ಬೆಂಗಳೂರು:ವಿದ್ಯಾರ್ಥಿನಿಯರ ಅರೆನಗ್ನ ವಿಡಿಯೋವನ್ನು ಚಿತ್ರೀಕರಿಸುತ್ತಿದ್ದ ಆರೋಪದ ಮೇಲೆ ವಿದ್ಯಾರ್ಥಿಯೊಬ್ಬನನ್ನು ಗಿರಿನಗರ ಠಾಣಾ ಪೊಲೀಸರು ಸೋಮವಾರ (ನ.21) ಬಂಧಿಸಿದ್ದಾರೆ.
ಶುಭಂ ಎಂ ಆಜಾದ್ ಬಂಧಿತ ಆರೋಪಿ. ಈತ ಹೊಸಕೆರೆಹಳ್ಳಿ ಬಳಿಯ ಖಾಸಗಿ ಕಾಲೇಜಿನ ಬಿಬಿಎ ಎಲ್​ಎಲ್​ಬಿ ಐದನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ. ಕಾಲೇಜಿನ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಫಿಕ್ಸ್ ಮಾಡಿ ಕೃತ್ಯ ಎಸಗುತ್ತಿದ್ದ. 1200ಕ್ಕೂ ಅಧಿಕ ವಿಡಿಯೋ ಹಾಗೂ ಪೋಟೋಗಳನ್ನು ಆರೋಪಿ ಚಿತ್ರೀಕರಿಸಿರುವುದಾಗಿ ತಿಳಿದುಬಂದಿದೆ.
ಸ್ನೇಹಿತೆಯರು ಜೊತೆಯಲ್ಲಿದ್ದಾಗಲು ಅವರ ಅರೆನಗ್ನ ಪೋಟೋ ತೆಗೆದಿದ್ದ. ಇತ್ತೀಚೆಗೆ ಕಾಲೇಜು ಶೌಚಾಲಯದಲ್ಲಿ ಕ್ಯಾಮೆರಾ ಅಳವಡಿಸಲು ಹೋದಾಗ, ಕ್ಯಾಮೆರಾ ನೋಡಿ ಯುವತಿಯರು ಚೀರಾಡಿದ್ದಾರೆ ಈ ವೇಳೆ ಆರೋಪಿ ಪರಾರಿಯಾಗಿದ್ದ. ಬಳಿಕ ಸಿಸಿಟಿವಿ ಪರಿಶೀಲಿಸಿದಾಗ ಶುಭಂ ಕೃತ್ಯ ಬೆಳಕಿಗೆ ಬಂದಿದೆ.
ಈ ಹಿಂದೆಯು ಆರೋಪಿ ಶುಭಂ ಇದೇ ರೀತಿ ಮಾಡಿ ಕ್ಷಮಾಪಣಾ ಪತ್ರ ಬರೆದುಕೊಟ್ಟಿದ್ದ. ಇಷ್ಟಾದರೂ ಮತ್ತೆ ತನ್ನ ಚಾಳಿ ಮುಂದುವರೆಸಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಂಧಿತನ ಮೊಬೈಲ್​​ನಲ್ಲಿ 1200 ಕ್ಕೂ ಅಧಿಕ ವಿಡಿಯೋ ಹಾಗೂ ಪೋಟೋಗಳು ಪತ್ತೆಯಾಗಿವೆ. ಆರೋಪಿ ಬಳಿ ಮತ್ತೊಂದು ಮೊಬೈಲ್ ಇದ್ದು ಅದರಲ್ಲಿ ಮತ್ತಷ್ಟು ವಿಡಿಯೋಗಳು ಪತ್ತೆಯಾಗುವ ಸಾಧ್ಯತೆ ಇದೆ.
ಸದ್ಯ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಮಾಜಿ ರಾಜ್ಯಸಭಾ ಸದಸ್ಯ, ಶಿಕ್ಷಣ ತಜ್ಞ ಅಬ್ದುಲ್ ಸಮಾದ್​ ಸಿದ್ದಿಕಿ ವಿಧಿವಶ: ರಾಯಚೂರಿನಲ್ಲಿ ಅಂತ್ಯಕ್ರಿಯೆ

ಈಕೆಯ ಮೋಹದ ಜಾಲಕ್ಕೆ ಬಿದ್ದ ವೃದ್ಧ ಕಳೆದುಕೊಂಡ ಹಣದ ಮೊತ್ತ ಕೇಳಿದ್ರೆ ಹುಬ್ಬೇರಿಸ್ತೀರಾ! ವಿಡಿಯೋ ರಹಸ್ಯವಿದು…

ನಿರ್ಮಾಪಕನ ವಿರುದ್ಧ ರಸ್ತೆಯಲ್ಲೇ ಬೆತ್ತಲೆ ಪ್ರತಿಭಟನೆ ಮಾಡಿದ ನಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + fourteen =
Remember me
