ಬೆಂಗಳೂರು: ಬೆಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನಿರ್ಮಿಸಿರುವ ಕೆಂಪೇಗೌಡ ಲೇಔಟ್ ನ ನಿವೇಶನಗಳ ನಕಲಿ ಹಕ್ಕುಪತ್ರ ಸೃಷ್ಟಿಸಿ ಸಾರ್ವಜನಿಕರಿಗೆ ತಲಾ 50 ಸಾವಿರ ರೂ. ನಿಂದ 3 ಲಕ್ಷ ರೂ. ಗೆ ಮಾರಾಟವಾಡುವ ಜಾಲವನ್ನು ಪತ್ತೆ ಮಾಡಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ವಿಜಯಾನಂದಸ್ವಾಮಿ. ಈತನದ್ದೇ ಉತ್ತರ ಕರ್ನಾಟಕ ಪ್ರದೇಶ ರೈತ ಸಂಘ (ರಿ) ಎಂಬ ಒಂದು ಸಂಸ್ಥೆ ಇದೆ. ಇದಕ್ಕೆ ಈತನೇ ರಾಜ್ಯಾಧ್ಯಕ್ಷ. ರಮೇಶ ಎನ್ನುವವನ ಜತೆಗೆ ಸೇರಿಕೊಂಡು ಕೃತ್ಯ ಎಸಗಿದ್ದಾರೆ. ತಲಾ 15 ಸಾವಿರ ರೂ. ಕೊಟ್ಟು ಸಂಘದ ಸದಸ್ಯತ್ವ ಪಡೆಯುವವರಿಗೆ ನಿವೇಶನ ಕೊಡಿಸುವುದಾಗಿ ಈಗಾಗಲೇ 1 ಸಾವಿರ ಜನರ ನೋಂದಣಿ ಮಾಡಿಸಿಕೊಂಡು, ಸಂಘದ ಲೆಟರ್ ಹೆಡ್ ನಲ್ಲಿ ಬಿಬಿಎಂಪಿ ಮೇಯರ್ ಗೆ ನಿವೇಶನ ನೀಡುವಂತೆ ಮನವಿ ಪತ್ರ ಬರೆಯುತ್ತಾರೆ. ನಂತರ ಕೆಲವು ದಿನಗಳಲ್ಲಿ 50,000 ರೂಪಾಯಿಯಿಂದ 3 ಲಕ್ಷ ರೂಪಾಯಿ ತನಕ ಪಡೆದು 50 ಜನಕ್ಕೆ ಬಿಡಿಎ ನಕಲಿ ನಿವೇಶನ ಪತ್ರದ ಹಂಚಿಕೆ ಮಾಡಿದ್ದಾನೆ ಎಂದು ಬಿಡಿಎ ತಿಳಿಸಿದೆ.
ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ “ಯು” ಅಂದ್ರೆ ಅಗ್ಲಿ: ಪಠ್ಯ ಪುಸ್ತಕದಲ್ಲಿತ್ತು ವರ್ಣ ದ್ವೇಷದ ಪಾಠ!
ಪ್ರಕರಣದ ಪತ್ತೆ:ನಿವೇಶನ ಪಡೆದ 6 ಜನರು ಬಿಡಿಎ ಕೇಂದ್ರ ಕಚೇರಿಗೆ ಹೋಗಿ ವಿಚಾರಿಸಿದಾಗ ಅಧಿಕಾರಿಗಳಿಗೆ ಅನುಮಾನ ಬಂದು ಪ್ರಕರಣದ ಜಾಲ ಪತ್ತೆ ಹಚ್ಚಿದ್ದಾರೆ. ವಿಜಯಾನಂದಸ್ವಾಮಿ ಅವರನ್ನು ವಿಚಾರಣೆ ನಡೆಸಿದಾಗ 3 ಸಾವಿರ ಜನರಿಗೆ ನಿವೇಶನ ನಕಲಿ ಪತ್ರ ಹಂಚಿಕೆ ಮಾಡುವ ಕುರಿತು ಬಾಯಿ ಬಿಟ್ಟಿದ್ದಾರೆ. ಈ ಕುರಿತು ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಬಿಡಿಎ ತಿಳಿಸಿದೆ.
https://www.vijayavani.net/this-taj-mahal-weighs-only-17-grams/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 1 =
Remember me
