ಬೆಂಗಳೂರು:ಪತ್ನಿಯ ಮನೆಗೆ ಹೋಗಿದ್ದ ವ್ಯಕ್ತಿಯೊಬ್ಬ ನಿಗೂಢವಾಗಿ ಸಾವಿಗೀಡಾಗಿರುವ ಘಟನೆ ಬೆಂಗಳೂರಿನ ವೈಯಾಲಿ ಕಾವಲ್​​ನಲ್ಲಿ ನಡೆದಿದ್ದು, ಮೃತನ ಕುಟುಂಬಸ್ಥರು ಆತನ ಪತ್ನಿಯ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ.
ವಿನೋದ್ ಕುಮಾರ್ ಮೃತ ವ್ಯಕ್ತಿ. ನಿರ್ಮಲಾ ಮತ್ತು ವಿನೋದ್​ 10 ವರ್ಷದ ಹಿಂದೆ ವಿವಾಹವಾಗಿದ್ದರು. ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಮಕ್ಕಳು ಸಹ ಇದ್ದಾರೆ. ಕಳೆದ ಎರಡು ತಿಂಗಳಿಂದ ಗಂಡ ಹೆಂಡತಿ ನಡುವೆ ಗಲಾಟೆ ಶುರುವಾಗಿತ್ತು. ಹೀಗಾಗಿ ನಿರ್ಮಲಾ, ಗಂಡನನ್ನು ಮನೆಬಿಟ್ಟು ಓಡಿಸಿದ್ದಳು. ನಂತರ ವೈಯಾಲಿಕಾವಲ್​ನಿಂದ ಕೆ.ಆರ್.ಪುರಂನಲ್ಲಿರುವ ತಾಯಿ ಮನೆಗೆ ವಿನೋದ್​ ಬಂದಿದ್ದ.
ಇದನ್ನೂ ಓದಿ:ಬಹೂಪಯೋಗಿ ಬಯೋಗ್ಯಾಸ್ ನರೇಗಾದಿಂದ ಸ್ಥಾವರ ನಿರ್ಮಾಣಕ್ಕೆ 25 ಸಾವಿರ ರೂ ನೆರವು
15 ದಿನದ ಹಿಂದೆ ನಿರ್ಮಲಾಗೆ ಅಪಘಾತ ಆಗಿದೆ ಎಂದು ಮಾಹಿತಿ ವಿನೋದ್​ ಕಿವಿಗೆ ಬಿದ್ದಿತ್ತು. ತಕ್ಷಣ ಆತ ಹೆಂಡತಿಯನ್ನು ನೋಡಲು ಹೋಗಿದ್ದ. ಅಲ್ಲದೆ, ನಿಮ್ಹಾನ್ಸ್​ನಲ್ಲಿ ದಾಖಲಿಸಿ‌ ಚಿಕಿತ್ಸೆ ಸಹ ಕೊಡಿಸಿದ್ದ. ನಿರ್ಮಲಾ ಕಣ್ಣಿಗೆ ಗಂಭೀರವಾದ ಗಾಯವಾಗಿತ್ತು. ಸತ್ಯನಾರಾಯಣ ಪೂಜೆಗೆ ಅಂತಾ ಹೋಗಿದ್ದೆ, ಈ ವೇಳೆ ಸದಾಶಿವನಗರದಲ್ಲಿ ಆಟೋ ಚಾಲಕ ಡಿಕ್ಕಿ ಹೊಡೆದ ಹೊರಟುಹೋದ ಎಂದಿದ್ದಳು. ಆದರೆ ಅದರ ಅಸಲಿಯತ್ತೇ ಬೇರೆ ಎಂಬುದು ವಿನೋದ್ ಕುಟುಂಬಸ್ಥರ ಆರೋಪ.
ಮದುವೆಯಾಗಿಯು ಬೇರೊಬ್ಬ ವ್ಯಕ್ತಿ ಕಿರಣ್ ಎಂಬಾತನ ಜೊತೆ ನಿರ್ಮಲಾಗೆ ಲವ್ವಿ ಡವ್ವಿ ಇತ್ತು. ನಿರ್ಮಲಾ ಪ್ರಿಯಕರನಿಗೂ ವಿವಾಹವಾಗಿದ್ದು ಪತ್ನಿ ಇದ್ದಾಳೆ. ಅದಾಗಿಯೂ ಇಬ್ಬರು ವಿವಾಹೇತರ ಸಂಬಂಧವನ್ನು ಹೊಂದಿದ್ದರು. ಹೀಗೆ ಒಮ್ಮೆ ಬೈಕ್​ನಲ್ಲಿ ಪ್ರಿಯಕರನ ಜೊತೆ ನಿರ್ಮಲಾ, ನಂದಿ ಬೆಟ್ಟಕ್ಕೆ ಹೋಗಿ ಬರುತ್ತಿದ್ದಾಗ ಅಪಘಾತ ಆಗಿದೆ. ನಿರ್ಮಲಾ ಬೈಕ್ ಓಡಿಸಿಕೊಂಡು ಬಂದು ಟಿಪ್ಪರ್​ಗೆ ಗುದ್ದಿದ್ದಾಳೆ ಎಂದು ವಿನೋದ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಐದು ದಿನದ ಹಿಂದೆ ವಿನೋದ್ ಕೆಲಸಕ್ಕೆ ಹೋಗಿದ್ದಾಗ ಅಸಲಿ ವಿಚಾರ ಗೊತ್ತಾಗಿದೆ. ಇದನ್ನು ಪ್ರಶ್ನೆ ಮಾಡಲು ವಿನೋದ್​ ಮನೆಗೆ ತೆರಳಿದ್ದ. ನಂತರ ಫೆ.16ಕ್ಕೆ ಅಕ್ಕ ಪ್ರಮೀಳಾ ಮನೆಗೆ ವಿನೋದ್​ ಬಂದಿದ್ದ. ಎಲ್ಲ ವಿಚಾರವನ್ನು ಪ್ರಮೀಳಾಗೆ ಹೇಳಿದ್ದ. ಇದೆಲ್ಲ ಬಿಟ್ಟು ನನ್ನ ಜೊತೆಗೆ ಬಂದುಬಿಡು, ಬೇರೆ ಕಡೆ ಹೋಗಿ ಜೀವನ ಮಾಡೋಣ ಅಂತಾ ನಿರ್ಮಲಾಗೆ ವಿನೋದ್​ ಬುದ್ಧಿ ಹೇಳಿದ್ದ. ಇದನ್ನು ಸಹ ಅಕ್ಕನ ಬಳಿಗೆ ಬಂದು ಹೇಳಿಕೊಂಡಿದ್ದ.
ಇದನ್ನೂ ಓದಿ:ಅತಿಯಾದ ಸ್ಮಾರ್ಟ್​ಫೋನ್ ಬಳಕೆಯಿಂದ ದೃಷ್ಟಿ ಕಳೆದುಕೊಂಡ ಮಹಿಳೆ; ಏನಿದು ಸ್ಮಾರ್ಟ್​ಫೋನ್​ ವಿಷನ್ ಸಿಂಡ್ರೋಮ್?
ಸೋಮವಾರ ಮತ್ತೆ ಹೆಂಡತಿ ಜೊತೆ ಮಾತಾಡಲು ವಿನೋದ್ ಹೋಗಿದ್ದಾನೆ. ಇತ್ತ ವಿನೋದ್​ ಕುಟುಂಬಸ್ಥರು ಬೆಳಗ್ಗೆಯಿಂದ ಆತನಿಗೆ ಕರೆ ಮಾಡಿದರು ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಸಂಜೆ ಕರೆ ಸ್ವೀಕರಿಸಿದ್ದ ನಿರ್ಮಲಾ ಕುಟುಂಬಸ್ಥರು ಆ್ಯಸಿಡ್ ಕುಡಿದಿದ್ದಾನೆಂದು ಮಾಹಿತಿ ನೀಡಿದ್ದಾರೆ. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ತಂದು ಚಿಕಿತ್ಸೆಗೆ ದಾಖಲಿಸಿರುವುದಾಗಿಯು ಮತ್ತು ಚಿಕಿತ್ಸೆ ಫಲಕಾರಿಯಾಗದೇ ವಿನೋದ್ ಮೃತಪಟ್ಟಿರುವುದಾಗಿಯೂ ತಿಳಿಸಿದ್ದಾರೆ.
ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ವಿನೋದ್​ ಕುಟುಂಬಸ್ಥರು ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ನಿರ್ಮಲಾ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ಅವರೇ ವಿಷ ಕುಡಿಸಿ ಕೊಂದಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ನಟಿ ಶುಭಾ ಪೂಂಜಾ ಮನೆಯಲ್ಲಿ ನಡೆದ ಅತ್ಯಂತ ನೋವಿನ ಸಂಗತಿ ಬಿಚ್ಚಿಟ್ಟ ಆ್ಯಂಕರ್​ ಅನುಶ್ರೀ!

ಯಕ್ಷಗಾನ ಕಲಾವಿದ ಅಂಬಾತನಯ ಮುದ್ರಾಡಿ ನಿಧನಕ್ಕೆ ಸಿಎಂ ಬೊಮ್ಮಾಯಿ ಸಂತಾಪ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × 2 =
Remember me
