ಬೆಂಗಳೂರು:ರಾತ್ರಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ ಮಾರನೇ ದಿನವೇ ಯುವತಿಯ ಮೃತದೇಹ ಮನೆಯ ಮುಂದೆಯೇ ನಿಗೂಢವಾಗಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸರ ತನಿಖೆಯಲ್ಲಿ ಭಯಾನಕ ಸಂಗತಿ ಬಯಲಾಗಿದೆ. ಮೃತ ಯುವತಿಯ ಎದುರು ಮನೆಯಲ್ಲಿದ್ದ ಕಾಮುಕನಿಂದಲೇ ಕೊಲೆ ನಡೆದಿರುವುದಾಗಿ ತಿಳಿದುಬಂದಿದೆ.
ನಿನ್ನೆ ಬೆಳಗಿನ ಜಾವ ಮಹಾನಂದಾ ಎಂಬ ಯುವತಿಯ ಮೃತದೇಹ ಆಕೆ ವಾಸವಿದ್ದ ಮನೆಯ ಮುಂದೆಯೇ ಪತ್ತೆಯಾಗಿತ್ತು. ಮಹಾನಂದಾಳ ಅಕ್ಕ ಬೆಳಗ್ಗೆ ಎದ್ದು ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು. ಪಕ್ಕದ ಮನೆಯಲ್ಲಿ ವಾಸ ಮಾಡುತ್ತಿದ್ದವನಿಂದಲೇ ಮಹಾನಂದಾಳ ಕೊಲೆಯಾಗಿದೆ ಎಂಬುದು ಬಯಲಾಗಿದೆ.
ಆರೋಪಿಯನ್ನು ಒಡಿಶಾ ಮೂಲದ ಕೃಷ್ಣ ಚಂದ ಸೇಟಿ ಎಂದು ಗುರುತಿಸಲಾಗಿದೆ. ಟೆಕ್​ಪಾರ್ಕ್​​ನಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡ್ತಿದ್ದ ಅರೋಪಿ ಕೃಷ್ಣನನ್ನು ಮಹದೇವಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಪೊಲೀಸರಿಗೇ ಸುತ್ತಿಕೊಂಡ ಬಿಟ್ ಕಾಯಿನ್ ಉರುಳು: ಜಪ್ತಿ ಮಾಡಿದ್ದ ಮೊಬೈಲ್, ಪೆನ್​ಡ್ರೖೆವ್, ಮ್ಯಾಕ್ಬುಕ್​ನಲ್ಲಿ ಸಾಕ್ಷಿ ನಾಶ
ಮೊನ್ನೆ (ಆ.10) ರಾತ್ರಿ ಮಹಾನಂದಾ ಅನ್ನ ಮಾಡಲು ಸ್ಟವ್ ಮೇಲೆ ಅಕ್ಕಿ ಇಟ್ಟಿದ್ದಳು. ಇದರ ನಡುವೆ ಆಕೆ ಮನೆಯಿಂದ ಹೊರಗೆ ಬಂದಿದ್ದಳು. ಈ ವೇಳೆ ಪಕ್ಕದ ಮನೆಯ ಬಾಗಿಲ ಬಳಿ ಬಂದಾಗ ಆರೋಪಿ ಕೃಷ್ಣ ಆಕೆಯನ್ನು ಹಿಡಿದು ಬಲವಂತವಾಗಿ ಮನೆಯ ಒಳಗೆ ಎಳೆದುಕೊಂಡಿದ್ದಾನೆ. ಬಳಿಕ ಯುವತಿ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾನೆ.
ಆರೋಪಿ ಕೃಷ್ಣ, ಮಹಾನಂದಾಗೆ ಬಲವಂತವಾಗಿ ಮುತ್ತು ನೀಡಲು ಮುಂದಾಗಿದ್ದಾನೆ. ಆದರೆ, ಅದಕ್ಕೆ ನಿರಾಕರಿಸಿ, ಮಹಾನಂದಾ ಕಿರುಚಾಡಲು ಯತ್ನಿಸಿದ್ದಾಳೆ. ಇದರಿಂದ ಎಲ್ಲರಿಗೂ ಗೊತ್ತಾಗಿ ಬಿಡುತ್ತದೆ ಎಂದು ಹೆದರಿದ ಆರೋಪಿ, ಮಹಾನಂದಾಳನ್ನು ಹಿಂಬದಿಯಿಂದ ತಬ್ಬಿ, ಆಕೆಯ ಮೂಗು ಮತ್ತು ಬಾಯಿಯನ್ನು ಒಂದು ಕೈನಲ್ಲಿ ಮುಚ್ಚಿ, ಮತ್ತೊಂದು ಕೈನಿಂದ ಕುತ್ತಿಗೆ ಹಿಸುಕಿದ್ದಾನೆ. ಈ ವೇಳೆ ಕಿರುಚಾಡಲು ಸಾಧ್ಯವಾಗದೆ ಮಹಾನಂದಾ ಉಸಿರುಗಟ್ಟಿ ಮೃತಪಟ್ಟಿದ್ದಾಳೆ.
ಕೊಲೆ ಬಳಿಕ ಬೆಡ್​ಶೀಟ್​ನಲ್ಲಿ ಮಹಾನಂದಾಳ ಮೃತದೇಹವನ್ನು ಸುತ್ತಿ, ಮನೆಯ ಮೂಲೆಯೊಂದರಲ್ಲಿ ಇಟ್ಟಿದ್ದ. ಹನ್ನೆರಡು ಗಂಟೆ ಸುಮಾರಿಗೆ ಆರೋಪಿಯ ಪತ್ನಿ ಮನೆಗೆ ಬಂದಿದ್ದಾರೆ. ತಾನೂ ಏನು ಮಾಡೇ ಇಲ್ಲ ಎನ್ನುವಂತೆ ನಟಿಸಿದ ಆರೋಪಿ, ಬೆಳಗಿನ ಜಾವ ಮನೆಯೊಳಗಿದ್ದ ಶವವನ್ನು ತಂದು ಮೃತಳ ಮನೆ ಮುಂದೆ ಹಾಕಿದ್ದಾನೆ.
ಇದಾದ ಬಳಿಕವೂ ಆರೋಪಿ ಅಲ್ಲಿಯೇ ಇದ್ದ. ತನಗೆ ಏನೂ ಗೊತ್ತೇ ಇಲ್ಲ ಎಂಬಂತೆ ನಾಟಕವಾಡಿದ್ದ. ಆದರೆ, ತನಿಖೆಯಲ್ಲಿ ಆರೋಪಿ ಕೃಷ್ಣ ಸಿಕ್ಕಿಬಿದ್ದಿದ್ದು, ಆತನನ್ನ ಬಂಧಿಸಿರುವ ಮಹದೇವಪುರ ಠಾಣಾ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಅನಧಿಕೃತ ಶಾಲೆಗಳಿಗೆ ಕೊಂಚ ರಿಲ್ಯಾಕ್ಸ್:1,695 ಶಾಲೆಗಳನ್ನು ಹಂತ ಹಂತವಾಗಿ ಮುಚ್ಚಲು ಕ್ರಮ; ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ
ಮೃತ ಮಹಾನಂದಾಗೆ 24 ವರ್ಷ ವಯಸ್ಸಾಗಿತ್ತು. ಕಲಬುರಗಿ ಮೂಲದ ಮಹಾನಂದಾ ತನ್ನ ಅಕ್ಕನ ಜತೆ ಶೆಲ್ ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡುತ್ತಿದ್ದಳು. ಗುರುವಾರ ರಾತ್ರಿ ಅಡುಗೆ ಮಾಡೋದಕ್ಕೆ ಅಂತ ಮಹಾನಂದಾ ಸ್ಟೌ ಮೇಲೆ ಅಕ್ಕಿ ಇಟ್ಟಿದ್ದಳು. ಬಳಿಕ ಮನೆಯಿಂದ ಹೊರಹೋಗಿ ಕಾಣೆಯಾಗಿದ್ದಳು. ರಾತ್ರಿಯಾದರೂ ತಂಗಿ ಮನೆಗೆ ಬಾರದ ಹಿನ್ನೆಲೆ ಮಹಾನಂದಾಳ ಅಕ್ಕ ದೂರು ನೀಡಿದ್ದಳು. ಬೆಳಗ್ಗೆ 5 ಗಂಟೆಗೆ ಎದ್ದು ನೋಡಿದಾಗ ಮನೆಯ ಬಳಿ ಸಹೋದರಿಯ ಮೃತದೇಹವನ್ನು ಕಂಡು ಮಹಾನಂದಾಳ ಅಕ್ಕ ಆಘಾತಕ್ಕೆ ಒಳಗಾಗಿದ್ದರು. ಘಟನಾ ಸ್ಥಳಕ್ಕೆ ಮಹದೇವಪುರ ಠಾಣಾ ಪೊಲೀಸರು ಹಾಗೂ ಸೀನ್ ಆಫ್ ಕ್ರೈಮ್ ಅಫೀಸರ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಕರಣ ತನಿಖೆಯಿಂದ ಬಯಲಾಗಿದೆ.(ದಿಗ್ವಿಜಯ ನ್ಯೂಸ್​)
ಬಾಹುಬಲಿ ಚಿತ್ರದ ಕಟ್ಟಪ್ಪ ಖ್ಯಾತಿಯ ನಟ ಸತ್ಯರಾಜ್​ಗೆ ಮಾತೃ ವಿಯೋಗ

ಪೊಲೀಸರಿಗೇ ಸುತ್ತಿಕೊಂಡ ಬಿಟ್ ಕಾಯಿನ್ ಉರುಳು: ಜಪ್ತಿ ಮಾಡಿದ್ದ ಮೊಬೈಲ್, ಪೆನ್​ಡ್ರೖೆವ್, ಮ್ಯಾಕ್ಬುಕ್​ನಲ್ಲಿ ಸಾಕ್ಷಿ ನಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + eighteen =
Remember me
