ಬೆಂಗಳೂರು:ಸೈನಿಕನೆಂದು ನಂಬಿಸಿ ಅನೇಕ ಯುವತಿಯರಿಗೆ ಮದುವೆ ಆಗುವುದಾಗಿ ವಂಚಿಸಿದ್ದಲ್ಲದೆ, ಅನೇಕರ ಬಳಿ ಹಣ ಪಡೆದು ಪಂಗನಾಮ ಹಾಕಿರುವ ನಕಲಿ ಸೈನಿಕನನ್ನು ಬೆಂಗಳೂರಿನ ಸುಬ್ರಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.
ಅಂಜನೇಶ್ ಮಠಪತಿ ಬಂಧಿತ ನಕಲಿ ಸೇನಾಧಿಕಾರಿ. ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆಂದು ನಂಬಿಸಿದ್ದ ಆರೋಪಿ, ತೆರಿಗೆ ಹಾಗೂ ಇತರೆ ವಿನಾಯತಿಯಲ್ಲಿ ಮೊಬೈಲ್ ಮತ್ತು ಕಾರು ಖರೀದಿಸಿ ಕೊಡಿಸೋದಾಗಿ ನೂರಾರು ಮಂದಿಗೆ ನೂರಾರು ಮಂದಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪವಿದೆ.
ಇದನ್ನೂ ಓದಿರಿ:ಪ್ರೇಮಿಗಳ ಮಧ್ಯೆ ಹುಳಿ ಹಿಂಡಿದ್ಲಾ ಆಕೆ? ಆತ್ಮಹತ್ಯೆ ಯತ್ನಕ್ಕೂ ಮುನ್ನ ಮನದ ನೋವನ್ನು ಅಕ್ಷರಕ್ಕಿಳಿಸಿದ ಚೈತ್ರಾ ಕೋಟೂರ್​
ಇತ್ತೀಚೆಗೆ ಸುಬ್ರಹ್ಮಣ್ಯನಗರ ನಿವಾಸಿ ನಾಗೇಂದ್ರ ಮತ್ತು ಅವರ ಸಂಬಂಧಿಯೊಬ್ಬರಿಗೆ ಸುಮಾರು 23 ಲಕ್ಷ ರೂ. ಅನ್ನು ಆರೋಪಿ ವಂಚಿಸಿದ್ದಾನೆ. ಹಣ ವಂಚನೆ ಮಾತ್ರವಲ್ಲದೆ, ಮದುವೆ ಆಗುವುದಾಗಿ ನಂಬಿಸಿ ಮೂವರು ಯುವತಿಯರಿಗೂ ವಂಚನೆ ಮಾಡಿದ್ದಾನೆ.
ಸದ್ಯ ಬಂಧಿತನಿಂದ ನಕಲಿ ಪಿಸ್ತೂಲ್, ಸೇನೆಯ ಗುರುತಿನ ಚೀಟಿ ಮತ್ತು ಸಮವಸ್ತ್ರ ಜಪ್ತಿ ಮಾಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​​)
ಅಮೆರಿಕದಲ್ಲಿ ಭಾರತೀಯ ಮೂಲದ ದಂಪತಿಯ ದುರಂತ ಸಾವು: ಅನಾಥವಾದ 4 ವರ್ಷದ ಮಗಳು!

ಇಂದಿನ ಐಪಿಎಲ್-14ರ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿಗೆ ಮುಂಬೈ ಸವಾಲು

ಐಪಿಎಲ್​ ಕಮಾಲ್​: ಹೇಗಿದೆ 8 ತಂಡಗಳ ಬಲಾಬಲ? ವೇಳಾಪಟ್ಟಿ ಒಳಗೊಂಡ ಸಂಪೂರ್ಣ ಮಾಹಿತಿ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + twenty =
Remember me
