ಮೈಸೂರು:ಇಂದಿನ ಕಾಲದಲ್ಲಿ ಹೆಣ್ಣು ಸಿಗುವುದು ತುಂಬಾನೇ ಕಷ್ಟ. ವಯಸ್ಸಾಗುತ್ತಿದೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಅನೇಕರು ನೋವು ತೋಡಿಕೊಂಡಿರುವುದನ್ನು ನೋಡಿದ್ದೇವೆ. ಅಲ್ಲದೆ, ಕೆಲವರು ಇದೇ ನೋವಿನಲ್ಲಿ ಸಾವಿನ ಹಾದಿಯನ್ನೂ ಹಿಡಿದಿದ್ದಾರೆ. ಆದರೆ, ಇಲ್ಲೊಬ್ಬ ಅಸಾಮಿ ಮಾತ್ರ ಓದಿದ್ದು 5ನೇ ತರಗತಿ ಆದರೆ, ಬರೋಬ್ಬರಿ 12 ಮದುವೆಯಾಗಿದ್ದಾನೆ. ಆತನ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಲೇ ಇದೆ.
ವಿಧವೆಯರು, ಅವಿವಾಹಿತ ಮಹಿಳೆಯರಿಗೆ ಆನ್​ಲೈನ್​ನಲ್ಲಿ ಗಾಳ ಹಾಕಿ ಬೆಣ್ಣೆಯಂತಹ ಮಾತುಗಳಿಂದ ಮರುಳು ಮಾಡಿ, ಮದುವೆಯಾಗಿ ಹಣ ಮತ್ತು ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ ಖತರ್ನಾಕ್​ ಆಸಾಮಿಯನ್ನು ಮೈಸೂರು ಪೊಲೀಸರು ಕಳೆದ ಭಾನುವಾರ ಬಂಧಿಸಿದ್ದಾರೆ. ಇದೀಗ ಈ ಪ್ರಕರಣದಲ್ಲಿ ಮತ್ತಷ್ಟು ರೋಚಕ ಸಂಗತಿಗಳು ಬಯಲಾಗುತ್ತಿವೆ.
ಇದನ್ನೂ ಓದಿ:ಭ್ರಷ್ಟಾಚಾರ ದಾಖಲೆ ಸಿಎಂಗೆ ನೀಡುವೆ: ಸದನದಲ್ಲಿ ಕುಮಾರಸ್ವಾಮಿ ಹೇಳಿಕೆ; ಎಲೆಕ್ಷನ್ ಸೋಲು ಹೊಸದಲ್ಲವೆಂದ ಮಾಜಿ ಸಿಎಂ
ಮಹೇಶ್ (35) ಬಂಧಿತ ಆರೋಪಿ. ಈತ ಬೆಂಗಳೂರಿನ ಬನಶಂಕರಿ ಬಡಾವಣೆಯ ನಿವಾಸಿ. ಮೈಸೂರಿನ ಕುವೆಂಪುನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮಹಾವಂಚಕನನ್ನು ಕಾನೂನಿನ ಬಲೆಗೆ ಬೀಳಿಸಿದ್ದಾರೆ. ಮದುವೆಯಾಗಿ, ಮಕ್ಕಳು ಮಾಡಿ, ನಗ- ನಾಣ್ಯ ದೋಚಿ ನಾಪತ್ತೆಯಾದರೂ ದೂರು ಕೊಡಲು ಮಹಿಳೆಯರು ದೂರು ಕೊಡಲು ಹಿಂದೇಟು ಹಾಕಿದ್ದರು. ಕೊನೆಗೂ ಮೈಸೂರಿನ ಓರ್ವ ಸಂತ್ರಸ್ತ ಮಹಿಳೆ ಮುಂದೆ ಬಂದು ದೂರು ನೀಡಿದ ಬಳಿಕ ಮಹೇಶ್​ನನ್ನು ಬಂಧಿಸಲಾಗಿದೆ.
ಶೋಕಿ ಜೀವನ ನಡೆಸುತ್ತಿದ್ದ ಮಹೇಶ್​, ಆನ್​ಲೈನ್​ನಲ್ಲಿ ಸಿರಿವಂತ ಮಹಿಳೆಯರಿಗೆ ಗಾಳ ಹಾಕುತ್ತಿದ್ದ. ತನ್ನ ಮರಳು ಮಾತುಗಳಿಂದಲೇ ಪ್ರೀತಿಯ ಬಲೆಗೆ ಬೀಳಿಸಿಕೊಳ್ಳುತ್ತಿದ್ದ. ಬಳಿಕ ಮದುವೆಯಾಗುವ ನಾಟಕವಾಡಿ ವಂಚನೆ ಮಾಡುತ್ತಿದ್ದ. ಮದುವೆ ಆಗಲು ಡೈರೆಕ್ಟರ್ ಸ್ಪೆಷಲ್ ಸಿನಿಮಾ ಮಾದರಿಯನ್ನು ಅನುಸರಿಸುತ್ತಿದ್ದ. 5 ಸಾವಿರ ರೂಪಾಯಿ ಕೊಟ್ಟರೆ ಬಾಡಿಗೆಗೆ ತಂದೆ-ತಾಯಿ, ಬಂಧು ಬಳಗ ಬರುತ್ತಿದ್ದರು. ಈ ಪ್ರಳಯಾಂತಕ ಒಂದೊಂದು ಮದುವೆಗೂ ಒಂದೊಂದು ಬಳಗವನ್ನು ಫಿಕ್ಸ್ ಮಾಡುತ್ತಿದ್ದ.
ವಿಚಾರಣೆಗೆ ವೇಳೆ ಒಟ್ಟು 12 ಮದುವೆ ಆಗಿರುವುದಾಗಿ ಹೇಳಿಕೆ ನೀಡಿದ್ದಾನೆ. ಈ ಪೈಕಿ 6 ಮಹಿಳೆಯರಿಗೆ ಮಕ್ಕಳಿದ್ದಾರೆ. ಸುಲಭವಾಗಿ ಹಣ ಗಳಿಸಬಹುದು ಎನ್ನುವ ಕಾರಣಕ್ಕೆ ಮದುವೆಯನ್ನು ಆಯ್ಕೆ ಮಾಡಿಕೊಂಡಿದ್ದ. ಸಿರಿವಂತ ಮಹಿಳೆಯರೇ ಈತನ ಟಾರ್ಗೆಟ್​. ವರ್ಷಕ್ಕೆ ಸರಾಸರಿ 20 ಲಕ್ಷ ರೂ. ಹಣ ಸಂಗ್ರಹಿಸುತ್ತಿದ್ದ. ಯಾವುದೇ ಆಸ್ತಿ ಮಾಡಿಲ್ಲ. ವಂಚಿಸಿದ ಹಣವನೆಲ್ಲ ಶೋಕಿಗಾಗಿ ಹಣವನ್ನು ಖರ್ಚು ಮಾಡಿ ಇದೀಗ ಜೈಲು ಪಾಲಾಗಿದ್ದಾನೆ.
ಆರೋಪಿ ಮಹೇಶ್​ಗೆ ಶಾದಿ ಡಾಟ್​ ಕಂನಲ್ಲಿ ಮೈಸೂರಿನ ನಿವಾಸಿ ಹೇಮಲತಾ ಎಂಬುವರು ಪರಿಚಯವಾಗಿದ್ದರು. ತಾನೊಬ್ಬ ಡಾಕ್ಟರ್​ ಎಂದು ಸುಳ್ಳು ಹೇಳಿ, ಆಕೆಯನ್ನು ನಂಬಿಸಿ, ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಮದುವೆಯಾಗಿದ್ದ. ಇದಾದ ಬಳಿಕ ತನ್ನ ವರಸೆ ಶುರು ಮಾಡಿದ್ದ. ತಾನೊಂದು ಕ್ಲಿನಿಕ್​ ತೆರೆಯಬೇಕೆಂದು ಅಂದುಕೊಂಡಿದ್ದೇನೆ. ಇದಕ್ಕಾಗಿ 70 ಲಕ್ಷ ರೂ. ಬೇಕಿದ್ದು, ಸಾಲ ಕೊಡಿಸು ಎಂದು ಹೇಮಲತಾಳನ್ನು ಒತ್ತಾಯಿಸುತ್ತಿದ್ದ. ಆದರೆ, ಸಾಲ ಕೊಡಿಸಲು ಹೇಮಲತಾ ಹಿಂದೇಟು ಹಾಕಿದರು. ಈಕೆ ತನ್ನ ದಾರಿಗೆ ಬರುತ್ತಿಲ್ಲ ಅಂತ ತಿಳಿದ ಬಳಿಕ ಆಕೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, 15 ಲಕ್ಷ ರೂ. ಹಣ ಹಾಗೂ ಚಿನ್ನಾಭರಣವನ್ನು ಕದ್ದು ಮಹೇಶ್​ ಪರಾರಿಯಾಗಿದ್ದ. ಇದಾದ ಬಳಿಕ ಹೇಮಲತಾ ಕುವೆಂಪುನಗರ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ:ಸಣ್ಣ ಅಪರಾಧಗಳಿಗೆ ಕ್ಷಮೆ; ಜನವಿಶ್ವಾಸ ವಿಧೇಯಕ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಅನುಮೋದನೆ
ದೂರು ದಾಖಲಿಸಿಕೊಂಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಆರೋಪಿ ಮಹೇಶನ ಎಡೆಮುರಿಯನ್ನು ಕಟ್ಟಿದ್ದಾರೆ. ಬಳಿಕ ವಿಚಾರಣೆ ವೇಳೆ ಈತ ತಾನು ಡಾಕ್ಟರ್, ಇಂಜಿನಿಯರ್, ಸಿವಿಲ್ ಕಂಟ್ರಾಕ್ಟರ್ ಹೀಗೆ ಹಲವು ಪ್ರತಿಷ್ಠಿತ ಸ್ಥಾನಗಳ ಹೆಸರಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈತ ವಿಧವೆ ಮತ್ತು ಅವಿವಾಹಿತ ಮಹಿಳೆಯರನ್ನೇ ಟಾರ್ಗೆಟ್​ ಮಾಡುತ್ತಿದ್ದ. ಅವರೆಲ್ಲರಿಗೂ ಕೈಕೊಟ್ಟಿರುವ ಸಂಗತಿ ಬಯಲಾಗಿದೆ.
ಬಂಧಿತ ಮಹೇಶ್​ನಿಂದ 2 ಲಕ್ಷ ನಗದು, 2 ಕಾರು, ಒಂದು ಬ್ರೇಸ್​ಲೆಟ್, ಒಂದು ಉಂಗುರ, ಎರಡು ಚಿನ್ನದ ಬಳೆ, ಒಂದು ನೆಕ್ಲೆಸ್ ಹಾಗೂ 7 ಮೊಬೈಲ್​ಗಳನ್ನ ವಶಕ್ಕೆ ಪಡೆಯಲಾಗಿದೆ.(ದಿಗ್ವಿಜಯ ನ್ಯೂಸ್​)
ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ 8 ಯುವಕರ ಜತೆ ಮದ್ವೆ! ತನಿಖೆಯಲ್ಲಿ ಕಿಲಾಡಿ ಲೇಡಿಯ ಕರಾಳ ಮುಖ ಬಯಲು

ಯುಎಇ ಭೇಟಿ ನೀಡಲಿರುವ ಪ್ರಧಾನಿ ಮೋದಿ

ಭ್ರಷ್ಟಾಚಾರ ದಾಖಲೆ ಸಿಎಂಗೆ ನೀಡುವೆ: ಸದನದಲ್ಲಿ ಕುಮಾರಸ್ವಾಮಿ ಹೇಳಿಕೆ; ಎಲೆಕ್ಷನ್ ಸೋಲು ಹೊಸದಲ್ಲವೆಂದ ಮಾಜಿ ಸಿಎಂ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 − ten =
Remember me
