ಬೆಂಗಳೂರು:ನಗರದಲ್ಲಿ 22 ಕಂಟೇನ್​ಮೆಂಟ್​ ಝೋನ್ ಎಂದು ಗುರುತಿಸಲಾಗಿದ್ದು, ಈ ಪ್ರದೇಶಗಳಲ್ಲಿ ಯಥಾಸ್ಥಿತಿ ಕಟ್ಟುನಿಟ್ಟಿನ ಲಾಕ್​ಡೌನ್ ಮುಂದುವರಿಯಲಿದ್ದು, ಉಳಿದೆಡೆ ಕೆಲವು ಷರತ್ತುಗಳೊಂದಿಗೆ ಲಾಕ್​ಡೌನ್​ನಲ್ಲಿ ವಿನಾಯಿತಿ ನೀಡಲಾಗಿದೆ ಎಂದು ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಅವರು ತಿಳಿಸಿದರು.
ನಾಳೆಯಿಂದ ಎರಡು ವಾರ ಲಾಕ್​ಡೌನ್ ವಿಸ್ತರಣೆ ಹಿನ್ನೆಲೆಯಲ್ಲಿ ಇನ್ಫಾಂಟ್ರಿ ರಸ್ತೆಯ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸ್ಟ್ಯಾಂಡ್ ಅಲೋನ್ ಆಧಾರದಲ್ಲಿ ಬಹುತೇಕ ಅಂಗಡಿ-ಮುಂಗಟ್ಟುಗಳು ತೆರೆಯಬಹುದು. ಆದರೆ, ಎಲ್ಲ ಅಂಗಡಿ-ಮುಂಗಟ್ಟುಗಳು ಸಂಜೆ 6:30ಕ್ಕೆ ಮುಚ್ಚಬೇಕು. ಸಾಮಾಜಿಕ ಅಂತರ ಮತ್ತು ಮಾಸ್ಕ್​ ಅನ್ನು ಕಡ್ಡಾಯವಾಗಿ ಧರಿಸಲೇಬೇಕೆಂದರು.
ಇದನ್ನೂ ಓದಿ:ಕರೊನಾ ಶಂಕಿತೆಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಹೈಡ್ರಾಮ ಸೃಷ್ಟಿಸಿ ಪೇದೆಗಳಿಬ್ಬರು ಪರಾರಿ
ನಾಳೆಯಿಂದ ಸಂಜೆ 6:30ರವರೆಗೆ ಯಾವುದೇ ವಾಹನಗಳ ಪರಿಶೀಲನೆ ಇರಲ್ಲ. ಒಂದು ವೇಳೆ ವಿನಾಕಾರಣ ಓಡಾಡುವ ಬಗ್ಗೆ ಶಂಕೆ ಇದ್ದರೆ ಪರಿಶೀಲಿಸುತ್ತೇವೆ. ಯಾವುದೇ ವ್ಯಾಪಾರಸ್ಥರಾದರೂ ಸಂಬಂಧಿಸಿದ ದಾಖಲಾತಿ ತೋರಿಸಬೇಕು. 30ರ ವೇಗದಲ್ಲಿ ಮಾತ್ರ ವಾಹನ ಓಡಾಡಬೇಕು. ಹೆಚ್ಚಿನ ವೇಗದಲ್ಲಿ ಓಡಾಡಿದರೇ ಕ್ರಮ ತೆಗದುಕೊಳ್ಳುತ್ತೇವೆಂದು ಎಚ್ಚರಿಸಿದರು.
ಸಂಜೆ 7 ರಿಂದ ಬೆಳಗ್ಗೆ 7ರವರೆಗೆ ಕಟ್ಟುನಿಟ್ಟಾಗಿ ಕರ್ಪ್ಯೂ ವಾತಾವರಣ ಇರಲೇಬೇಕು. ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕು. ಇಷ್ಟು ದಿನ ಲಾಕ್​ಡೌನ್​​ನಲ್ಲಿ ವಿವಿಧ ಸಂಚಾರಿ ನಿಯಮದ ಕುರಿತು ಹೆಚ್ಚಾಗಿ ಗಮನ ಹರಿಸಿರಲಿಲ್ಲ. ನಾಳೆಯಿಂದ ಎಲ್ಲ ಮಾದರಿಯ ಸಂಚಾರಿ ನಿಮಯಗಳನ್ನು ಪಾಲೀಸಲೇಬೇಕೆಂದು ಸೂಚಿಸಿದರು.
ಮದ್ಯ ಮಾರಾಟಕ್ಕೆ ಸಂಜೆ 6ರವರೆಗೆ ಮಾತ್ರ ಗಡುವು. ಮದ್ಯದಂಗಡಿ ಎದುರು ಬ್ಯಾರಿಕೇಡ್ ಹಾಕಬೇಕು. ಸಾಮಾಜಿಕ ಅಂತರ ಕಾಪಾಡಬೇಕು. ಮಾಸ್ಕ್ ಧರಿಸುವುದರ‌ ಕುರಿತು ಗಮನಹರಿಸಬೇಕು. ಮದ್ಯದಂಗಡಿ ಎದುರು ಸಿಸಿಟಿವಿ ಕಡ್ಡಾಯವಾಗಿದೆ. ಆರ್ಥಿಕ ಸ್ಥಿತಿ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಮಾದರಿಯ ಅಂಗಡಿ-ಮುಂಗಟ್ಟುಗಳಿಗೆ ಅವಕಾಶ ನೀಡಲಾಗಿದೆ ಎಂದರು.
ಇದನ್ನೂ ಓದಿ:ಸುಳ್ಳು ಹೇಳಿ ಬಾಯ್​ಫ್ರೆಂಡ್​ ನೋಡಲು ಹೋದ ಕೇರಳ ಬ್ಯೂಟಿಷಿಯನ್ ದುರಂತ ಅಂತ್ಯವಾಗಿದ್ದು ಹೇಗೆ?​
ಮದುವೆಗೆ 50 ಮತ್ತು ಸಾವಿಗೆ 20 ಜನ ಮಾತ್ರ ಕಡ್ಡಾಯ. ಯಾವುದೇ ಧಾರ್ಮಿಕ ಕಾರ್ಯ ಚಟುವಟಿಕೆಗಳು ಇರುವುದಿಲ್ಲ. ನಾಳೆ ರಂಜಾನ್ ಹಬ್ಬ ಕಾನೂನಿನ ಷರತ್ತುಗಳ ಅನ್ವಯ ನಡೆಯುತ್ತದೆ. ಹಬ್ಬವನ್ನು ಮನೆ-ಮನೆಗಳಿಲ್ಲಿಯೇ ಆಚರಣೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಐಟಿ-ಬಿಟಿ ಅವರು ರಾತ್ರಿ ಪಾಳಿಯಿದ್ದರೆ, ಕರ್ಫ್ಯು ಪಾಸ್ ತೆಗೆದುಕೊಳ್ಳಬೇಕು. ಬೆಂಗಳೂರಿನಿಂದ ಹೊರ ರಾಜ್ಯಕ್ಕೆ ಹೋಗಲು ಆನ್​ಲೈನ್ ಮೂಲಕ ಪಾಸ್​ಗೆ ಅರ್ಜಿ‌ ಸಲ್ಲಿಸಬಹುದು. ಮಹಾರಾಷ್ಟ್ರ, ಕೇರಳ, ತಮಿಳುನಾಡಿಗೆ ಹೋಗಲು ಅಲ್ಲಿನ‌ ಆಡಳಿತದಿಂದ ಎನ್​ಓಸಿ ಸಿಕ್ಕರೇ ಮಾತ್ರ ಇಲ್ಲಿಂದ ಅವಕಾಶವೆಂದರು.
ನಿಯಮಗಳು ಉಲ್ಲಂಘನೆಯಾದರೆ ಸೆಕ್ಷನ್ 188, ಎನ್​ಡಿಎಂಎ ಆಕ್ಟ್ 51ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಹಸಿ ಹಸಿಯಾಗಿ ಹಾವನ್ನು ತಿಂದವನ ಶ್ವಾಸಕೋಶದಲ್ಲಿ ರಾಶಿರಾಶಿ ಹುಳು!
ಕರೊನಾ ಹಾಟ್​ಸ್ಫಾಟ್​ ಆಗಿದೆ ದಾವಣಗೆರೆ; ಇಂದು ಒಂದೇ ದಿನದಲ್ಲಿ ಬರೋಬ್ಬರಿ 21 ಕೇಸ್​ಗಳು ಪತ್ತೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − five =
Remember me
