ಬೆಂಗಳೂರು:ಪಿಜಿಯಲ್ಲಿ ವಾಸವಿರುವ ಹುಡುಗಿಯರೇ ಎಚ್ಚರ ಎಚ್ಚರ! ಸ್ನಾನಕ್ಕೆ ಹೋಗುವಾಗ ಒಮ್ಮೆ ಬಾತ್​ರೂಮ್ ಕಿಟಕಿ ಮುಚ್ಚಿದೆಯಾ ಅಂತಾ ಪರಿಶೀಲಿಸಿಕೊಳ್ಳಿ. ಕೊಂಚ ಎಚ್ಚರ ತಪ್ಪಿದರೂ ನಿಮ್ಮ ಖಾಸಗಿ ವಿಡಿಯೋಗಳು ರೆಕಾರ್ಡ್ ಆಗಿ, ಬ್ಲಾಕ್​ಮೇಲ್​ಗೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಬಹುದು.
ಹೌದು, ಪಿಜಿಯ ಬಾತ್​ರೂಮ್​ ಕಿಟಕಿಯಲ್ಲಿ ಮೊಬೈಲ್​ ಇಟ್ಟು ಯುವತಿಯರು ಸ್ನಾನ ಮಾಡುವುದನ್ನು ಕದ್ದು ವಿಡಿಯೋ ರೆಕಾರ್ಡ್​ ಮಾಡಿ, ಬೆದರಿಸಿ, ಲೈಂಗಿಕ ಬಯಕೆ ಪೂರೈಸುವಂತೆ ಬೇಡಿಕೆ ಇಡುತ್ತಿದ್ದ ಕಾಮುಕನನ್ನು ಬೆಂಗಳೂರು ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.
ಇಂಜಿನಿಯರಿಂಗ್​ ಓದಿದ್ದ ಆರೋಪಿ, ಒಳ್ಳೆಯ ಕೆಲಸ ಹುಡುಕಿಕೊಂಡು ಸರಿಯಾದ ಜೀವನ ನಡೆಸುವುದನ್ನು ಬಿಟ್ಟು, ಹುಡುಗಿಯರ ಅಶ್ಲೀಲ ವಿಡಿಯೋ ರೆಕಾರ್ಡ್​ ಮಾಡುವ ಖಯಾಲಿ ಬೆಳೆಸಿಕೊಂಡಿದ್ದ. ನಾಲ್ಕು ವರ್ಷದಿಂದ ಒಂದೇ ಪಿಜಿಯಲ್ಲಿದ್ದುಕೊಂಡೆ ಹುಡುಗಿಯರ ಸ್ನಾನದ ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ. ವಿಡಿಯೋ ಮಾಡುವುದರಲ್ಲೂ ಆತ ಜೀವ ಪಣಕ್ಕಿಡುತ್ತಿದ್ದ. ಕಟ್ಟಡದ ಟಾಪ್ ಪ್ಲೋರ್ ಮೇಲೆ ಹತ್ತಿ ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ.
ಒಂದೇ ಕಾಂಪ್ಲೆಕ್ಸ್​ನಲ್ಲಿದ್ದ ಪಿಜಿ ಹುಡುಗಿಯರ ಸ್ನಾನದ ವಿಡಿಯೋ ರೆಕಾರ್ಡ್​ ಮಾಡಿ, ಬಳಿಕ ವಿಡಿಯೋ ಹರಿಬಿಡುವುದಾಗಿ ಸಂತ್ರಸ್ತೆಯನ್ನು ಬೆದರಿಸಿ, ಲೈಂಗಿಕ ಆಸೆ ಈಡೇರಿಸುವಂತೆ ಬೇಡಿಕೆ ಇಡುತ್ತಿದ್ದ. ಓರ್ವ ಹುಡುಗಿ ನೀಡಿದ್ದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಹುಡುಗಿಯ ಮೊಬೈಲ್​ನಿಂದ ಆರೋಪಿಗೆ ಮೆಸೇಜ್ ಮಾಡಿ ಆತನನ್ನು ಉಪಾಯವಾಗಿ ಪೊಲೀಸರು ಕರೆಸಿಕೊಂಡಿದ್ದರು.
ಹೇಳಿದ ಜಾಗಕ್ಕೆ ಬಂದಿದ್ದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಈತನೇ ಆ ಕಾಮುಕ ಅನ್ನೋದು ಖಚಿತವಾದ ನಂತರ ಆಗ್ನೆಯ ವಿಭಾಗದ ಸೆನ್ ಪೊಲೀಸರು ಬಂಧಿಸಿದ್ದಾರೆ. ಆತನ ಮೊಬೈಲ್, ಲ್ಯಾಪ್ ಟ್ಯಾಪ್ ವಶಕ್ಕೆ ಪಡೆದಿದ್ದು, ಅದರಲ್ಲಿ ಸಾಕಷ್ಟು ಹುಡುಗಿಯರ ವಿಡಿಯೋಗಳು ಪತ್ತೆಯಾಗಿವೆ. ಆರೋಪಿಯನ್ನು ಮತ್ತೆ ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ನವಲಗುಂದ ಲಾಡ್ಜ್​ನಲ್ಲಿ ಯುವಜೋಡಿ ಸಾವಿಗೆ ಶರಣು: ಅಣ್ಣ-ತಂಗಿ ಅಂತಾ ಗೊತ್ತಿದ್ರೂ ಪ್ರೀತಿಸಿ ದುರಂತ ಅಂತ್ಯ

ಮಹಾರಾಷ್ಟ್ರ ಆಯ್ತು ಈಗ ತಮಿಳುನಾಡಿನಲ್ಲೂ ಕಿರಿಕ್: ಕಿಡಿಗೇಡಿಗಳಿಂದ ಕರ್ನಾಟಕದ ವಾಹನದ ಮೇಲೆ ಕಲ್ಲು ತೂರಾಟ

ಹೋದ ಸಂದರ್ಶನದಲ್ಲಿ ಏಟು ತಿಂದಿದ್ದ ಕೆನ್ನೆಗೆ ಈ ಬಾರಿ ಸಿಹಿ ಮುತ್ತು! ಆಶು ರೆಡ್ಡಿ ಪಾದಕ್ಕೆ ಆರ್​ಜಿವಿ ಕಿಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
