ಬೆಂಗಳೂರು:ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಮೋಸವೆಸಗುತ್ತಿದ್ದ ಅಂತಾರಾಜ್ಯ ವಂಚಕರ ವಿರುದ್ಧ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ಶನಿವಾರ ಎಫ್​ಐಆರ್​ ದಾಖಲಾಗಿದೆ.
ಕೇರಳ ಮೂಲದ ಅಮ್ಜದ್ ಮತ್ತು ಖುಷಿ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ತಾನೋರ್ವ ಬಿಲ್ಡರ್ ಎಂದು ಪರಿಚಯಿಸಿಕೊಂಡು ಅನೇಕರಿಗೆ ಅಮ್ಜದ್​ ವಂಚನೆ ಎಸಗಿದ್ದಾನೆಂದು ತಿಳಿದುಬಂದಿದೆ. ಆತನ ಕೃತ್ಯಕ್ಕೆ ಖಷಿ ಎಂಬ ಮಹಿಳೆಯು ಸಹ ಕೈಜೋಡಿಸಿರುವುದು ಬೆಳಕಿಗೆ ಬಂದಿದೆ.ಇದನ್ನೂ ಓದಿ:VIDEO| ರಾತ್ರಿ ತನ್ನಷ್ಟಕ್ಕೆ ತಾನೇ ವರ್ಕೌಟ್​ ಮಾಡುತ್ತಿರೋ ಜಿಮ್​ ಯಂತ್ರ: ನಿಗೂಢ ಭೇದಿಸಿದ ಪೊಲೀಸರು!
ಬೆಂಗಳೂರಿನ ಉದ್ಯಮಿ ಶಾಜೀ ಜಾರ್ಜ್ ಥಾಮಸ್ ಎಂಬುವವರಿಗೂ ವಂಚಿಸಿರುವುದಲ್ಲದೆ, ಪಾವತಿಸಬೇಕಾದ ಹಣ ಕೇಳಿದಕ್ಕೆ ಜೀವ ಬೆದರಿಕೆ ಹಾಕಿದ್ದಾನಂತೆ.
ಘಟನೆ ಹಿನ್ನೆಲೆ ಏನು?48 ಲಕ್ಷ ರೂ.ಗೆ ಬೆನ್ಜ್ ಕಾರು ಖರೀದಿಸುವುದಾಗಿ ಹೇಳಿ ಖತರ್ನಾಕ್ ಜೋಡಿ ಥಾಮಸ್​ ಅವರಿಗೆ ವಂಚಿಸಿದೆ. ಬೆನ್ಜ್ ಕಾರು ಕೊಂಡ್ಯೂಯ್ದು ಎರಡು ತಿಂಗಳಾದರೂ ಹಣ ನೀಡದೆ ಆಟವಾಡಿಸುತ್ತಿರುವ ಅಮ್ಜದ್, ಹಣ ಕೇಳಿದ್ರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಇದೀಗ ಮತ್ತೊಂದು ವರಸೆ ತೆಗೆದಿರುವ ಅಮ್ಜದ್​ ಬೆನ್ಜ್​ ಕಾರನ್ನು 18 ಲಕ್ಷ ವೆಚ್ಚವಾಗುವಷ್ಟು ಹಾಳುಗೆಡವಿದ್ದಾನೆ.
ಶಾಜೀ ಜಾರ್ಜ್ ಥಾಮಸ್ ದೂರಿನ ಹಿನ್ನಲೆ ಎಫ್ಐಆರ್ ದಾಖಲಾಗಿದೆ. ಕೇರಳ ಸೇರಿದಂತೆ ರಾಜ್ಯದ ಹಲವೆಡೆ ವಂಚನೆ ಎಸಗಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ಎಸ್ಕೇಪ್ ಆಗಿರುವ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ.(ದಿಗ್ವಿಜಯ ನ್ಯೂಸ್​)
ಜ್ಯುವೆಲರಿ ಶಾಪ್ ಬಳಿ ಆಚಾರಿ ಕೆಲ್ಸ ಮಾಡ್ತಿದ್ದವ ಕದ್ದು ಸಂಗ್ರಹಿಸಿದ್ದ ಚಿನ್ನದ ಬೆಲೆ ಕೇಳಿದ್ರೆ ದಂಗಾಗ್ತೀರಾ!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + twelve =
Remember me
