ಬೆಂಗಳೂರು:ದಕ್ಷಿಣ ಭಾರತದ ತ್ರಿವಳಿ ರಾಜ್ಯಗಳ ಪ್ರಮುಖ ನಗರ-ಪಟ್ಟಣಗಳನ್ನು ಬೆಸೆಯುವ ನೂತನ ಹೆದ್ದಾರಿ ನಿರ್ಮಾಣ ಕಾಮಗಾರಿ ಮಹತ್ವದ ತಿರುವು ಪಡೆದುಕೊಂಡಿದೆ. ಹೊಸ ಹೆದ್ದಾರಿ ನಿರ್ಮಾಣ ಕಾಮಗಾರಿ ಪ್ರಗತಿಯು ಕರ್ನಾಟಕದ ಬೆಂಗಳೂರು-ಮಾಲೂರು ವಿಭಾಗದ ವ್ಯಾಪ್ತಿಗೆ ದಾಪುಗಾಲಿಟ್ಟಿದೆ.
ಕೇಂದ್ರ ಸರ್ಕಾರದ ಭಾರತ ಮಾಲಾ ಯೋಜನೆಯಡಿ ಕೈಗೆತ್ತಿಕೊಂಡಿರುವ 1,160 ಕೋಟಿ ರೂ. ಅಂದಾಜು ವೆಚ್ಚದ ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣ ಕಾಮಗಾರಿ ಪ್ರಗತಿ ನಿರೀಕ್ಷಿತ ವೇಗದಲ್ಲಿ ಸಾಗಿದೆ. ಮಹತ್ವಾಕಾಂಕ್ಷಿ ಯೋಜನೆಯು ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ರಾಜ್ಯಗಳ ರಾಜಧಾನಿಗಳಿಗೆ ನೇರ ಸಂಪರ್ಕ ಕೊಂಡಿಯಾಗಲಿದೆ.
ಪ್ರಸ್ತುತ ಯೋಜನೆಯಡಿ ಬೆಂಗಳೂರು-ಮಾಲೂರು ವಿಭಾಗದಲ್ಲಿ ಹೆದ್ದಾರಿ ನಿರ್ಮಾಣ ಕಾಮಗಾರಿ ವೇಗ ಪಡೆದುಕೊಂಡಿದೆ. ಪ್ರಗತಿಯಲ್ಲಿರುವ ಕಾಮಗಾರಿಯ ನಾಲ್ಕು ಚಿತ್ರಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಭಾನುವಾರ ಹಂಚಿಕೊಂಡು, ವಿಶೇಷತೆಯನ್ನು ವಿವರಿಸಿದ್ದಾರೆ.
ಬೆಂಗಳೂರು-ಮಾಲೂರು ವಿಭಾಗದ ಹೆದ್ದಾರಿಯು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಪ್ರಮುಖ ನಗರ-ಪಟ್ಟಣಗಳನ್ನು ಹಾದು ಹೋಗಲಿದೆ. ಈ ಹೆದ್ದಾರಿಯು ಹೊಸಕೋಟೆ, ಮಾಲೂರು, ಬಂಗಾರಪೇಟೆ, ಕೋಲಾರ, ವೆಂಕಟಗಿರಿ, ಪಲಮನೀರ್, ಬಂಗಾರುಪಲೆಂ, ಚಿತ್ತೂರು, ರಾಣಿಪೆಟ್ಟೈ ಹಾಗೂ ಶ್ರೀಪೆರಂಬೂದೂರು ನಗರಗಳನ್ನು ಬೆಸೆಯಲಿದೆ.
ಅಸಾಧಾರಣ ವೈಶಿಷ್ಟ್ಯಗಳನ್ನು ಎಕ್ಸಪ್ರೆಸ್ ಹೆದ್ದಾರಿಯು ಹೊಂದಿದೆ. ಈ ಪೈಕಿ ಶಾಶ್ವತವಾದ ಪಾದಚಾರಿ ವಿನ್ಯಾಸದ ಪರಿಕಲ್ಪನೆಯನ್ನು ಒಳಗೊಂಡಿದೆ. ಬಹುಪದರಗಳಲ್ಲಿ ನಿರ್ಮಾಣದಿಂದ ಡಾಂಬರು ಮೇಲ್ಮೈಗೆ ದೃಢತೆಯನ್ನು ತಂದುಕೊಡಲಿದೆ.
ವಿಸ್ತೃತ ರಚನಾತ್ಮಕ, ಹೆಚ್ಚು ಭಾರಿ ವಾಹನಗಳ ಸಂಚಾರದ ಒತ್ತಡ ಧಾರಣ ಸಾಮರ್ಥ್ಯವುಳ್ಳದ್ದಾಗಿದೆ. ಈ ವಿಧಾನವು ಒಟ್ಟಾರೆ ಬಾಳಿಕೆ ಮತ್ತು ಸುಸ್ಥಿತಿ ದೃಷ್ಟಿಯಿಂದ ಹೆದ್ದಾರಿಯನ್ನು ದೀರ್ಘಾಯುಷಿಯಾಗಿಸಲಿದೆ ಎಂದು ನಿತಿನ್ ಗಡ್ಕರಿ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
