ಬೆಂಗಳೂರು:ಮುಷ್ಕರದ ಹೆಸರಿನಲ್ಲಿ ಚೇಷ್ಟೆ ಮಾಡಿದರೆ ಅಂತಹವರನ್ನು ಬಂಧಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ವಾಹನ ಸವಾರರಿಗೆ ತೊಂದರೆ ಕೊಟ್ಟರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ ಅವರು, ಏ.21ರ ವರೆಗೆ ಕರೊನಾ ಹಿನ್ನೆಲೆಯಲ್ಲಿ ನಿಷೇದಾಜ್ಞೆ ಜಾರಿಯಲ್ಲಿದೆ. ಕೋವಿಡ್ ಪ್ರೋಟೋಕಾಲ್ ಇರುವ ಕಾರಣಯಾವ ಪ್ರತಿಭಟನೆಗೂ ಅಕಾಶಗಳಿಲ್ಲ. ಪ್ರತಿಭಟನೆ ನಡೆಸಿದರೆ ಅಂತಹವರನ್ನು ಬಂಧಿಸಲಾಗುವುದು. ಎಲ್ಲ ರೀತಿಯ ಬಂದೋಬಸ್ತ್‌ಗೂ ಪೊಲೀಸರು ತಯಾರಾಗಿದ್ದೇವೆ. ಸರ್ಕಾರಿ ಸೊತ್ತನ್ನು ಹಾನಿ ಮಾಡುವುದು ಅಥವಾ ಇತರ ವಾಹನ ಸವಾರರಿಗೆ ತೊಂದರೆ ಕೊಟ್ಟರೆ ಅಂತಹವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇದನ್ನೂ ಓದಿ:ಮಗನ ಜತೆ ಮಗಳ ಮದುವೆ! ಕಳೆದು ಹೋಗಿದ್ದ ಮಗಳನ್ನೇ ಸೊಸೆಯಾಗಿ ತಂದುಕೊಂಡ ತಾಯಿ!
ಯಾರಿಗೂ ಅಡ್ಡಿಪಡಿಸುವಂತಿಲ್ಲ:ಪರ್ಮಿಟ್ ತೆಗೆದುಕೊಂಡು ಸಾರ್ವಜನಿಕರಿಗೆ ಸೇವೆ ಮಾಡಲು ಬರುವ ವಾಹನ ಸವಾರರಿಗೆ ಸೂಕ್ತ ಭದ್ರತೆ ಕಲ್ಪಿಸಲಾಗುವುದು. ಮುಷ್ಕರದ ನೆಪದಲ್ಲಿ ರಸ್ತೆಯ ಮೇಲೆ ಬಂದು ಯಾರಿಗಾದರೂ ಅಡ್ಡಿ ಪಡಿಸಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ರಸ್ತೆಗಿಳಿದು ಕಲ್ಲು ತೂರಾಟ ರಸ್ತೆ ತಡೆ ಮಾಡಿದರೆ ಅಥವಾ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಯಾರಾದರೂ ಚೇಷ್ಟೆ ಮಾಡಿದರೆ ಅಂತಹವರನ್ನು ಬಂಧಿಸುತ್ತೇವೆ. ಕರ್ತವ್ಯಕ್ಕೆ ಹಾಜರಾಗುವವರಿಗೆ ಆರ್ಮ್ ಎಸ್ಕಾರ್ಟ್‌ನಲ್ಲಿ ಭದ್ರತೆ ಕೊಡುತ್ತೇವೆ. ಈಗಾಗಲೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಭದ್ರತೆ ಕುರಿತು ಚರ್ಚಿಸಲಾಗಿದೆ. ನಾಳೆ ಸರ್ಕಾರಿ ಬಸ್ ಇಲ್ಲದಿದ್ದರೆ ಖಾಸಗಿಯವರು ಸಹಕಾರ ನೀಡಿದರೆ ಅವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಕಮಲ್ ಪಂತ್ ವಿವರಿಸಿದ್ದಾರೆ.
ನಾಳೆ ಖಾಸಗಿ ಬಸ್‌ಗಳದ್ದೇ ಕಾರುಬಾರು? ಸರ್ಕಾರದಿಂದ ವ್ಯವಸ್ಥೆ- ದರ ವಸೂಲಿ ಕುರಿತು ನೀಡಿದೆ ಎಚ್ಚರಿಕೆ..

ಪತ್ನಿ ಮಲಗಿದ್ದ ಮನೆಗೆ ಬೆಂಕಿ ಇಟ್ಟು 7 ಜನರನ್ನ ಕೊಂದ ಪತಿ! ಬಳಿಕ ಮಗಳಿಗೆ ಕರೆ ಮಾಡಿ ಮನದಾಳ ಬಿಚ್ಚಿಟ್ಟ ಕ್ರೂರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 11 =
Remember me
