ಬೆಂಗಳೂರು:ಬಯಸದೇ ಬಂದ ಭಾಗ್ಯ ಅಂತೀವಲ್ಲ ಅದೇ ರೀತಿಯ ಸ್ಟೋರಿ ಇದು! ಕೇವಲ ಹತ್ತೇ ಹತ್ತು ಸೆಕೆಂಡ್​ನಲ್ಲಿ ಯುವಕನೊಬ್ಬ ಲಕ್ಷಾಧಿಪತಿಯಾಗಿಬಿಟ್ಟಿದ್ದ. ಬರಿಗೈಯಲ್ಲಿ ಬಂದವನಿಗೆ ಸಿಕ್ಕಿತ್ತು ಬರೋಬ್ಬರಿ 94 ಲಕ್ಷ ರೂಪಾಯಿ ಹಣ. ಅಷ್ಟೂ ಹಣ ಒಮ್ಮೆಲೆ ಸಿಕ್ಕಿದ್ದೇ ತಡ ಏನು ಮಾಡಬೇಕೆಂದು ಗೊತ್ತಾಗದೆ ಗೊಂದಲದಲ್ಲೇ ಆರು ದಿನ ಕಳೆದಿದ್ದ. ಸುಮಾರು 300ಕ್ಕೂ ಹೆಚ್ಚು ಕ್ಯಾಮರಾ ಪರಿಶೀಲಿಸಿ ಚಂದ್ರಾ ಲೇಔಟ್ ಪೊಲೀಸರು ಕೊನೆಗೂ ಪ್ರಕರಣವನ್ನು ಭೇದಿಸಿದ್ದು, 94 ಲಕ್ಷ ರೂ. ಹಣದ ಕುತೂಹಲಕಾರಿ ಕಹಾನಿ ಇಲ್ಲಿದೆ.
ಚಂದ್ರಲೇಔಟ್ ನಿವಾಸಿ ಪ್ರಮೋದ್ ಎಂಬುವರು ಸೈಟ್ ಖರೀದಿಸಲು 94 ಲಕ್ಷ ರೂ. ಕೂಡಿಟ್ಟಿದ್ದ. ಅದನ್ನು ಎಣಿಸಲೆಂದು ಸ್ನೇಹಿತನ ಅಂಗಡಿಗೆ ಹಣ ತೆಗೆದುಕೊಂಡು ಹೋಗಲು ಮುಂದಾಗಿದ್ದ. ಅಲ್ಲದೇ ವಕೀಲರ ಕಚೇರಿಗೆ ತೆರಳಲು ರೆಡಿಯಾಗಿದ್ದ. ಮನೆಯಿಂದ ಬ್ಯಾಗ್ ಮತ್ತು ಬಾಕ್ಸ್​ನಲ್ಲಿ ಹಣ ಹಾಕಿಕೊಂಡು ಪ್ರಮೋದ್​ ಹೊರಟಿದ್ದ.
ಮನೆ ಕೆಳಗೆ ಬರ್ತಿದ್ದಂತೆ ಕಾರಿನ ಡೋರ್ ಓಪನ್ ಮಾಡಬೇಕಿತ್ತು. ಹಾಗಾಗಿ ಕೈನಲ್ಲಿದ್ದ ಹಣದ ಬಾಕ್ಸ್​ ಅನ್ನು ಅಪರಿಚಿತ ಆ್ಯಕ್ಟಿವಾ ಬೈಕ್ ಮೇಲಿಟ್ಟಿದ್ದ. ದಾಖಲಾತಿಗಳಿದ್ದ ಬ್ಯಾಗ್ ಅನ್ನು ಕಾರಿನಲ್ಲಿ ಹಾಕಿಕೊಂಡು ಹೊರಟಿದ್ದ. ಇತ್ತ ಬೈಕ್​ ಮಾಲೀಕ ವರುಣ್ ಗೌಡ ಬೈಕ್​ ಬಳಿಗೆ ಬಂದಾಗ ಬಾಕ್ಸ್​ ಕಂಡಿದೆ. ಅದನ್ನು ಓಪನ್​ ಮಾಡಿ ನೋಡಿದಾಗ ಕಂತೆ ಕಂತೆ ಹಣ ಕಂಡು ಅಚ್ಚರಿಗೆ ಒಳಗಾಗಿದ್ದಾರೆ. ವರುಣ್​, ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಡಿಪಾಟ್​ಮೆಂಟ್​ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ:ಅಮೀರ್ ಪುತ್ರಿ ಐರಾಳ ಮದುವೆಗೆ ಭರ್ಜರಿ ತಯಾರಿ ಶುರು; ವಿಜೃಂಭಣೆಯಿಂದ ಈ ದಿನ ನಡೆಯಲಿದೆ ಮದುವೆ
ಹಣವನ್ನು ಕಂಡ ಕೂಡಲೇ ವರುಣ್​ ಹಣದ ಸಮೇತ ಸ್ಥಳದಿಂದ ಎಸ್ಕೇಪ್ ಆಗಿದ್ದ. ಶ್ರೀನಗರ ಮನೆಯಲ್ಲಿ ಹಣವನ್ನು ಹಾಗೇ ಇಟ್ಟುಕೊಂಡಿದ್ದ. 94 ಲಕ್ಷ ರೂಪಾಯಿ ಹಣವನ್ನು ಏನು ಮಾಡಬೇಕು ಅನ್ನೋ ಗೊಂದಲದಲ್ಲೇ ಐದು ದಿನ ಕಳೆದಿದ್ದ. ಸೆಕೆಂಡ್ ಹ್ಯಾಂಡ್ ಇನ್ನೋವಾ ಕಾರು ಖರೀದಿಗು ಪ್ಲಾನ್ ಮಾಡ್ಕೊಂಡಿದ್ದ. ಆದರೆ, ಎಲ್ಲಿಯೂ ಹಣ ಕೊಡದೇ ಮನೆಯಲ್ಲಿ ಇಟ್ಟುಕೊಂಡಿದ್ದ.
ಇತ್ತ ಸ್ನೇಹಿತನ ಅಂಗಡಿ ಬಳಿ ಹೋಗಿ ಕಾರು ಪರಿಶೀಲಿಸಿದ ಪ್ರಮೋದ್​ಗೆ ಶಾಕ್ ಕಾದಿತ್ತು. ಪ್ರಮೋದ್ ವಾಪಸ್ಸು ಬಂದು ನೋಡಿದಾಗ ಬೈಕ್ ಮತ್ತು ಹಣ ಎರಡೂ ಇರಲಿಲ್ಲ. ಬಳಿಕ‌ ಚಂದ್ರ ಲೇಔಟ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೈಕ್ ಹೊರಟ ಮಾರ್ಗವನ್ನು ಸಿಸಿಟಿವಿ ಮೂಲಕ ಪರಿಶೀಲನೆ ನಡೆಸಿ, ಆರೋಪಿಯನ್ನು ಹಿಡಿದು 94 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.
ವರುಣ್ ಅದೇ ಹಣವನ್ನು ತಂದು ಪೊಲೀಸರಿಗೆ ಕೊಟ್ಟಿದ್ದಿದ್ರೆ ಹೀರೊ ಆಗ್ತಿದ್ದ. ಆದರೆ ಮನೆಯಲ್ಲಿ ಇಟ್ಟುಕೊಂಡು ಈಗ ಆರೋಪಿಯಾಗಿದ್ದಾನೆ.
Worlds Tallest Dog: ವಿಶ್ವದ ಅತಿ ಎತ್ತರದ ಶ್ವಾನ ಕ್ಯಾನ್ಸರ್​​ನಿಂದ ಸಾವು

ಭಯೋತ್ಪಾದಕರ ಸ್ಥಳ ಕಂಡುಹಿಡಿಯಲು ಡ್ರೋನ್‌ ಮತ್ತು ಸ್ನಿಫರ್ ಡಾಗ್‌ ನಿಯೋಜನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 3 =
Remember me
