ಬೆಂಗಳೂರು:ಸ್ಯಾಂಡಲ್​ವುಡ್​ ನಟ ಉಪೇಂದ್ರ ಅವರ ಆಕ್ಷೇಪಾರ್ಹ ಹೇಳಿಕೆ ಹಿನ್ನಲೆ ಸಿ.ಕೆ. ಅಚ್ಚುಕಟ್ಟು ಪೊಲೀಸ್​ ಠಾಣೆಯಲ್ಲಿ ಎಫ್ಐಆರ್​ ದಾಖಲಾಗಿತ್ತು. ತದನಂತರ ಹಲಸೂರು ಪೊಲೀಸ್​ ಸ್ಟೇಷನ್​ನಲ್ಲಿ ಕೂಡ ಮತ್ತೊಂದು ದೂರು ದಾಖಲಾಗಿದ್ದು, ಇದೀಗ ಪೊಲೀಸರು ನಟನ ಮನೆಗೆ ನೋಟಿಸ್​ ನೀಡಿ, ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ.
ಇದನ್ನೂ ಓದಿ:ನಟ ಉಪೇಂದ್ರ ವಿರುದ್ಧ ಎಫ್ಐಆರ್ ದಾಖಲು!
ತಕ್ಷಣ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ರವಾನಿಸಲಾಗಿದೆ. ಉಪೇಂದ್ರ ಅವರ ಕತ್ರಿಗುಪ್ಪೆ ಮತ್ತು ಸದಾಶಿವನಗರ ನಿವಾಸಕ್ಕೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಇದರೊಟ್ಟಿಗೆ ವಾಟ್ಸ್ ಆ್ಯಪ್ ಮೂಲಕ ಕೂಡ ನೋಟಿಸ್ ಕಳುಹಿಸಲಾಗಿದೆ. ಈ ಪ್ರಕರಣ ಸಂಬಂಧ ಪೊಲೀಸರು ವಿಡಿಯೋ ಮಾಡಿದ ಸ್ಥಳ ಮಹಜರು ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಸಲಾರ್​ ಚಿತ್ರದ ಬಗ್ಗೆ ಹೊರಬಿತ್ತು ಹೊಸ ಅಪ್ಡೇಟ್​​​!
ನಟನ ವಿರುದ್ದ ಎರಡು ಎಫ್ಐಆರ್ ದಾಖಲಾದ ಹಿನ್ನಲೆ ಎರಡನೇ ಎಫ್ಐಆರ್ ಸಿ.ಕೆ. ಅಚ್ಚುಕಟ್ಟು ಠಾಣೆಗೆ ವರ್ಗಾವಣೆಯಾಗಲಿದೆ. ಪೊಲೀಸರು ಉಪೇಂದ್ರ ಅವರ ದೂರವಾಣಿ ಸಂಖ್ಯೆಯ ವಾಟ್ಸ್​ ಆ್ಯಪ್​ಗೂ ನೋಟಿಸ್ ರವಾನಿಸಿದ್ದಾರೆ. ಆದ್ರೆ, ಅವರ ಮೊಬೈಲ್ ಸ್ವಿಚ್ಡ್ ಆಫ್ ಆದ ಕಾರಣ ಮನೆಗೆ ನೋಟಿಸ್​ ಕಳುಹಿಸಲಾಗಿದೆ.
ನೋಟಿಸ್​​ನಲ್ಲಿ ಇಂದು (ಆಗಸ್ಟ್​ 14) 10.30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಉಲ್ಲೇಖಿಸಲಾಗಿದೆ. ಆದ್ರೆ, ಇಲ್ಲಿಯವರೆಗೂ ನಟ  ಉಪೇಂದ್ರ ಅವರು ವಿಚಾರಣೆಗೆ ಲಭ್ಯವಾಗಿಲ್ಲ. ಪೊಲೀಸರು ಇನ್ನೂ ಎರಡು ಬಾರಿ ನೋಟಿಸ್​ ನೀಡಲಿದ್ದಾರೆ. ತದನಂತರವೂ ವಿಚಾರಣೆಗೆ ಹಾಜರಾಗದಿದ್ದರೇ, ಬಂಧನದ ಸಾಧ್ಯತೆ ಇರಲಿದೆ.
ಇಷ್ಟಕ್ಕೂ ಕ್ಷಮೆಯನ್ನು ಸ್ವೀಕರಿಸುವ ದೊಡ್ಡತನವೂ ಇಲ್ಲವೇ?; ಇಷ್ಟೊಂದು ಧ್ವೇಷ ಯಾಕೆ: ನಟ ಉಪೇಂದ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 16 =
Remember me
