ಬೆಂಗಳೂರು:ಮಲಯಾಳಂನಲ್ಲಿ 2021ರಲ್ಲಿ ತೆರೆಕಂಡ ನಟ ಪೃಥ್ವಿರಾಜ್​ ಅಭಿನಯದ ಕೋಲ್ಡ್​ ಕೇಸ್​ ಸಿನಿಮಾ ಮಾದರಿಯಲ್ಲಿ ಬೆಂಗಳೂರಿನಲ್ಲಿ ಶವವೊಂದು ಪತ್ತೆಯಾಗಿದ್ದು, ಒಂದೇ ದಿನದಲ್ಲಿ ಪ್ರಕರಣ ಹಿಂದಿನ ನಿಗೂಢತೆಯನ್ನು ಪೊಲೀಸರು ಭೇದಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಮಾತನಾಡಿದ ಅಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ, ನಿನ್ನೆ (ಫೆ.2) ಬೆಳಗ್ಗೆ ನಮಗೆ ಮಾನವನ ಅಸ್ಥಿಪಂಜರ ಇರುವ ಬಗ್ಗೆ ಮಾಹಿತಿ ಸಿಕ್ಕಿತು. ಬಳಿಕ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಮಹಿಳೆಯ ಚಪ್ಪಲಿ ಹಾಗೂ ಕುತ್ತಿಗೆಗೆ ಬಳಸುವ ನೆಕ್ಲೆಸ್ ಎಲ್ಲವೂ ಪತ್ತೆಯಾಗಿತ್ತು. ಇದರಿಂದ ಮಹಿಳೆಯ ಶವ ಎಂಬುದು ಗೊತ್ತಾಯಿತು ಎಂದರು.
ಮುಂದುವರಿದು ಮಾತನಾಡಿದ ಸಿಕೆ ಬಾಬಾ, ಅಸ್ಥಿಪಂಜರ ಯಾರದ್ದು ಎಂದು ತಿಳಿಯಲು ಮೊದಲು0 ನಾವು ನಾಪತ್ತೆ ಪ್ರಕರಣಗಳನ್ನು ಹುಡುಕಲು ಶುರು ಮಾಡಿದೆವು. ಕಳೆದ ವರ್ಷ ಜುಲೈನಲ್ಲಿ ಹುಳಿಮಾವು ಠಾಣೆಯಲ್ಲಿ ನೇಪಾಳಿ ಮಹಿಳೆ ನಾಪತ್ತೆ ಕೇಸ್ ದಾಖಲಾಗಿತ್ತು. ಈಗ ಸ್ಥಳದಲ್ಲಿ ಸಿಕ್ಕಿರುವ ಎಲ್ಲ ವಸ್ತುಗಳನ್ನು ಮ್ಯಾಚ್ ಮಾಡಲಾಗಿದ್ದು, ಮಹಿಳೆಯದ್ದೇ ಶವ ಎಂಬುದು ಗೊತ್ತಾಗಿದೆ. ಆದರೂ ನಾವು ಅಸ್ಥಿಪಂಜರದ ಡಿಎನ್ಎ, ಸತ್ತ ಅವಧಿಯ ಬಗ್ಗೆ ಮಾಹಿತಿ ಎಲ್ಲವನ್ನು ಪಡೆದುಕೊಳ್ಳಲಿದ್ದೇವೆ ಎಂದು ತಿಳಿಸಿದರು.
ಒಂದೇ ದಿನದಲ್ಲಿ ಮಿಸ್ಟರಿ ಬಯಲುಬರೋಬ್ಬರಿ ಆರು ತಿಂಗಳ ಬಳಿಕ ಶವ ಪ್ರಕರಣ ಬೆಳಕಿಗೆ ಬಂದಿದೆ. ಆದರೆ, ಪತ್ತೆಯಾದ ಒಂದೇ ದಿನದಲ್ಲಿ ಪೊಲೀಸರು ಶವದ ಮಾಹಿತಿಯನ್ನು ಪತ್ತೆಹಚ್ಚಿದ್ದಾರೆ. ಶವ ನೇಪಾಳ ಮೂಲದ ಮಹಿಳೆಯದ್ದು, ಆಕೆಯ ಹೆಸರು ಪುಷ್ಪಧಾಮಿ (22) ಎಂದು ಗುರುತಿಸಲಾಗಿದೆ. ಕಳೆದ ವರ್ಷ ಜುಲೈನಲ್ಲಿ ನಾಪತ್ತೆಯಾಗಿದ್ದಳು. ದಾಂಪತ್ಯ ಕಲಹದಿಂದ ನಾಪತ್ತೆಯಾಗಿದ್ದಳು. ಬಳಿಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.(ದಿಗ್ವಿಜಯ ನ್ಯೂಸ್​)
ಟ್ರಾಫಿಕ್​ ದಂಡದಲ್ಲಿ 50% ರಿಯಾಯಿತಿ! ಪಾವತಿಸುವ ವಿಧಾನ ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ…

ಕರೊನಾ ದೂರವಾದ್ರು ಕೆಲವರು ಈಗಲೂ ಮಾಸ್ಕ್​ ಧರಿಸುತ್ತಿರುವುದಕ್ಕೆ ಇದೇ ಕಾರಣವಂತೆ! ಅಧ್ಯಯನದಲ್ಲಿ ಬಹಿರಂಗ

ಆದಿಲ್​ಗೆ ಅಕ್ರಮ ಸಂಬಂಧವಿದೆ: ಮದ್ವೆಯಾದ ಕೆಲವೇ ದಿನಗಳಲ್ಲಿ ಪತಿ ವಿರುದ್ಧ ರಾಖಿ ಸಾವಂತ್​ ಗಂಭೀರ ಆರೋಪ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:4 × 5 =
Remember me
