ಬೆಂಗಳೂರು:ಕೆಟಿಎಂ ಬೈಕ್​ ಡಿಕ್ಕಿಯಾಗಿ ಯುವತಿಯೊಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಪ್ಲೈಓವರ್ ರಸ್ತೆಯಲ್ಲಿ ನಿನ್ನೆ (ಫೆ.2) ರಾತ್ರಿ ನಡೆದಿದೆ.
ಶುಭಶ್ರೀ (28) ಅಪಘಾತದಲ್ಲಿ ಮೃತಪಟ್ಟ ಯುವತಿ. ಈಕೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಗೊಲ್ಲಹಳ್ಳಿಯ ಅವನಿ ಅಲೈನ್ ಅಪಾರ್ಟ್​ಮೆಂಟ್​ನ ನಿವಾಸಿ. ಸ್ನೈಡರ್ ಕಂಪನಿಯಲ್ಲಿ ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದರು. ರಾಯಲ್ ಎನ್​ಫೀಲ್ಡ್ ಬೈಕ್​​ನಲ್ಲಿ ಹಿಂಬದಿ ಕುಳಿತು ಸಂಚರಿಸುತ್ತಿದ್ದರು. ಈ ವೇಳೆ ಹಿಂಬದಿಯಿಂದ ಅತಿವೇಗವಾಗಿ ಬಂದ ಕೆಟಿಎಂ ಬೈಕ್ ಸವಾರ, ರಾಯಲ್ ಎನ್​ಫೀಲ್ಡ್ ಬೈಕ್​ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ರಸ್ತೆಯ ಮೇಲೆ ಬಿದ್ದು ಹಿಂಬದಿ ಕುಳಿತಿದ್ದ ಶುಭಶ್ರೀ ತಲೆಗೆ ಗಂಭೀರ ಗಾಯಗಳಾಗಿತ್ತು. ಚಿಕಿತ್ಸೆಗಾಗಿ ಹತ್ತಿರದ ಕಾವೇರಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಶುಭಶ್ರೀ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.
ಅಪಘಾತ ನಡೆಸಿದ ಕೆಟಿಎಂ ಬೈಕ್ ಸವಾರ ವಿಮಲ್ ಚಂದ್ರ ಮೋಹನ್ (30) ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಅತಿವೇಗ ಹಾಗೂ ಅಜಾಗರೂಕತೆ ಚಾಲನೆ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೋಲೀಸರು ವಿಚಾರಣೆ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಯುಪಿಎಸ್​ಸಿಯಲ್ಲೇಕೆ ಕನ್ನಡಕ್ಕೆ ತಾರತಮ್ಯ? ಪೂರ್ವಭಾವಿ ಪರೀಕ್ಷೆಯಲ್ಲಿಲ್ಲ ಕನ್ನಡಕ್ಕೆ ಅವಕಾಶ | ಪ್ರಾದೇಶಿಕ ಭಾಷೆಗೂ ಬೇಕಿದೆ ಮನ್ನಣೆ

ಭಾರತ-ನೇಪಾಳ ಬೆಸೆದ ರಾಮ; ಕಾಳಿ ಗಂಡಕಿ ನದಿಯಲ್ಲಿದ್ದ ಎರಡು ಬೃಹತ್ ಸಾಲಿಗ್ರಾಮ ಅಯೋಧ್ಯೆಗೆ

ಸಂಪಾದಕೀಯ: ಬೆಳವಣಿಗೆಯ ಅವಕಾಶ; ಪ್ರವಾಸೋದ್ಯಮ ಪ್ರೋತ್ಸಾಹಕ್ಕೆ ಕೇಂದ್ರ ಬಜೆಟ್​ನಲ್ಲಿ ಒತ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
