ಬೆಂಗಳೂರು:ಇದು ಬೆಂಗಳೂರಿನ ಪ್ರತಿಯೊಬ್ಬರೂ ನೋಡಲೇಬೇಕಾದ ಸ್ಟೋರಿ. ಮನೆ ಬಾಡಿಗೆ ಕೊಟ್ಟು ಆರಾಮವಾಗಿ ಇರೋಣ ಅಂದುಕೊಂಡಿದ್ದೀರಾ? ಆದರೆ, ನಿಮ್ಮ ಮನೆಯನ್ನು ಬಾಡಿಗೆ ನೀಡುವ ಮುನ್ನ ಹುಷಾರ್​. ಏಕೆಂದರೆ, ಬಾಡಿಗೆಗೆ ಬರುವಾಗ ಬಗ್ತಾರೆ, ಬಂದ್ಮೆಲೇ ನಿಮ್ಮನ್ನೇ ಬಗ್ಗಿಸ್ತಾರೆ. ಕೇಳಿದಷ್ಟು ಹಣ ಕೊಡ್ತೇವೆ ಅಂತಾರೆ. ಆಮೇಲೆ ಕೈಗೆ ಚಿಪ್ಪು ಕೊಡುತ್ತಾರೆ. ಮನೆ ಮಾಲೀಕರೇ ಇಂಥಾ ಬಾಡಿಗೆ ಭಂಡರಿದ್ದಾರೆ ಎಚ್ಚರ!
ಹೌದು. ಬಾಡಿಗೆ ಕಟ್ಟದೇ ಕುಂದ್ಲಹಳ್ಳಿ ಗೇಟ್ ನಿವಾಸಿ ವೆಂಕಟೇಶ್ ರೆಡ್ಡಿ ದಂಪತಿಗೆ ಖತರ್ನಾಕ್​ ಮಹಿಳೆಯೊಬ್ಬಳು ವಂಚಿಸಿದ್ದು, ಇದೀಗ ಮನೆ ಮಾಲೀಕ ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ಪ್ರಕರಣ ಬೆಳಕಿಗೆ ಬಂದಿದ್ದು, ರಾಜಸ್ಥಾನ ಮೂಲದ ವಂಚಕಿ ಭಾವನಾ ಎಂಬಾಕೆಯನ್ನು ಹೆಚ್​​ಎಎಲ್ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿರಿ:ಸೆಕ್ಸ್​ ವಿಡಿಯೋ ಶೂಟಿಂಗ್​ ಮಾಡಿದ್ದೂ ಅಲ್ಲದೇ ಪೋರ್ನ್​ ವೆಬ್​ಸೈಟ್​ನಲ್ಲಿ ಹರಿಬಿಟ್ಟ ಹಾಟ್​ ತಾರೆ ಅರೆಸ್ಟ್​

ಪಿಜಿ ನಡೆಸುವುದಾಗಿ ಹೇಳಿ ಬಾಡಿಗೆ ಮನೆಗೆ ಪ್ರವೇಶ ನೀಡಿದ್ದ ಖತರ್ನಾಕ್ ಭಾವನಾ, ಕಳೆದ 8 ವರ್ಷಗಳಿಂದ ಪಿಜಿ ನಡೆಸುತ್ತಿದ್ದಳು. ತಿಂಗಳಿಗೆ 6 ಲಕ್ಷ ಬಾಡಿಗೆ ಕೊಡುವುದಾಗಿ ವೃದ್ದ ದಂಪತಿಗಳನ್ನು ನಂಬಿಸಿದ್ದಳು. ಸುಮಾರು 300 ಜನ ಪಿಜಿಯಲ್ಲಿ ವಾಸವಿದ್ದರು. ಮೊದ ಮೊದಲು ಚೆನ್ನಾಗಿಯೇ ಇದ್ದುಕೊಂಡು ನಂಬಿಕೆ ಹುಟ್ಟಿಸಿದ್ದ ವಂಚಕಿ ನಂತರದ ದಿನಗಳಲ್ಲಿ ತನ್ನ ವರಸೆಯನ್ನು ಬದಲಾಯಿಸಿದ್ದಾಳೆ.
ಬಾಡಿಗೆ ಹಣ ಕೇಳಿದರೆ, ಕೊಡದೇ ಮಾಲೀಕರಿಗೆ ಜೀವ ಬೆದರಿಕೆ ಹಾಕುತ್ತಿದ್ದಾಳೆ. ಕರೆಂಟ್ ಬಿಲ್, ವಾಟರ್ ಬಿಲ್ ಕಟ್ಟದೇ ವೃದ್ಧರಿಗೆ ಧಮ್ಕಿ ಹಾಕಿದ್ದಾಳೆ. ಸಾಲದ್ದಕ್ಕೆ ರೇಪ್ ಕೇಸ್ ಹಾಕ್ತಿನಿ ಅಂತಾ ಮನೆ ಮಾಲೀಕರಿಗೆ ಆವಾಜ್ ಹಾಕಿದ್ದಾಳೆ. ಬಾಡಿಗೆ, ನೀರು ಬಿಲ್ ಮತ್ತು ಕರೆಂಟ್ ಬಿಲ್ ಸೇರಿದಂತೆ 2 ಕೋಟಿ ರೂ. ಬ್ಯಾಲೆನ್ಸ್ ಉಳಿಸಿಕೊಂಡಿದ್ದಾಳೆ.​ ಕೆಲವೊಮ್ಮೆ ಸ್ಥಳೀಯ ಗೂಂಡಾಗಳನ್ನು ಬಿಟ್ಟು ವೃದ್ಧ ದಂಪತಿಯನ್ನು ಹೆದರಿಸಿದ್ದಾಳೆ.
ಇದನ್ನೂ ಓದಿರಿ:ಲೈವ್​ನಲ್ಲಿ ಬೆತ್ತಲಾದ 14ರ ಬಾಲಕಿ: ಪ್ರಕರಣ ಬೆನ್ನತ್ತಿದ ಪೊಲೀಸರು, ಪಾಲಕರಿಗೆ ಕಾದಿತ್ತು ಬಿಗ್​ ಶಾಕ್​!

ಕುಂದ್ಲಹಳ್ಳಿ ಗೇಟ್, ಸರ್ಜಾಪುರ, ಶಾಂತಿನಗರ ಸೇರಿದಂತೆ ನಗರದ ವಿವಿಧ ಕಡೆ ವಂಚಕಿ ಪಿಜಿ ನಡೆಸುತ್ತಿದ್ದಳು. ಹಲವು ಪಿಜಿ ಕಟ್ಟಡದ ಮಾಲೀಕರಿಗೂ ಈ ಲೇಡಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಸದ್ಯ ವಂಚಕಿ ಭಾವನ ಹಾಗೂ ಸಹಚರರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಪಾರ್ಟಿ ನಡೆದ ದಿನವೇ ಮಾಜಿ ಸಿಎಂ ಸೋದರಸಂಬಂಧಿ, ಅವರ ಪತ್ನಿ ಬರ್ಬರ ಹತ್ಯೆ!

ಕೆಂಪಾದವೋ ಎಲ್ಲಾ ಕೆಂಪಾದವೋ! ರಸ್ತೆಯ ತುಂಬೆಲ್ಲಾ ರಕ್ತದ ಬಣ್ಣದ ನೀರು- ಜನ ಕಂಗಾಲು

ಅತ್ತೆ ಬ್ಲ್ಯಾಕ್​ಮೇಲ್​ ಮಾಡಿ ಮೃತ ಮಗನ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದಾರೆ- ಅವರಿಗೂ ಕೊಡಬೇಕಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 4 =
Remember me
