ಬೆಂಗಳೂರು:ಪ್ರೀತಿಸಲು ನಿರಾಕರಿಸಿದ ನಾದಿನಿಗೆ ಚೂರಿಯಿಂದ 9 ಬಾರಿ ಇರಿದು ಹತ್ಯೆ ಮಾಡಲು ಯತ್ನಿಸಿದ ಭಾವ, ತಾನೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯಲಹಂಕದ ನಿವಾಸಿ ಫುಡ್ ಡೆಲಿವರಿ ಬಾಯ್ ನಾಗರಾಜ್ (32) ಆತ್ಮಹತ್ಯೆ ಮಾಡಿಕೊಂಡವ. ಚೂರಿ ಇರಿತಕ್ಕೆ ಒಳಗಾದ ನಾದಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆಕೆ ನೀಡಿದ ದೂರಿನ ಆಧಾರದ ಮೇರೆಗೆ ಭಾವ ನಾಗರಾಜ್ ವಿರುದ್ಧ ಯಲಹಂಕ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.
ಯಲಹಂಕದ ಕಟ್ಟಿಗೇನಹಳ್ಳಿಯಲ್ಲಿ ಯುವತಿ, ಆಕೆಯ ತಾಯಿ, ಅಕ್ಕ ಹಾಗೂ ಭಾವ ನಾಗರಾಜ್ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ನಾದಿನಿ ಇತ್ತೀಚೆಗೆ ಕಾಲೇಜು ಬಿಟ್ಟು ಮನೆಯಲ್ಲೇ ಇದ್ದಳು. ಆಕೆ ಒಂಟಿಯಾಗಿದ್ದಾಗ ನಾಗರಾಜ್ ಕಿರುಕುಳ ಕೊಡುತ್ತಿದ್ದ. ‘ನಿನ್ನನ್ನು ವಿವಾಹವಾಗುತ್ತೇನೆ. ನೀನು ನನಗೆ ಬೇಕು ಎಂದು ಪೀಡಿಸುತ್ತಿದ್ದ. ಇತ್ತೀಚೆಗೆ ಪತ್ನಿ ಇಲ್ಲದಿರುವ ಸಮಯದಲ್ಲಿ ಪ್ರೇಮ ನಿವೇದನೆ ಮಾಡಿದ್ದ. ಅದನ್ನು ತಿರಸ್ಕರಿಸಿದ ಆಕೆ ಈ ರೀತಿ ಮಾಡದಂತೆ ಭಾವನಿಗೆ ಬುದ್ದಿ ಹೇಳಿದ್ದಳು. ಇದರಿಂದ ಆಕ್ರೋಶಗೊಂಡ ನಾಗರಾಜ್, ನ.25ರಂದು ಬೆಳಗ್ಗೆ 10.30ರಲ್ಲಿ ನಾದಿನಿಯೊಬ್ಬಳೇ ಮನೆಯಲ್ಲಿದ್ದಾಗ ತರಕಾರಿ ಕತ್ತರಿಸುವ ಚಾಕುವಿನಿಂದ ಆಕೆಯ ಹೊಟ್ಟೆ, ಭುಜ, ಎದೆ ಸೇರಿ 9 ಕಡೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ. ನಂತರ ತಾನೂ ವಿಷ ಸೇವಿಸಿ ಮನೆಯಿಂದ ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ನಾದಿನಿಯ ಚೀರಾಟ ಕೇಳಿ ನೆರೆಹೊರೆಯವರು ಮನೆ ಬಳಿ ಬಂದು ಸ್ಥಳೀಯ ಆಸ್ಪತ್ರೆಗೆ ಆಕೆಯನ್ನು ದಾಖಲಿಸಿದ್ದಾರೆ.
ನಾಗರಾಜ್ ಯಲಹಂಕದ ರೈತರ ಸಂತೆ ಬಳಿ ಬಿದ್ದು ಮೃತಪಟ್ಟಿದ್ದ. ಸ್ಥಳೀಯರು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಅಪರಿಚಿತ ಶವದ ಬಗ್ಗೆ ಮಾಹಿತಿ ನೀಡಿದ್ದರು. ಕಂಟ್ರೋಲ್ ರೂಂ ಸಿಬ್ಬಂದಿ ಯಲಹಂಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಯಲಹಂಕ ಪೊಲೀಸರು ತನಿಖೆ ನಡೆಸಿದಾಗ ಇದು ನಾಗರಾಜ್ ಮೃತದೇಹ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
