವರೆಗೂ 11 ದಿನಗಳ‌ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ವಿಮಾನ ಹತ್ತಬೇಕು ಅನ್ನುವ ಭರದಲ್ಲಿ ಇದೀಗ ಮಹಿಳೆ ಜೈಲು ಪಾಲಾಗಿದ್ದಾಳೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫೆ.3ರಂದು ಈ ಘಟನೆ ನಡೆದಿದೆ. ಬೆಂಗಳೂರಿನಿಂದ ಕೊಲ್ಕತ್ತಾಗೆ ತೆರಳಲು ಕೇರಳ ಮೂಲದ ಮಾನಸಿ ಎಂಬಾಕೆ ಆಗಮಿದ್ದಳು. 6E445 ಸಂಖ್ಯೆಯ ಇಂಡಿಗೂ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದ ಮಾನಸಿ, ಬೋರ್ಡಿಂಗ್ ಗೇಟ್ ನಂಬರ್ 06 ರಲ್ಲಿ ಕುಳಿತಿದ್ದ‌ ವೇಳೆ ಕಿರಿಕ್ ಮಾಡಿದ್ದಾಳೆ.
ವಿಮಾನ ಹತ್ತಲು ವಿಳಂಬವಾಗುತ್ತಿದೆ ಅಂತಾ ಮೊದಲಿಗೆ ವಿಮಾನ ನಿಲ್ದಾಣದ ಭದ್ರತಾ ಪಡೆಯ ಮೇಲೆ ಕಿರಿಕ್ ಮಾಡಿದ್ದಾಳೆ. ಅಲ್ಲದೆ, ಹಲ್ಲೆ ಸಹ ನಡೆಸಿದ್ದಾಳೆ. ಬಳಿಕ ತನ್ನನ್ನು ಬೇಗ ಬಿಡಲಿಲ್ಲ ಅಂದರೆ, ವಿಮಾನದಲ್ಲಿ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಅಲ್ಲದೆ, ವಿಮಾನದಲ್ಲಿ ಬಾಂಬ್ ಇಟ್ಟಿದ್ದು ವಾಪಸ್ ಹೋಗುವಂತೆ ಸ್ಥಳದಲ್ಲಿದ್ದ ಪ್ರಯಾಣಿಕರಿಗೂ ಕಿರುಚಾಡಿ ರಂಪಾಟ ಮಾಡಿದ್ದಾಳೆ. ಹೀಗಾಗಿ ಆಕೆಯನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.
ಮಹಿಳೆಯನ್ನ ವಶಕ್ಕೆ ಕೇಸ್ ದಾಖಲಿಸಿದ ವಿಮಾನ ನಿಲ್ದಾಣದ ಪೊಲೀಸರು ಆಕೆಯನ್ನು ಜೈಲಿಗಟ್ಟಿದ್ದಾರೆ. ಆರೋಪಿ ಮಹಿಳೆಗೆ ಫೆ. 17 ರವರೆಗೂ 11 ದಿನಗಳ‌ ಕಾಲ ದೇವನಹಳ್ಳಿಯ ಜೆಎಂಎಫ್ಸಿ ಕೋರ್ಟ್​ ನ್ಯಾಯಾಂಗ ಬಂಧನ ವಿಧಿಸಿದೆ.(ಏಜೆನ್ಸೀಸ್​)
ಇಂದು ತುಮಕೂರಿಗೆ ನಮೋ ಆಗಮನ: ಸಂಚಾರ ಮಾರ್ಗದಲ್ಲಿ ಬದಲಾವಣೆ, ಎಚ್​ಎಎಲ್​ ಬಳಿ ಪೊಲೀಸರ ಹದ್ದಿನಕಣ್ಣು

ಹೆಲ್ಮೆಟ್​ ಧರಿಸದೇ ಸ್ಕೂಟರ್​ನಲ್ಲಿ ಕ್ಷೇತ್ರ ಪರ್ಯಟನೆ: ಕ್ರಮ ವಹಿಸದ ಟ್ರಾಫಿಕ್​ ಪೊಲೀಸ್​, ಸಾರ್ವಜನಿಕರ ಕಿಡಿ

ಜಾತಿಗಳನ್ನು ಹುಟ್ಟುಹಾಕಿದ್ದು ಪೂಜಾರಿಗಳೇ ಹೊರತು ದೇವರಲ್ಲ: RSS ಮುಖ್ಯಸ್ಥ ಮೋಹನ್​ ಭಾಗವತ್ ಹೇಳಿಕೆ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 8 =
Remember me
