ಧಾರವಾಡ:ಹುಬ್ಬಳ್ಳಿಯಲ್ಲಿ ದೇಶದ್ರೋಹ ಘೊಷಣೆ ಕೂಗಿದ ಕಾಶ್ಮೀರಿ ವಿದ್ಯಾರ್ಥಿ ಗಳ ಪರ ಬೆಂಗಳೂರಿನ ವಕೀಲರು ವಕಾಲತ್ತು ವಹಿಸಲು ಮುಂದಾಗಿದ್ದು, ಸೋಮವಾರ ಆರೋಪಿಗಳ ಪರ ಜಾಮೀನು ಅರ್ಜಿ ಸಲ್ಲಿಸಿದರಾದರೂ ನಿಯಮಾವಳಿ ಪಾಲಿಸದ ಕಾರಣ ನ್ಯಾಯಾಧೀಶರು ವಿಚಾರಣೆ ಮಾಡದೇ ಅರ್ಜಿ ತಿರಸ್ಕರಿಸಿದರು. ಬೆಂಗಳೂರಿನಿಂದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮೂವರು ವಕೀಲರು ಆಗಮಿಸಿದ್ದರು. ನಿಯಮದಂತೆ ಅರ್ಜಿಯನ್ನು ನ್ಯಾಯಾಲಯದ ಸಿಇಒ ಮೂಲಕ ಸಲ್ಲಿಸಲಿಲ್ಲವೆಂದು ನ್ಯಾ.ಈಶಪ್ಪ ಭೂತೆ ವಿಚಾರಣೆ ತಿರಸ್ಕರಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕೆಲ ಹೊತ್ತು ಕಾಲ ಕಳೆದ ಬೆಂಗಳೂರು ವಕೀಲರು, ಮಧ್ಯಾಹ್ನ ನಂತರದಲ್ಲಿ ಮತ್ತೆ ನಿಯಮದ ಪ್ರಕಾರ ಅರ್ಜಿ ಸಲ್ಲಿಸಲು ತಯಾರಿ ನಡೆಸಿದ್ದರು. ಅವರು ಪ್ರವಾಸಿ ಮಂದಿರದಿಂದ ಹೊರ ಬರುತ್ತಿದ್ದಂತೆ ಕೆಲವರು ಗೋ ಬ್ಯಾಕ್ ಘೊಷಣೆ ಕೂಗಲು ಆರಂಭಿಸಿದರು. ಇದರಿಂದ, ವಕೀಲರು ಪೊಲೀಸ್ ಬಂದೋಬಸ್ತ್​ನಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿದರು.
ಪ್ರತಿಭಟನೆ ಬಿಸಿ:ದೇಶದ್ರೋಹಿಗಳ ಪರ ವಕಾಲತ್ತು ವಹಿಸುತ್ತಿರುವು ದನ್ನು ಖಂಡಿಸಿ ಸ್ಥಳೀಯ ವಕೀಲರು ಪ್ರತಿಭಟಿಸಿದ ಪರಿಣಾಮ ಬೆಂಗಳೂರು ವಕೀಲರು ಕೋರ್ಟ್ ಆವರಣ ಪ್ರವೇಶಿಸಲು ಹರಸಾಹಸ ಪಡಬೇಕಾಯಿತು. ಬೆಂಗಳೂರಿನ ವಕೀಲರು ನ್ಯಾಯಾಲಯದಿಂದ ಹೊರ ಬರುತ್ತಿದ್ದಂತೆ ಭಾರತ ಪರ ಘೊಷಣೆ ಮೊಳಗಿದವು. ಯುವ ವಕೀಲರು ಬೆಂಗಳೂರು ವಕೀಲರ ಕಾರಿಗೆ ಮುತ್ತಿಗೆ ಹಾಕಿದರು. ಇದೇ ಸಂದರ್ಭ ಪೊಲೀಸರು ಮತ್ತು ವಕೀಲರ ಮಧ್ಯೆ ಕೆಲ ಹೊತ್ತು ವಾಗ್ವಾದ ಸಹ ನಡೆಯಿತು. ಅವರನ್ನು ಸುರಕ್ಷಿತವಾಗಿ ಹೊರಗೆ ಕರೆದೊಯ್ಯಲು ಪೊಲೀಸರು ಹರ ಸಾಹಸವನ್ನೇ ಮಾಡಬೇಕಾಯಿತು. ಈ ವೇಳೆ ಬೆಂಗಳೂರು ವಕೀಲರ ಕಾರಿನ ಗಾಜು ಒಡೆಯಲಾಗಿದೆ.
ಹುಬ್ಬಳ್ಳಿಯಲ್ಲೂ ಪ್ರತಿಭಟನೆ:ಬೆಳಗ್ಗೆ 5ರ ಸುಮಾರಿಗೆ ಹುಬ್ಬಳ್ಳಿ ತಲುಪಿದ ವಕೀಲರು ಉಳಿದುಕೊಂಡ ಲಾಡ್ಜ್ ಬಳಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಪೊಲೀಸ್ ರಕ್ಷಣೆಯಲ್ಲೇ ವಕೀಲರು ನ್ಯಾಯಾಲಯ ಸಂಕೀರ್ಣದಲ್ಲಿನ ಕಚೇರಿಗೆ ತೆರಳಿ ಪ್ರಕರಣದ ಸರ್ಟಿಫೈಡ್ ಕಾಪಿಗೆ ಅರ್ಜಿ ಸಲ್ಲಿಸಿ, ಧಾರವಾಡಕ್ಕೆ ತೆರಳಿದರು.
ಪೊಲೀಸ್ ಕಸ್ಟಡಿಗೆ ಕಾಶ್ಮೀರಿ ವಿದ್ಯಾರ್ಥಿಗಳು
ಹುಬ್ಬಳ್ಳಿ: ಪಾಕ್ ಪರ ಘೊಷಣೆ ಕೂಗಿ ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಕಾಶ್ಮೀರಿ ಮೂಲದ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಫೆ.25ರಿಂದ 28ರವರೆಗೆ ಮೂರು ದಿನ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲು ಇಲ್ಲಿನ 2ನೇ ಜೆಎಂಎಫ್​ಸಿ ನ್ಯಾಯಾಲಯ ಸೋಮವಾರ ಅನುಮತಿ ನೀಡಿದೆ. ಬಾಸಿತ್ ಸೋಫಿ (19), ತಾಲಿಬ್ ಮಜಿದ್ ವಾನಿ (19) ಹಾಗೂ ಆಮಿರ್ ಮೊಯಿನುದ್ದೀನ್ ವಾನಿ (23) ಪೊಲೀಸ್ ಕಸ್ಟಡಿಗೆ ನೀಡಲಾಗುತ್ತಿರುವ ಮೂವರು ಆರೋಪಿಗಳು. ವಿಚಾರಣೆಗೆ ಪಡೆಯುವ ಮುನ್ನ ಹಾಗೂ ವಾಪಸ್ ಕಳುಹಿಸುವ ವೇಳೆ ವೈದ್ಯಕೀಯ ತಪಾಸಣೆ ನಡೆಸಬೇಕು. ತನಿಖಾಧಿಕಾರಿ ಖುದ್ದು ಕೋರ್ಟ್​ಗೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಬೇಕು. ಅಗತ್ಯ ಆಹಾರ ಹಾಗೂ ಔಷಧೋಪಚಾರ ನೀಡಬೇಕು. ಆರೋಪಿಗಳ ಸಂಬಂಧಿಕರು ಹಾಗೂ ವಕೀಲರ ಭೇಟಿಗೆ ಅವಕಾಶ ಕಲ್ಪಿಸಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ. ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಕಾಶ್ಮೀರಿ ವಿದ್ಯಾರ್ಥಿಗಳನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಮಂಗಳವಾರ ಬೆಳಗ್ಗೆ ವಶಕ್ಕೆ ಪಡೆದು ಹುಬ್ಬಳ್ಳಿಗೆ ಕರೆತಂದು ವಿಚಾರಣೆ ನಡೆಸಲಿದ್ದಾರೆ.
ಎನ್​ಕೌಂಟರ್ ಹೇಳಿಕೆ ವಿರುದ್ಧ ದೂರು ದಾಖಲು
ಹೊಸಪೇಟೆ (ಬಳ್ಳಾರಿ): ಪಾಕಿಸ್ತಾನ ಪರ ಘೊಷಣೆ ಕೂಗಿ ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಅಮೂಲ್ಯ ಲಿಯೋನಾಳನ್ನು ಎನ್​ಕೌಂಟರ್ ಮಾಡಿದವರಿಗೆ 10 ಲಕ್ಷ ರೂ. ಬಹುಮಾನ ಕೊಡಲಾಗುವುದು ಎಂದಿದ್ದ ಶ್ರೀರಾಮ ಸೇನೆ ಜಿಲ್ಲಾ ಅಧ್ಯಕ್ಷ ಸಂಜೀವ್ ಮರಡಿ ವಿರುದ್ಧ ಪಟ್ಟಣ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + four =
Remember me
