ಬೆಂಗಳೂರು:ಕೇಂದ್ರ ಸರ್ಕಾರ ಸೆ.1 ರ ನಂತರ ಮಹಾನಗರಗಳ ಮೆಟ್ರೋ ರೈಲು ಸಂಚಾರಕ್ಕೆ ಅನುಮತಿ ನೀಡುವ ಸಾಧ್ಯತೆ ಇದೆ.ಅದರಂತೆ, ಲಾಕ್​​ಡೌನ್ ನಂತರ ಸಂಚಾರ ಪುನಾರಂಭಕ್ಕೆ ನಮ್ಮ​ ಮೆಟ್ರೋ ಕೂಡ ಸಂಪೂರ್ಣ ಸಜ್ಜಾಗಿದೆ. ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಮೂರು ಲಕ್ಷಕ್ಕೂ ಅಧಿಕ, ಬೆಂಗಳೂರಿನಲ್ಲಿಯೇ ಒಂದು ಲಕ್ಷಕ್ಕೂ ಅಧಿಕ ಕೋವಿಡ್​ ರೋಗಿಗಳಿದ್ದಾರೆ. ಹೀಗಾಗಿ ಪ್ರಯಾಣಿಕರ ಸುರಕ್ಷತೆಗೆ ಸಹಜವಾಗಿಯೇ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.
ಲಾಕ್​ಡೌನ್​ ನಂತರದ ಅಗತ್ಯಗಳಿಗಾಗಿ ಮೆಟ್ರೋ ರೈಲಿನ ಬೋಗಿಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಸೋಂಕು ನಿವಾರಣೆ ಹಾಗೂ ಗಾಳಿ ಕಣಗಳ ಮೂಲಕ ಹರಡುವುದನ್ನು ತಡೆಯುವಂತೆ ವಿನ್ಯಾಸಗೊಳಿಸಲಾಗಿದೆ. ಮಾಗಸೂಚಿಗಳನ್ನು ಪಾಲಿಸಿದಲ್ಲಿ ಮೆಟ್ರೋ ಪ್ರಯಾಣ ಅತ್ಯಂತ ಸುರಕ್ಷಿತವಾಗಿರಲಿದೆ ಎಂಬುದು ಡಿಸಿಎಂ ಅಶ್ವತ್ಥನಾರಾಯಣ ಅಭಿಪ್ರಾಯ.
ಪ್ರಮಾಣೀಕೃತ ನಿರ್ವಹಣಾ ಕಾರ್ಯವಿಧಾನ (ಎಸ್​ಒಪಿ) ಅಥವಾ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಲಾಗುತ್ತಿದೆ. ಪ್ರಯಾಣಿಕರ ಥರ್ಮಲ್​ ಸ್ಕ್ರೀನಿಂಗ್​, ಹ್ಯಾಂಡ್​ ಸ್ಯಾನಿಟೈಸರ್​ಗಳನ್ನು ಒದಗಿಸಲಾಗುತ್ತದೆ. ಪ್ರವೇಶದ್ವಾರ, ಪ್ಲಾಟ್​ಫಾರಂನಲ್ಲೂ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಲು ಗುರುತುಗಳನ್ನು ಹಾಕಲಾಗಿದೆ ಎಂದು ಬಿಎಂಆರ್​ಸಿಎಲ್​ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್​ ಚವ್ಹಾಣ್​ ಮಾಹಿತಿ ನೀಡಿದ್ದಾರೆ.
ಬೋಗಿಯ ಒಳಗೂ ಕೂಡ ವ್ಯಕ್ತಿಗತ ಅಂತರ ಕಾಯ್ದುಕೊಳ್ಳಲಾಗುತ್ತದೆ. ಪ್ರಯಾಣಿಕರ ಎಡಬಲದ ಸೀಟು ಖಾಲಿ ಬಿಡಲಾಗುತ್ತದೆ. ಜತೆಗೆ ನಿಲ್ಲುವವರಿಗೂ ಜಾಗ ಗುರುತು ಮಾಡಲಾಗಿರುತ್ತದೆ. ಆರು ಬೋಗಿಯ ರೈಲಿನಲ್ಲಿ ಸಾಮಾನ್ಯ ದಿನಗಳಲ್ಲಿ 1,800 ಜನರು ಪ್ರಯಾಣಿಸಿದರೆ, ಈಗ 300-350 ಜನರಿಗಷ್ಟೇ ಆವಕಾಶ ನೀಡಲಾಗುತ್ತದೆ ಎಂದು ಚವ್ಹಾಣ್​ ತಿಳಿಸಿದ್ದಾರೆ.
ಅನುಮತಿ ನೀಡಿದ ನೀಡಿದ ಒಂದೆರಡು ದಿನಗಳಲ್ಲಿ ಮೆಟ್ರೋ ಸಂಚಾರಕ್ಕೆ ಸಜ್ಜಾಗಲಿದೆ. ಹೀಗಿದ್ದರೂ, ಆರಂಭದಲ್ಲಿ ಪ್ರಯಾಣಕ್ಕೆ ಜನರು ಹಿಂದೇಟು ಹಾಕುವ ಸಾಧ್ಯತೆಗಳಿಲ್ಲದಿಲ್ಲ ಎಂದೂ ಚವ್ಹಾಣ್​ ಹೇಳುತ್ತಾರೆ.
ಇದನ್ನೂ ಓದಿ;ಮೂರೇ ವಾರದಲ್ಲಿ ಬ್ರಿಟನ್​ ಜನರಿಗೆ ಸಿಗಲಿದೆ ಕರೊನಾ ಲಸಿಕೆ; ತುರ್ತು ಬಳಕೆಗೆ ಕಾಯ್ದೆ ತಿದ್ದುಪಡಿ; ಭಾರತಕ್ಕೂ ಇದೆ ಅವಕಾಶ
ಇದನ್ನೂ ಓದಿ;ಕೋವಿಡ್​ನಿಂದಾಗಿ ಚುನಾವಣೆ ನಿಲ್ಲಿಸೋಕಾಗಲ್ಲ; ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್​
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 − two =
Remember me
