ಬೆಂಗಳೂರು:ಕೇಂದ್ರ ಸರ್ಕಾರದ ಸೇಫ್ ಸಿಟಿ ಯೋಜನೆಯಡಿ ನಗರದಲ್ಲಿ ನಿರ್ಮಿಸಿರುವ ಸೇಫ್ಟಿ ಐಲ್ಯಾಂಡ್‌ಗೆ ‘ಆಪತ್ಬಾಂಧವ’ ಎಂದು ಹೆಸರಿಡಲು ಬೆಂಗಳೂರು ಪೊಲೀಸ್ ಇಲಾಖೆ ಜನರ ಅಭಿಪ್ರಾಯ ಕೋರಿದೆ.
ಇದನ್ನೂ ಓದಿ:ಜು.8ರಂದು ಎಲ್ಲ ಕೋರ್ಟ್‌ಗಳಲ್ಲಿ ಲೋಕ ಅದಾಲತ್: ನ್ಯಾಯಾಧೀಶ ಮಂಜುನಾಥ ನಾಯಕ್
ಈ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಜಾಲತಾಣದಲ್ಲಿ ಸೇಫ್ಟಿ ಐಲ್ಯಾಂಡ್‌ಗೆ ಆಪತ್ಬಾಂಧವ ಹೆಸರು ನಾಮಕರಣ ಮಾಡಿದರೆ ಹೇಗೆ ಎಂದು ಅಭಿಪ್ರಾಯ ಕೋರಿದ್ದೇವೆ. ಬಹುತೇಕರು ಒಳ್ಳೆಯ ಹೆಸರು ಎಂದು ಅಭಿಮತ ಸೂಚಿಸಿದ್ದಾರೆ. ಇನ್ನೂ ಕೆಲವರು ವಿವಿಧ ಹೆಸರುಗಳನ್ನು ಸೂಚಿಸಿದ್ದು, ಈ ಎಲ್ಲವನ್ನು ಪರಿಗಣಿಸಿ ಆಪತ್ಬಾಂಧವ ಎಂಬ ಹೆಸರು ಅಂತಿಮ ಮಾಡುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ (ಶೇ.60 ಮತ್ತು 40) ಅನುಧಾನದಲ್ಲಿ ‘ಸೇಫ್ ಸಿಟಿ’ ಯೋಜನೆ ಜಾರಿಗೆ ತರಲಾಗಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಸೇಫ್ಟಿ ಐಲ್ಯಾಂಡ್ ಅನುಷ್ಠಾನಕ್ಕೆ ತರಲಾಗಿದೆ. ಈ ಯೋಜನೆಯಲ್ಲಿ 50 ಸೇಫ್ಟಿ ಐಲ್ಯಾಂಡ್ ನಿರ್ಮಾಣದ ಗುರಿ ಹೊಂದಿದ್ದು, ಈಗಾಗಲೇ 30 ಕಡೆ ಸ್ಥಾಪಿಸಲಾಗಿದ್ದು, ಬಾಕಿ 20 ಕಡೆ ಅಳವಡಿಸುವ ಕಾರ್ಯ ಮುಂದುವರಿದಿದೆ ಎಂದು ಹೇಳಿದರು.
ಇದನ್ನೂ ಓದಿ:ಬಾಲಕಿಯರ ಶೌಚಾಲಯದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ; ಪ್ರಾಂಶಪಾಲರ ವಿರುದ್ಧ ಪೋಷಕರ ಆಕ್ರೋಶ!
ಸಾರ್ವಜನಿಕರ ಸುರಕ್ಷತೆ, ನೊಂದ ಮಹಿಳೆ, ಮಕ್ಕಳ ಸಂರಕ್ಷಣೆಗೆ ಬೇಕಾದ ಪೊಲೀಸ್, ವೈದ್ಯಕೀಯ ಮತ್ತು ಕಾನೂನು ನೆರವು ಒದಗಿಸುವುದು ಇದರ ಉದ್ದೇಶವಾಗಿದೆ. ಮೊಬೈಲ್, ಸರ, ಬ್ಯಾಗ್ ಇನ್ನಿತರ ಬೆಲೆ ಬಾಳುವ ವಸ್ತುಗಳು ಕಳ್ಳತನವಾದ ಸಮಯದಲ್ಲಿ ಅಥವಾ ಕಿಡಿಗೇಡಿಗಳಿಂದ ಹಲ್ಲೆ, ದೌರ್ಜನ್ಯ, ಲೈಂಗಿಕ ಕಿರುಕುಳ, ನಿಂದನೆ, ದೌರ್ಜನ್ಯಕ್ಕೆ ಒಳಗಾದ ಸಮಯದಲ್ಲಿ ಅಭದ್ರತೆ ಕಾಡುತ್ತಿದೆ ಎಂದಾಗ ‘ಆಪತ್ಬಾಂಧವ’ ಕೆಂಪು ಬಟನ್ ಒತ್ತಿದರೇ ಪೊಲೀಸ್ ಕಂಟ್ರೋಲ್ ರೂಮ್ (ಕಮಾಂಡ್ ಸೆಂಟರ್)ಗೆ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಈ ರೀತಿ ಮಾಡಿದಾಗ ನೇರವಾಗಿ ಪೊಲೀಸರು, ಸಂತ್ರಸ್ತರ ಜತೆಗೆ ಮಾತನಾಡಿ ದೂರು ಪಡೆಯುತ್ತಿದ್ದಂತೆ ಸಮೀಪ ಇರುವ ಹೊಯ್ಸಳ ವಾಹನಕ್ಕೆ ಮಾಹಿತಿ ರವಾನೆ ಮಾಡಿ ಸ್ಥಳಕ್ಕೆ ಕಳುಹಿಸಿಕೊಡುತ್ತಾರೆ. ಕೆಲವೇ ನಿಮಿಷದಲ್ಲಿ ಹೊಯ್ಸಳ ಸಿಬ್ಬಂದಿ ಬಂದು ಸಂತ್ರಸ್ತರಿಗೆ ಸಹಾಯ ಮಾಡಲಿದ್ದಾರೆ. ದಿನದ 24*7 ಸೇವೆ ಸಿಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ಮಟ್ಟದಲ್ಲಿ ನಂದಿನಿ ಬ್ರ್ಯಾಂಡ್ ಸದ್ದು; ದುಬೈನಲ್ಲಿ ಉದ್ಘಾಟನೆಗೊಳ್ಳಲಿದೆ ‘ನಂದಿನಿ ಕೆಫೆ ಮೂ’!
ತಾಂತ್ರಿಕ ಸೌಲಭ್ಯದಿಂದ ಚಹರೆ ಪತ್ತೆಗೆ: ‘ಆಪತ್ಬಾಂಧವ’ ತುರ್ತು ಕರೆ ಬಟನ್ ಒತ್ತಿದ್ದಾಗ ಸಂತ್ರಸ್ತರೊಂದಿಗೆ ಕಮಾಂಡ್ ಸೆಂಟರ್ ಸಿಬ್ಬಂದಿ ನೇರವಾಗಿ ಸಂಭಾಷಣೆ ನಡೆಸಿ ಕೃತ್ಯ ಎಸಗಿದ ಅನುಮಾನಸ್ಪದ ವ್ಯಕ್ತಿಯ ವಿವರ ಪಡೆಯಲಿದ್ದಾರೆ. ಯಾವ ಬಟ್ಟೆ, ಅದರ ಬಣ್ಣ, ತಲೆಗೆ ಯಾವ ಹೆಲ್ಮೆಟ್ ಧರಿಸಿದ್ದ. ದ್ವಿಚಕ್ರ ವಾಹನ ಅಥವಾ ಬೈಕ್‌ನಲ್ಲಿ ಬಂದಿದ್ದರ ಮಾಹಿತಿ ಅಗತ್ಯವಿರುತ್ತದೆ ಎಂದು ಹೇಳಿದರು.
ಅದರ ಕಲರ್, ನಂಬರ್ ಇನ್ನಿತರ ಮಾಹಿತಿ ಪಡೆದು ತಮ್ಮ ನಿಯಂತ್ರಣದಲ್ಲಿ ಇರುವ ಅತ್ಯಾಧುನಿಕ ಕ್ಯಾಮರಾದಲ್ಲಿ ಸರ್ಚ್ ಮಾಡಲಿದ್ದಾರೆ. ಕೆಲವೇ ಸೆಕೆಂಡ್‌ನಲ್ಲಿ ಸಂತ್ರಸ್ತ ವ್ಯಕ್ತಿ ನೀಡುವ ಸುಳಿವಿನ ಮೇರೆಗೆ ಸಮೀಪದಲ್ಲಿ ಅನುಮಾನಾಸ್ಪದ ವ್ಯಕ್ತಿ ಮತ್ತು ವಾಹನ ಪತ್ತೆಹಚ್ಚಿ ಸಮೀಪದ ಹೊಯ್ಸಳ ಸಿಬ್ಬಂದಿಗೆ ಮಾಹಿತಿ ರವಾನೆ ಮಾಡಲಿದೆ. ಕೆಲವೇ ನಿಮಿಷದಲ್ಲಿ ಪ್ರಕ್ರಿಯೆ ಮುಗಿಯಲಿದ್ದು, ಪೊಲೀಸರು ಅಲರ್ಟ್ ತಕ್ಷಣ ನೆರವಿಗೆ ಬರಲಿದ್ದಾರೆ ಎಂದು ಅಧಿಕಾರಿಗಳು ‘ಆಪತ್ಬಾಂಧವ’ದ ಬಗ್ಗೆ ಸ್ಪಷ್ಟವಾಗಿ ವಿವರಿಸಿದ್ದಾರೆ.

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × two =
Remember me
