ಬೆಂಗಳೂರು:ಸಿಲಿಕಾನ್ ಸಿಟಿಯ ಪಬ್​ಗಳಲ್ಲಿ ಮಹಿಳೆಯರಿಗಿಲ್ವಾ ಸುರಕ್ಷತೆ? ಕುಟುಂಬಸ್ಥರ ಜತೆ ಪಬ್​ಗಳಿಗೆ ಹೋದರು ತೊಂದರೆ ತಪ್ಪಿದ್ದಲ್ಲ ಎನ್ನುವುದಕ್ಕೆ ಸಾಕ್ಷಿಯಂತಿದೆ ಕೆಲವು ದಿನಗಳ ಹಿಂದೆ ಅಮಾನವೀಯ ಘಟನೆ. ಪಬ್​ಗಳಲ್ಲಿ ಮಹಿಳೆಯರಿಗೆ ಭದ್ರತೆ ಕೊಡುವಂತೆ ಪೊಲೀಸರು ಆದೇಶ ನೀಡಿದ್ದರೂ, ಆ ಆದೇಶ ಬರೀ ಖಾಲಿ ಹಾಳೆಗೆ ಸಿಮಿತವಾಯ್ತ? ಎಂಬ ಪ್ರಶ್ನೆ ಕಾಡುವಂತಿದೆ.
ತಾಯಿ ಜತೆ ಪಬ್​ಗೆ ಬಂದ ಯುವತಿಗೂ ರಕ್ಷಣೆ ಕೊಡದ ಪಬ್ ಇನ್ನೇಷ್ಟು ಸೇಫ್? ಪ್ರತಿ ಪಬ್ ಅಂಡ್ ರೆಸ್ಟೋರೆಂಟ್​ಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿ, ಮಹಿಳೆಯರಿಗೆ ಭದ್ರತೆ ಕೊಡುವಂತೆ ಪೊಲೀಸ್​ ಇಲಾಖೆ ಸೂಚನೆ ನೀಡಿದೆ. ಆದರೆ ಇದ್ಯಾವುದನ್ನು ಪಾಲಿಸದ ಪಬ್​ ಮಾಲೀಕರು ನಿಯಮಗಳನ್ನ ಗಾಳಿಗೆ ತೂರಿದ್ದಾರೆ.
ಇದನ್ನೂ ಓದಿರಿ:6 ತಿಂಗಳ ಬಳಿಕ ಕೆರೆಯ ಆಳದಲ್ಲಿ ಪತ್ತೆಯಾಯ್ತು ಮೊಬೈಲ್​ ಫೋನ್​: ಸ್ವಿಚ್​ ಆನ್​ ಮಾಡಿದಾಗ ಕಾದಿತ್ತು ಶಾಕ್​!
ಹೀಗಾಗಿ ಪಬ್-ಗಿಬ್ಬು ಎಂದು ತಿರುಗಾಡೋ ಯುವತಿಯರು ತುಂಬಾ ಎಚ್ಚರಬಹಿಸಬೇಕಾದ ಅನಿವಾರ್ಯತೆ ಇದೆ. ಸ್ವಲ್ಪ ಮೈಮರೆತರೆ ಅಂಥವರಿಗಾಗಿಯೇ ಪಬ್​ಗಳಲ್ಲಿ ಕಾದು ಕುಳಿತಿರುತ್ತಾನೆ ಕಾಮುಕ. ಹೀಗಾಗಿ ವಾರಾಂತ್ಯದಲ್ಲಿ ಪಬ್​ಗಳಿಗೆ ಹೋಗುವ ಯುವತಿಯರು ಎಚ್ಚರವಹಿಸುವುದು ಸೂಕ್ತ. ಇಲ್ಲವಾದರೆ ಏನಾಗಬಹುದು ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿಯಾಗಿದೆ.
ಹೌದು. ಚರ್ಚ್ ಸ್ಟ್ರೀಟ್ ರೋಡ್​ನಲ್ಲಿರುವ ಶರತ್ ರೈ ಎಂಬುವರಿಗೆ ಸೇರಿದ ಮೀರಾಜ್ ಬಾರ್ ಅಂಡ್ ರೆಸ್ಟೋರೆಂಟ್​ನಲ್ಲಿ ಕಾಮುಕನೊಬ್ಬ ಯುವತಿ ಮೇಲೆ ವಿಕೃತಿ ಮೆರೆದಿದ್ದಾನೆ. ಈ ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾಳೆ. ಯುವತಿಯ ಜತೆ ಪೋಷಕರಿದ್ದರು ಕೇರ್​ ಮಾಡದ ಕಾಮುಕ ಸ್ನೇಹಿತರಂತೆ ಪರಿಚಯವಾಗಿ ಯುವತಿ ಬಳಿ ಬಂದು ವಿಕೃತಿ ಮೆರೆದಿದ್ದಾನೆ.
ಇದೇ ತಿಂಗಳ 21ರ ರಾತ್ರಿ 9:30ಕ್ಕೆ ತಾಯಿ ಹಾಗೂ ಸ್ನೇಹಿತರ ಜತೆ ಯುವತಿ ಪಬ್​ಗೆ ಎಂಟ್ರಿ ಕೊಟ್ಟಿದ್ದಳು. ಈ ವೇಳೆ ಸ್ನೇಹಿತೆಯ ಕಡೆಯಿಂದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ ಕಾಮುಕ ಮಧುಸೂದನ್ ಚೆಲ್ಲಾರಾಮ್, ಪಬ್​ನಲ್ಲಿ ಪಾರ್ಟಿ ಮಾಡ್ತಿದ್ದ ವೇಳೆ ಯುವತಿ ಬಳಿ ಬಂದಿದ್ದಾನೆ. ಬಳಿಕ ಆಕೆಯನ್ನು ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದಾನೆ.
ಇದನ್ನೂ ಓದಿರಿ:ನಾವಿಬ್ರು ಡಿವೋರ್ಸ್ ಆದ್ರೆ ನಿನ್​ ತಂಗಿನಾ ಇಟ್ಟುಕೊಳ್ಳಬಹುದಾ?: ಪತಿಯ ಪ್ರಶ್ನೆಗೆ ಪತ್ನಿಯ ಶಾಕಿಂಗ್​ ಉತ್ತರ!
ಈ ವೇಳೆ ಯುವತಿಯ ಭುಜ ಕಚ್ಚಿ ವಿಕೃತಿ ಮೆರೆದಿದ್ದಾನೆ. ಅಲ್ಲದೆ, ಯುವತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ. ಸದ್ಯ ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ಮಧುಸೂದನ್​ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಒಂದಲ್ಲ, ಎರಡಲ್ಲ 40 ಹಾವುಗಳು…ಸಾಲದಕ್ಕೆ 2 ಚೇಳುಗಳು! ಇದು ಅಂಗನವಾಡಿಯಲ್ಲ ಹಾವಿನ ಮನೆ

ರಸ್ತೆಯಲ್ಲೇ ಯುವತಿ ಆತ್ಮಹತ್ಯೆ ಯತ್ನ: ಲವರ್​ ಜತೆ ಸ್ಕೂಟರ್​ನಲ್ಲಿ ಬಂದಿಳಿದ ಬೆನ್ನಲ್ಲೇ ಹೈಡ್ರಾಮ ಶುರು!

ಟೀಮ್ ಇಂಡಿಯಾ ಪರ ಪದಾರ್ಪಣೆ ಪಂದ್ಯದಲ್ಲೇ ದಾಖಲೆ ಬರೆದ ಕನ್ನಡಿಗ ಪ್ರಸಿದ್ಧಕೃಷ್ಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
