ಮೈಸೂರು:ವಿಧವೆಯರು, ಅವಿವಾಹಿತ ಮಹಿಳೆಯರಿಗೆ ಆನ್​ಲೈನ್​ನಲ್ಲಿ ಗಾಳ ಹಾಕಿ ಬೆಣ್ಣೆಯಂತಹ ಮಾತುಗಳಿಂದ ಮರುಳು ಮಾಡಿ, ಮದುವೆಯಾಗಿ ಹಣ ಮತ್ತು ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ ಖತರ್ನಾಕ್​ ಆಸಾಮಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಮಹೇಶ್ (35) ಬಂಧಿತ ಆರೋಪಿ. ಈತ ಬೆಂಗಳೂರಿನ ಬನಶಂಕರಿ ಬಡಾವಣೆಯ ನಿವಾಸಿ. ಮೈಸೂರಿನ ಕುವೆಂಪುನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮಹಾವಂಚಕನನ್ನು ಕಾನೂನಿನ ಬಲೆಗೆ ಬೀಳಿಸಿದ್ದಾರೆ. ಬಂಧಿತನಿಂದ 2 ಲಕ್ಷ ನಗದು, 2 ಕಾರು, ಒಂದು ಬ್ರೇಸ್​ಲೆಟ್, ಒಂದು ಉಂಗುರ, ಎರಡು ಚಿನ್ನದ ಬಳೆ, ಒಂದು ನೆಕ್ಲೆಸ್ ಹಾಗೂ 7 ಮೊಬೈಲ್​ಗಳನ್ನ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ಶಕ್ತಿಕೇಂದ್ರಗಳ ಶೀತಲಸಮರ, ಬಿಜೆಪಿಗೆ ಮುಜುಗರ: ಅಧಿವೇಶನಕ್ಕೆ ವಿಪಕ್ಷ ನಾಯಕನ ಆಯ್ಕೆ ಕ್ಷೀಣ ವೀಕ್ಷಕರಿಂದಲೂ ನೀಗದ ಸಮಸ್ಯೆ

ಆರೋಪಿ ಮಹೇಶ್​ಗೆ ಶಾದಿ ಡಾಟ್​ ಕಂನಲ್ಲಿ ಮೈಸೂರಿನ ನಿವಾಸಿ ಹೇಮಲತಾ ಎಂಬುವರು ಪರಿಚಯವಾಗಿದ್ದರು. ತಾನೊಬ್ಬ ಡಾಕ್ಟರ್​ ಎಂದು ಸುಳ್ಳು ಹೇಳಿ, ಆಕೆಯನ್ನು ನಂಬಿಸಿ, ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಮದುವೆಯಾಗಿದ್ದ. ಇದಾದ ಬಳಿಕ ತನ್ನ ವರಸೆ ಶುರು ಮಾಡಿದ್ದ. ತಾನೊಂದು ಕ್ಲಿನಿಕ್​ ತೆರೆಯಬೇಕೆಂದು ಅಂದುಕೊಂಡಿದ್ದೇನೆ. ಇದಕ್ಕಾಗಿ 70 ಲಕ್ಷ ರೂ. ಬೇಕಿದ್ದು, ಸಾಲ ಕೊಡಿಸು ಎಂದು ಹೇಮಲತಾಳನ್ನು ಒತ್ತಾಯಿಸುತ್ತಿದ್ದ.
ಆದರೆ, ಸಾಲ ಕೊಡಿಸಲು ಹೇಮಲತಾ ಹಿಂದೇಟು ಹಾಕಿದರು. ಈಕೆ ತನ್ನ ದಾರಿಗೆ ಬರುತ್ತಿಲ್ಲ ಅಂತ ತಿಳಿದ ಬಳಿಕ ಆಕೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, 15 ಲಕ್ಷ ರೂ. ಹಣ ಹಾಗೂ ಚಿನ್ನಾಭರಣವನ್ನು ಕದ್ದು ಮಹೇಶ್​ ಪರಾರಿಯಾಗಿದ್ದ. ಇದಾದ ಬಳಿಕ ಹೇಮಲತಾ ಕುವೆಂಪುನಗರ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ:ಯುಬಿಐ ಜಾರಿ ದೇಶಕ್ಕೆ ಮಾದರಿ: ಬಜೆಟ್​ನಲ್ಲಿ ಪ್ರಸ್ತಾಪ; ಉತ್ತರ ಯುರೋಪ್ ದೇಶಗಳ ಕಲ್ಯಾಣ ರಾಷ್ಟ್ರ ಪರಿಕಲ್ಪನೆ
ದೂರು ದಾಖಲಿಸಿಕೊಂಡ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಆರೋಪಿ ಮಹೇಶನ ಎಡೆಮುರಿಯನ್ನು ಕಟ್ಟಿದ್ದಾರೆ. ಬಳಿಕ ವಿಚಾರಣೆ ವೇಳೆ ಈತ ತಾನು ಡಾಕ್ಟರ್, ಇಂಜಿನಿಯರ್, ಸಿವಿಲ್ ಕಂಟ್ರಾಕ್ಟರ್ ಹೀಗೆ ಹಲವು ಪ್ರತಿಷ್ಠಿತ ಸ್ಥಾನಗಳ ಹೆಸರಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈತ ವಿಧವೆ ಮತ್ತು ಅವಿವಾಹಿತ ಮಹಿಳೆಯರನ್ನೇ ಟಾರ್ಗೆಟ್​ ಮಾಡುತ್ತಿದ್ದ. ಈವರೆಗೆ ಸುಮಾರು 15 ಮಹಿಳೆಯರನ್ನು ಮದುವೆಯಾಗಿ ಅವರೆಲ್ಲರಿಗೂ ಕೈಕೊಟ್ಟಿರುವ ಸಂಗತಿ ಬಯಲಾಗಿದೆ.(ದಿಗ್ವಿಜಯ ನ್ಯೂಸ್​)
ಮನಸ್ತಾಪ ಮರೆತು 13 ವರ್ಷಗಳ ನಂತರ ಮತ್ತೆ ಒಂದಾದ ಚಿತ್ರದುರ್ಗ ದಂಪತಿ!

ಮೂತ್ರ ವಿಸರ್ಜನೆ ಘಟನೆ ಮಾಸುವ ಮುನ್ನವೇ ಮತ್ತೊಂದು ದೌರ್ಜನ್ಯ: ದಲಿತ ವ್ಯಕ್ತಿಯಿಂದ ಚಪ್ಪಲಿ ನೆಕ್ಕಿಸಿದ ದುಷ್ಟ

ಪತ್ನಿ ಮಿದುಳನ್ನೇ ಭಕ್ಷಿಸಿದ ಮೆಕ್ಸಿಕೋ ಭೂಪ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:ten − four =
Remember me
