ಬೆಂಗಳೂರು:ಪುಡ್ ಡಿಲೆವರಿ ಸಿಬ್ಬಂದಿಯಿಂದ ನಡೆದ ಮಹಿಳೆ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಲ್ಲೆ ಮಾಡಿದ್ದ ಯುವಕನನ್ನು ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.
ಕಾಮರಾಜ್ ಎಂಬ ಡೆಲಿವರಿ ಜೊಮ್ಯಾಟೋ ಸಿಬ್ಬಂದಿಯನ್ನು ಇಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ಹಿತೇಶಾ ಚಂದ್ರಾಣಿ ಹೆಸರಿನ ಯುವತಿ ಮಂಗಳವಾರ ಮಧ್ಯಾಹ್ನ ಊಟವನ್ನು ಜೊಮ್ಯಾಟೋದಲ್ಲಿ ಆರ್ಡರ್​ ಮಾಡಿದ್ದಳು. 3-30 ರ ಸಮಯಕ್ಕೆ ಊಟ ಡೆಲಿವರಿ ಆಗುವುದಾಗಿ ಆ್ಯಪ್​ನಲ್ಲಿ ತಿಳಿಸಲಾಗಿತ್ತು. ಆದರೆ, ಡೆಲಿವರಿ ಬಾಯ್ ಕಾಮರಾಜ್​ 4-30ಕ್ಕೆ ಫುಡ್​ ಡೆಲಿವರಿ ಮಾಡಲು ಆಕೆಯ ಮನೆ ಬಾಗಿಲಿಗೆ ಬಂದಿದ್ದಾನೆ. ಅದಾಗಲೇ ಹಿತೇಶಾ ಜೊಮ್ಯಾಟೋ ಸಿಬ್ಬಂದಿಗೆ ಫುಡ್​ ಡೆಲಿವರಿ ಲೇಟಾಗಿರುವ ಬಗ್ಗೆ ಮಾಹಿತಿ ನೀಡಿದ್ದಳಂತೆ. ಕಾಮರಾಜ್​ ಮನೆ ಬಾಗಿಲಿಗೆ ಬಂದಾಗ, ಆತನನ್ನು ಅಲ್ಲಿಯೇ ನಿಲ್ಲಿಸಿ, ಆರ್ಡರ್​ ಕ್ಯಾನ್ಸಲ್​ ಮಾಡಿರುವುದಾಗಿ ಆತನಿಗೆ ಹೇಳಿದ್ದರು.
ಇದನ್ನೂ ಓದಿ:ಪ್ಯಾಂಟ್ ಜಾರಿದ್ರೆ ಅವರ ಪ್ಯಾಂಟ್​ನ್ನು ಅವರೇ ಹಾಕಿಕೊಳ್ಳಬೇಕು: ಡಿಕೆಶಿ ಹೀಗಂದಿದ್ದು ಯಾರಿಗೆ?
ಹಾಗೆ ಹೇಳಿದ ಹಿತೇಶಾ ಬಾಗಿಲು ಹಾಕಿಕೊಳ್ಳಲು ಪ್ರಯತ್ನಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಕಾಮರಾಜ್​, ಬಾಗಿಲನ್ನು ದೂಡಿ, ಮನೆಯೊಳಗೆ ಹೋಗಿ ಊಟವನ್ನು ಇಟ್ಟು ಬಂದಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ‘ನಿನ್ನ ಗುಲಾಮ ನಾನಲ್ಲ’ ಎಂದು ಕಾಮರಾಜ್​ ಬೈದಿದ್ದಾನೆ. ಆತನ ವರ್ತನೆಯಿಂದ ಸಿಟ್ಟಿಗೆದ್ದ ಹಿತೇಶಾ ಕೈಗೆ ಚಪ್ಪಲಿ ಎತ್ತಿಕೊಂಡಿದ್ದಳು ಎನ್ನಲಾಗಿದೆ. ಈ ವೇಳೆ ಆತ ಆಕೆಯ ಮುಖಕ್ಕೆ ಪಂಚ್​ ಮಾಡಿರುವುದಾಗಿಯೂ ಆಕೆ ಹೇಳಿಕೊಂಡಿದ್ದಾಳೆ. ಮೂಗಿನಿಂದ ರಕ್ತ ಬರುತ್ತಿರುವ ಫೋಟೋ ಮತ್ತು ವಿಡಿಯೋಗಳನ್ನು ಹಿತೇಶಾ ಹಂಚಿಕೊಂಡಿದ್ದರು. ಇದು ಇಂದು ಸಾಕಷ್ಟು ವೈರಲ್ ಆಗಿತ್ತು.
ಊಟ ಡೆಲಿವರಿ ಲೇಟಾಗಿದ್ದಕ್ಕೆ ಮುಖಕ್ಕೆ ಪಂಚ್​ ಹೊಡೆಸಿಕೊಂಡ ಯುವತಿ! ಇನ್​​ಫ್ಲೂಯೆನ್ಸರ್​ ಕಥೆ ಕೇಳೋರ್ಯಾರು?

ಸಚಿವರು ಊಟಕ್ಕೆ ಹಾಜರ್, ಸದನಕ್ಕೆ ಚಕ್ಕರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 3 =
Remember me
