ಬೆಂಗಳೂರು:ರಸ್ತೆ ಗುಂಡಿಯಿಂದಾಗಿ ಬೈಕ್​ನಿಂದ ಕೆಳಗೆ ಬಿದ್ದ ಸವಾರನೊಬ್ಬ ಅಲ್ಲಿಯೇ ಅರ್ಧ ದಿನ ಕುಳಿತು ಪ್ರತಿಭಟನೆ ನಡೆಸಿರುವ ಘಟನೆ ಹಲಸೂರಿನ ಮುಖ್ಯರಸ್ತೆಯಲ್ಲಿ ನಡೆದಿದೆ.
ಬೈಕ್ ಸವಾರ ತನ್ನ ಕುಟುಂಬದೊಂದಿಗೆ ಹೋಗುತ್ತಿದ್ದಾಗ ರಸ್ತೆ ಗುಂಡಿಯಿಂದಾಗಿ ಬೈಕ್ ಬಿದ್ದಿದೆ. ಇದರಿಂದ ಆಕ್ರೋಶಗೊಂಡ ಬೈಕ್​ ಸವಾರ ತನ್ನ ಬೈಕ್​ ಅನ್ನು ಬಿದ್ದ ಸ್ಥಳದಲ್ಲೇ ಪಾರ್ಕ್​ ಮಾಡಿ, ರಸ್ತೆ ಗುಂಡಿ ಪಕ್ಕದಲ್ಲೇ ಕುಳಿತು ಅರ್ಧ ದಿನ ಪ್ರತಿಭಟನೆ ನಡೆಸಿದ್ದಾನೆ.
ಪ್ರತಿಭಟನೆಯಿಂದ ರಸ್ತೆಯಲ್ಲಿ ಸಂಚಾರಿ ದಟ್ಟಣೆ ಉಂಟಾಗುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೈಕ್ ಸವಾರನನ್ನು ಅಲ್ಲಿಂದ ಎದ್ದೇಳುವಂತೆ ಕೇಳಿದ್ದಾರೆ. ಆದರೆ, ಪೊಲೀಸರ ಮನವಿಗೆ ಸೋಲದ ಸವಾರ ಪ್ರತಿಭಟನೆ ಮುಂದುವರೆಸಿದ್ದ.
ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಬರುತ್ತಿದ್ದಂತೆಯೇ ಅಲ್ಲಿನ ಸ್ಥಳೀಯರು ಕೂಡ ಬೈಕ್ ಸವಾರನಿಗೆ ಬೆಂಬಲ ಸೂಚಿಸಿದ್ದರು. ಈ ವೇಳೆ ಕೆಲ ಕಾಲ ಸ್ಥಳೀಯರು ಮತ್ತು ಪೊಲೀಸರು ನಡುವೆ ಮಾತಿನ ಚಕಮಕಿ ನಡೆಯಿತು.
ಘಟನೆ ಸಂಬಂಧಿಸಿದ ವಿಡಿಯೋವನ್ನು ಕರ್ನಾಟಕ ಕಾಂಗ್ರೆಸ್​ ತನ್ನ ಅಧಿಕೃತ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿಕೊಂಡು ಬಿಜೆಪಿ ನೇತೃತ್ವದ ಸರ್ಕಾರವನ್ನು ಟೀಕಿಸಿದೆ. ಬೆಂಗಳೂರಿನ ಹಲಸೂರಿನಲ್ಲಿನ ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರ ಸುಮಾರು ಅರ್ಧ ದಿನ ಬಿದ್ದ ಜಾಗದಲ್ಲೇ ಕುಳಿತು ಪ್ರತಿಭಟಿಸಿದ್ದಾರೆ. ಮೋದಿ ಭೇಟಿಗಾಗಿ ತೇಪೆ ಹಾಕುವ ಸರ್ಕಾರ, ಜನ ಸಾಯುತ್ತಿದ್ದರೂ ಗುಂಡಿ ಮುಚ್ಚುವುದಿಲ್ಲವೇಕೆ? ಜನರ ಹಿತ ಬಿಜೆಪಿಗೆ ಬೇಕಿಲ್ಲವೇ? ಈ ಸರ್ಕಾರ ಮಾನ, ಮರ್ಯಾದೆ ಹಾಗೂ ನಾಚಿಕೆ, ಈ ಮೂರನ್ನೂ ಬಿಟ್ಟಿದೆ ಎಂದು ಕಾಂಗ್ರೆಸ್​ ಕಿಡಿಕಾರಿದೆ. ಅಲ್ಲದೆ, ಟ್ರಬಲ್​ ಇಂಜಿನ್​ ಸರ್ಕಾರ ಎಂದು ವ್ಯಂಗ್ಯವಾಡಿದೆ.(ದಿಗ್ವಿಜಯ ನ್ಯೂಸ್​)
ಬೆಂಗಳೂರಿನ ಹಲಸೂರಿನಲ್ಲಿನ ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರ ಸುಮಾರು ಅರ್ಧ ದಿನ ಬಿದ್ದ ಜಾಗದಲ್ಲೇ ಕುಳಿತು ಪ್ರತಿಭಟಿಸಿದ್ದಾರೆ.
ಮೋದಿ ಭೇಟಿಗಾಗಿ ತೇಪೆ ಹಾಕುವ ಸರ್ಕಾರ ಜನ ಸಾಯುತ್ತಿದ್ದರೂ ಗುಂಡಿ ಮುಚ್ಚುವುದಿಲ್ಲವೇಕೆ? ಜನರ ಹಿತ ಬಿಜೆಪಿಗೆ ಬೇಕಿಲ್ಲವೇ?
"ಮಾನ, ಮರ್ಯಾದೆ, ನಾಚಿಕೆ"ಈ ಮೂರನ್ನೂ ಬಿಟ್ಟಿದೆ#TroubleEngineSarkarapic.twitter.com/pPMhG4A1og
— Karnataka Congress (@INCKarnataka)November 12, 2022

ಐಪಿಎಲ್​ನಲ್ಲಿ ಆಡುತ್ತೀರಾ? ವರದಿಗಾರನ ಪ್ರಶ್ನೆಗೆ ಬಾಬರ್​ ಅಜಾಮ್​ ಕೊಟ್ಟ ಪ್ರತಿಕ್ರಿಯೆ ವೈರಲ್​

ಲೈಂಗಿಕ ಆಸಕ್ತಿ ಕಳೆದುಕೊಂಡ ಗಂಡನನ್ನು ಹತ್ಯೆಗೈದು ಹೈಡ್ರಾಮ: ಬಾಯ್​ಫ್ರೆಂಡ್​ ಜತೆ ಮಹಿಳೆ ಸಿಕ್ಕಿಬಿದ್ದಿದ್ದೇ ರೋಚಕ!

ಮಹಾಬಲೇಶ್ವರ ದೇವಸ್ಥಾನದ ಹೊರಗೂ ವಸ್ತ್ರ ಸಂಹಿತೆ ಜಾರಿ ಮಾಡಿದ ಮೇಲುಸ್ತುವಾರಿ ಸಮಿತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + twenty =
Remember me
