ಬೆಂಗಳೂರು:ವೈಟ್​​ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್, ಇಬ್ಬರು ಪೊಲೀಸ್​ ಸಬ್​ ಇನ್ಸ್​ಪೆಕ್ಟರ್ ಹಾಗೂ ಓರ್ವ ಕಾನ್ಸ್​ಟೇಬಲ್​ರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಇನ್ಸ್​​ಪೆಕ್ಟರ್ ರೇಣುಕಾ, ಪಿಎಸ್​ಐ ನವೀನ್ ಮತ್ತು ಗಣೇಶ್ ಹಾಗೂ ಕಾನ್ಸ್​ಟೇಬಲ್ ಹೇಮಂತ್ ಅಮಾನತಾದ ಪೊಲೀಸ್​ ಸಿಬ್ಬಂದಿ. ಎಸಿಬಿ ಸಲ್ಲಿಸಿದ ವರದಿ ಆಧರಿಸಿ ಡಿಜಿಪಿ ಪ್ರವೀಣ್ ಸೂದ್​ ಅವರು ಇನ್ಸ್​ಪೆಕ್ಟರ್ ರೆಣುಕಾರನ್ನು ಅಮಾನತು ಮಾಡಿದರೆ, ಇಬ್ಬರು ಪಿಎಸ್​ಐ ಹಾಗೂ ಓರ್ವ ಕಾನ್ಸ್​ಟೇಬಲ್​ನನ್ನು ಪೊಲೀಸ್​ ಆಯುಕ್ತರು ಅಮಾನತು ಮಾಡಿದ್ದಾರೆ.
ಹೋಂ ಡೆಕೊರೇಷನ್ ವಿವಾದ ಬಗೆಹರಿಸುವ ನೆಪದಲ್ಲಿ ಉದ್ಯಮಿ ಬಳಿ 10 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಅಮಾನತಾದ ಪೊಲೀಸ್​ ಸಿಬ್ಬಂದಿಯ ಮೇಲಿದೆ. ದೂರುದಾರ ಗೋಪಿನಾಥ್ ಎಂಬುವವರ ಬಳಿ ಹಣಕ್ಕೆ ಬೇಡಿಕೆ ಇಡುವಂತೆ ಇನ್ಸ್​ಪೆಕ್ಟರ್​​ ರೇಣುಕಾ ಸೂಚನೆ ನೀಡಿದ ಹಿನ್ನಲೆಯಲ್ಲಿ ಇಬ್ಬರು ಪಿಎಸ್​ಐಗಳು 5 ಲಕ್ಷ ರೂ. ಹಣ ಪಡೆದಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಎಸಿಬಿಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಹಣ ಪಡೆದ ಆರೋಪ ಹಿನ್ನಲೆಯಲ್ಲಿ ಎಸಿಬಿ ಅಧಿಕಾರಿಗಳು ಇನ್ಸ್​ಪೆಕ್ಟರ್ ರೇಣುಕಾ ಮನೆ ಮೇಲೆ ದಾಳಿ ಮಾಡಿದ್ದರು. ಕಳೆದ ಒಂದು ವರ್ಷದ ಹಿಂದೆ ರೇಣುಕಾ, ಪಿಎಸ್ಐಯಿಂದ ಇನ್ಸ್​ಪೆಕ್ಟರ್​ಗೆ ಬಡ್ತಿ ಪಡೆದಿದ್ದರು. ಈ ಹಿಂದೆಯೂ ಸಹ ಹಿರಿಯ ಪೊಲೀಸ್ ಅಧಿಕಾರಿಗಳು ರೇಣುಕಾಗೆ ಎಚ್ಚರಿಕೆ ನೀಡಿದ್ದರು. ವೈಟ್ ಫೀಲ್ಡ್ ಸಿಇಎನ್ ಠಾಣೆಗೆ ಬಂದ ಎರಡೇ ದಿನದಲ್ಲಿ ಲಂಚ ಪಡೆದ ಆರೋಪ ಹೊತ್ತು ರೇಣುಕಾ ಅಮಾನತಾಗಿದ್ದಾರೆ.(ದಿಗ್ವಿಜಯ ನ್ಯೂಸ್)
Tokyo Olympic 2020: ಕಾಂಡೋಮ್​ ಬಳಸಿ ಪದಕ ಗೆದ್ದೆ ಎಂದ ಒಲಿಂಪಿಕ್ಸ್​ ಸ್ಪರ್ಧಿ! ಹೀಗಿದೆ ಆಕೆ ಕೊಟ್ಟ ವಿವರಣೆ

ತಡೆಯಾಜ್ಞೆ ತಂದವರಿಗಿಲ್ಲವೇ ಮಂತ್ರಿಗಿರಿ?: ಬಿಜೆಪಿ-ಆರ್​ಎಸ್​ಎಸ್ ವಲಯದಲ್ಲಿ ಚರ್ಚೆ; ಲಾಭ-ನಷ್ಟಗಳ ಬಗ್ಗೆ ಅವಲೋಕನ..

https://www.vijayavani.net/%e0%b2%a8%e0%b2%9f%e0%b2%bf-%e0%b2%95%e0%b3%83%e0%b2%a4%e0%b2%bf-%e0%b2%b6%e0%b3%86%e0%b2%9f%e0%b3%8d%e0%b2%9f%e0%b2%bf-%e0%b2%95%e0%b3%88%e0%b2%af%e0%b2%b2%e0%b3%8d%e0%b2%b2%e0%b2%bf-%e0%b2%87/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
