ಬೆಂಗಳೂರು:ರಮೇಶ್​ ಜಾರಕಿಹೊಳಿ ಮಂತ್ರಿಸ್ಥಾನ ಕಸಿದುಕೊಂಡ ಅಶ್ಲೀಲ ಸಿಡಿ ಪ್ರಕರಣದ ಪ್ರಮುಖ ಆರೋಪಿಗಳು ಎನ್ನಲಾದ ಮಾಜಿ ಪತ್ರಕರ್ತ ನರೇಶ್​ ಗೌಡ ಹಾಗೂ ಹ್ಯಾಕರ್​ ಶ್ರವಣ್​ 3 ತಿಂಗಳ ಗೌಪ್ಯ ವಾಸದ ಬಳಿಕ ಶನಿವಾರ ಎಸ್​ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಪ್ರತ್ಯರಾದರು. ಸಿಡಿಯಲ್ಲಿರುವ ಯುವತಿ ನಮಗೆ ಗೊತ್ತು. ಆದರೆ, ಮಾಜಿ ಸಚಿವರಿಗೆ ಬ್ಲಾ$್ಯಕ್​ಮೇಲ್​ ಮಾಡಿರುವ ಸಂಗತಿ ಗೊತ್ತಿಲ್ಲ ಎಂದು ಎಸ್​ಐಟಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ ಎಂದು ಗೊತ್ತಾಗಿದೆ.
ತುಮಕೂರಿನ ನರೇಶ್​ ಗೌಡ ಹಾಗೂ ವಿಜಯಪುರದ ಶ್ರವಣ್​ ಶನಿವಾರ ಮಧ್ಯಾಹ್ನ 12 ಗಂಟೆಗೆ ಆಡುಗೋಡಿ ಟೆಕ್ನಿಕಲ್​ ಕೇಂದ್ರದ ಬಳಿ ಹಾಜರಾದರು. ತನಿಖಾಧಿಕಾರಿ ಎಸಿಪಿ ಧಮೇರ್ಂದ್ರ, ಇಬ್ಬರನ್ನೂ ಪ್ರತ್ಯೇಕವಾಗಿ ಸತತ 5 ಗಂಟೆಗಳ ಕಾಲ ಸುಧೀರ್ ವಿಚಾರಣೆ ನಡೆಸಿ, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆದುಕೊಂಡರು. ಅವರ ಹೇಳಿಕೆಯನ್ನು ವಿಡಿಯೋ ರೆಕಾರ್ಡ್​ ಮಾಡಿಕೊಳ್ಳಲಾಗಿದೆ. ಇಬ್ಬರ ಮೊಬೈಲ್​ಗಳನ್ನೂ ವಶಕ್ಕೆ ಪಡೆದು ಪರಿಶೀಲಿಸಲಾಗಿದೆ. ಸೂಚಿಸಿದಾಗ ಮತ್ತೆ ವಿಚಾರಣೆಗೆ ಬರಬೇಕೆಂದು ತಿಳಿಸಿ, ಸಂಜೆ 5 ಗಂಟೆಗೆ ಬಿಟ್ಟು ಕಳುಹಿಸಿದ್ದಾರೆ. ವಕೀಲರ ಸಲಹೆ ಪಡೆದು ಅಗತ್ಯ ಸಿದ್ಧತೆ ನಡೆಸಿಯೇ ಇಬ್ಬರೂ ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆ ವೇಳೆ ಪೊಲೀಸರಿಗೆ ಯಾವ ರೀತಿ ಉತ್ತರ ನೀಡಬೇಕು? ಯುವತಿಯ ವಿಚಾರಣೆ ವೇಳೆ ಯಾವ ಅಂಶ ಬೆಳಕಿಗೆ ಬಂದಿದೆ? ಎಸ್​ಐಟಿ ಯಾವೆಲ್ಲ ಪ್ರಶ್ನೆಗಳನ್ನು ಕೇಳಬಹುದು? ಆ ಪ್ರಶ್ನೆಗಳಿಗೆ ಹೇಗೆ ಉತ್ತರ ನೀಡಬೇಕು? ಯಾವ ವಿಚಾರ ಪ್ರಸ್ತಾಪ ಮಾಡಬಾರದು? ಎಂಬಿತ್ಯಾದಿ ಪ್ರಶ್ನೆಗಳಿಗೆ ವಕೀಲರು ಮೊದಲೇ ಸಲಹೆ ನೀಡಿದ್ದು, ಉತ್ತರ ಸಿದ್ಧಪಡಿಸಿಕೊಂಡೇ ವಿಚಾರಣೆ ಎದುರಿಸಿದ್ದಾರೆ ಎಂದು ಹೇಳಲಾಗಿದೆ.
ಹಣಕ್ಕೆ ಬೇಡಿಕೆ ಇಟ್ಟಿಲ್ಲ: ಸಿಡಿಯಲ್ಲಿರುವ ಸಂತ್ರಸ್ತೆ ಕಾಲೇಜಿನಲ್ಲಿ ಪರಿಚಯವಾಗಿದ್ದಳು. ನಾವು ಎಲ್ಲೂ ಯಾರ ಬಳಿಯೂ ಹಣಕ್ಕೆ ಬೇಡಿಕೆ ಇಟ್ಟಿಲ್ಲ. ಬ್ಲಾ$್ಯಕ್​ಮೇಲ್​ ಮಾಡಿಲ್ಲ. ಸಚಿವರಿಂದ ಅನ್ಯಾಯವಾಗಿದೆ ನ್ಯಾಯ ಕೊಡಿಸಿ ಎಂದು ಯುವತಿ ಹೇಳಿದ್ದಳು. ಮಾಧ್ಯಮದಲ್ಲಿದ್ದ ಕಾರಣ ನರೇಶ್​ ಜತೆ ಸೇರಿ ಆಕೆಗೆ ನ್ಯಾಯ ಕೊಡಿಸಲು ಮುಂದಾಗಿದ್ದೆವು ಎಂದು ಶ್ರವಣ್​ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ.
ಟ್ರಾವೆಲ್​ ಹಿಸ್ಟರಿ ಬಿಟ್ಟು ಕೊಡಲಿಲ್ಲ: ಎಸ್​ಐಟಿ ವಿಚಾರಣೆಗೆ ಬರುವ ಮುನ್ನವೇ ಶಂಕಿತರು ಈವರೆಗಿನ ತಮ್ಮ ಟ್ರಾವೆಲ್​ ಹಿಸ್ಟರಿ ಸಿಗದಂತೆ ಎಚ್ಚರಿಕೆ ವಹಿಸಿದ್ದರು. ಶನಿವಾರ ಬೆಳಗ್ಗೆ ಜತೆಯಾಗಿ ಮೆಜೆಸ್ಟಿಕ್​ಗೆ ಬಂದ ನರೇಶ್​ ಹಾಗೂ ಶ್ರವಣ್​ ಟ್ಯಾಕ್ಸಿ ಕ್ಯಾಬ್​ ವಿಚಾರಿಸಿ “ಆಡುಗೋಡಿಗೆ ಬರುತ್ತೀರಾ’ ಎಂದಿದ್ದರು. ಕ್ಯಾಬ್​ ಬುಕ್​ ಮಾಡಿದ್ರೆ ಮಾತ್ರ ಕರೆದುಕೊಂಡು ಹೋಗ್ತೇನೆ ಸರ್​, ಇಲ್ಲದಿದ್ದರೆ ಲಾಕ್​ಡೌನ್​ ಹಿನ್ನೆಲೆಯಲ್ಲಿ ಪೊಲೀಸರು ಹಿಡೀತಾರೆ ಎಂದು ಕ್ಯಾಬ್​ ಚಾಲಕ ಹೇಳಿದ್ದ. “ಯಾರಾದರೂ ಕೇಳಿದರೆ ನಾವು ಹೇಳಿಕೊಳ್ಳುತ್ತೇವೆ ನಡಿಯಪ್ಪ’ ಎಂದು ಹೇಳಿದ್ದರು. ಬಳಿಕ ಇಬ್ಬರನ್ನೂ ಆಡುಗೋಡಿ ಟೆಕ್ನಿಕಲ್​ ಕೇಂದ್ರಕ್ಕೆ ಬಿಟ್ಟಿದ್ದೆ. ಬಾಡಿಗೆ 1 ಸಾವಿರ ರೂ. ನೀಡಿದ್ದರು ಎಂದು ಕ್ಯಾಬ್​ಚಾಲಕ ತಿಳಿಸಿದ್ದಾನೆ. ಒಂದು ವೇಳೆ ಮೊಬೈಲ್​ನಲ್ಲಿ ಕ್ಯಾಬ್​ ಬುಕ್​ ಮಾಡಿದರೆ, ತನಿಖಾಧಿಕಾರಿಗಳಿಗೆ ಮೊಬೈಲ್​ ನಂಬರ್​ ಗೊತ್ತಾಗಿ ಟವರ್​ ಲೊಕೇಶನ್​ ಮೂಲಕ ಉಳಿದುಕೊಂಡಿದ್ದ ಜಾಗ ಪತ್ತೆಹಚ್ಚ ಬಹುದು ಎಂಬ ಎಚ್ಚರಿಕೆ ವಹಿಸಿದ್ದಾರೆ ಎನ್ನಲಾಗಿದೆ. ಇವರು ಮೆಜೆಸ್ಟಿಕ್​ಗೆ ರೈಲಿನಲ್ಲಿ ಬಂದರೋ ಅಥವಾ ಬೇರೆ ರಾಜ್ಯದಿಂದ ವಿಮಾನದಲ್ಲಿ ಬಂದು ವಿಮಾನ ನಿಲ್ದಾಣದಿಂದ ಮೆಜೆಸ್ಟಿಕ್​ಗೆ ಬೇರೆ ವಾಹನದಲ್ಲಿ ಬಂದಿದ್ದಾರೋ ಎಂಬ ಸುಳಿವು ಸಿಕ್ಕಿಲ್ಲ.
ಶಂಕಿತರ ಪರ ವಕೀಲರೂ ಹಾಜರ್​ಶಂಕಿತರಿಬ್ಬರೂ ಟೆಕ್ನಿಕಲ್​ ಸೆಂಟರ್​ಗೆ ಬಂದ ಸಮಯಕ್ಕೆ ಸರಿಯಾಗಿ ಇವರ ಪರ ವಕೀಲರೂ ಅಲ್ಲಿ ಹಾಜರಿದ್ದರು. ನಂತರ ವಕೀಲರ ಮೂಲಕ ತನಿಖಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಮಾಹಿತಿ ಆಧರಿಸಿ ತನಿಖಾಧಿಕಾರಿಗಳು ಟೆಕ್ನಿಕಲ್​ ಸೆಂಟರ್​ಗೆ ಬಂದು ವಿಚಾರಣೆ ನಡೆಸಿದ್ದಾರೆ. ಇಟಿಯೋಸ್​ ಬಾಡಿಗೆ ಕಾರಿನಲ್ಲಿ ಬಂದ ನರೇಶ್​ ಹಾಗೂ ಶ್ರವಣ್​ ಹೋಗುವಾಗ ವಕೀಲರ ಆಡಿ ಕಾರಿನಲ್ಲಿ ಮರಳಿದ್ದಾರೆ. ಆರ್​.ಟಿ.ನಗರದ ಕಡೆ ಹೋದರು ಎಂದು ಹೇಳಲಾಗಿದೆ.
ನ್ಯಾಯ ಕೊಡಿಸಿ ಅಣ್ಣ ಎಂದಿದ್ದಳುಪರಿಚಿತ ಯುವತಿ ಮತ್ತು ಶ್ರವಣ್​ ಮೂಲಕ ನನಗೆ ಸಂತ್ರಸ್ತೆಯ ಪರಿಚಯವಾಗಿತ್ತು. ಅನ್ಯಾಯವಾಗಿದೆ ಎಂದು ನನ್ನ ಬಳಿ ಬಂದಿದ್ದಳು. ನನ್ನನ್ನು ಆಕೆ ಅಣ್ಣ ಎಂದು ಕರೆಯುತಿದ್ದಳು. ಪ್ರಭಾವಿಯೊಬ್ಬರು ನನಗೆ ಅನ್ಯಾಯ ಮಾಡಿದ್ದಾರೆ. ನ್ಯಾಯ ಕೊಡಿಸಿ ಅಣ್ಣ ಎಂದಿದ್ದಳು. ಆ ಪ್ರಭಾವಿ ವ್ಯಕ್ತಿಗೆ ಬುದ್ಧಿ ಕಲಿಸಬೇಕು ಎಂದು ಅತ್ತಿದ್ದಳು. ನಾನು ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಳು. ಆದರೆ, ಬ್ಲಾ$್ಯಕ್​ಮೇಲ್​ ಮಾಡಿರುವ ಸಂಗತಿ ನನಗೆ ಗೊತ್ತಿಲ್ಲ. ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದರಿಂದ ಹಲವರನ್ನು ಸಂಪರ್ಕ ಮಾಡುತ್ತಿದ್ದೆ. ಸುದ್ದಿಗಳ ಸಂಬಂಧವಾಗಿ ಹಲವು ಗಣ್ಯರ ಸಂಪರ್ಕ ಮಾಡಿದ್ದೆ. ಕೆಲ ರಾಜಕಾರಣಿಗಳನ್ನೂ ಹಲವು ಬಾರಿ ಸಂಪರ್ಕ ಮಾಡಿದ್ದೇನೆ ಎಂದು ನರೇಶ್​ ಗೌಡ ವಿಚಾರಣೆ ವೇಳೆ ಹೇಳಿದ್ದಾನೆ ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
