ಬೆಂಗಳೂರು:ಸುಪಾರಿ ಕೊಟ್ಟು ಹೆತ್ತ ತಂದೆಯನ್ನೇ ಮಗ ಕೊಲೆ ಮಾಡಿಸಿದ್ದಾನೆ ಎನ್ನಲಾದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಮೊದಲ ಪತ್ನಿಯನ್ನು ಕೊಂದು ಜೈಲು ಸೇರಿದ್ದ ಮಗ, ಎರಡನೇ ಪತ್ನಿಗೂ ವಂಚಿಸಿದ್ದ. ಸೊಸೆ ಮತ್ತು ಮೊಮ್ಮಗಳ ಜೀವನಕ್ಕಾಗಿ ಸೈಟ್​ ಬರೆದುಕೊಡಲು ಮುಂದಾದ ಅಪ್ಪನನ್ನೇ ಮಗ, ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಾನೆ ಎಂದು ಹೇಳಲಾಗುತ್ತಿದೆ.
ನಾರಾಯಣಸ್ವಾಮಿ (70) ಕೊಲೆಯಾದ ದುರ್ದೈವಿ ತಂದೆ. ಪುತ್ರ ಮಣಿಕಂಠ (37) ಎಂಬಾತನಿಂದ ಸುಪಾರಿ ಶಂಕೆ. ಫೆ. 13ರ ಬೆಳಗ್ಗೆ 10 ಗಂಟೆಗೆ ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪಣತ್ತೂರಿನ ಕಾವೇರಪ್ಪ ಲೇಔಟ್​ನಲ್ಲಿ ಕೊಲೆ ನಡೆದಿತ್ತು. ಇದಾದ ಬಳಿಕ ತನಗೆ ಏನೂ ಗೊತ್ತಿಲ್ಲ ಎಂಬಂತೆ ಮಣಿಕಂಠ ಅಪ್ಪನ ಅಂತ್ಯಕ್ರಿಯೆ ಮಾಡಿದ್ದ.
ನಾರಾಯಣಸ್ವಾಮಿ ಕೊಲೆಗೆ ಪುತ್ರನ ಕೌಟುಂಬಿಕ ಕಲಹವೇ ಕಾರಣವಾಗಿದೆ. ಮಣಿಕಂಠ ತನ್ನ ಮೊದಲ‌ ಪತ್ನಿಯನ್ನು ಕೊಲೆ ಮಾಡಿ ಜೈಲು ಸೇರಿದ್ದ. ಜೈಲಿನಿಂದ ಹೊರಬಂದು ಎರಡನೇ ವಿವಾಹವಾಗಿದ್ದ. ಎರಡನೇ ಮದುವೆ ಬಳಿಕವೂ ಬೇರೊಬ್ಬ ಮಹಿಳೆಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ಎರಡನೇ ಪತ್ನಿಗೆ ಗೊತ್ತಾಗಿ ಪತಿಯಿಂದ ದೂರವಿದ್ದಳು. ಡಿವೋರ್ಸ್ ವಿಚಾರವಾಗಿಯೂ ಮಾತುಕತೆ ನಡೆಯುತ್ತಿತ್ತು.
ಎರಡನೇ ಪತ್ನಿಗೆ ಒಂದು ಹೆಣ್ಣು ಮಗಳಿದ್ದಳು. ಆದರೆ, ಡಿವೋರ್ಸ್ ಕೊಡುವುದು ಬೇಡ ಅಂತಾ ಮಾವ ನಾರಾಯಣಸ್ವಾಮಿ ಕೇಳಿಕೊಂಡಿದ್ದ. ಡಿವೋರ್ಸ್ ಬಳಿಕ ಸೊಸೆ ಹಾಗೂ ಮೊಮ್ಮಗಳ ಜೀವನ ನಿರ್ವಹಣೆ ಕಷ್ಟ ಆಗುತ್ತದೆ ಅಂತಾ ಸೈಟ್​ ಒಂದನ್ನು ಅವರ ಹೆಸರಿಗೆ ಮಾಡಲು‌ ಮುಂದಾಗಿದ್ದ. ಆದರೆ ಇದು ಮಣಿಕಂಠನಿಗೆ ಇಷ್ಟವಿರಲಿಲ್ಲ. ಹಾಗಾಗಿ ತಂದೆ ಕೊಲೆಗೆ ಮಣಿಕಂಠನೇ ಸುಪಾರಿ ನೀಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ಸುಪಾರಿ ಪಡೆದು ಬಂದವರು ನಾರಾಯಣಸ್ವಾಮಿ ಕೊಂದು‌ ಎಸ್ಕೇಪ್ ಆಗಿದ್ದು, ಸದ್ಯ ಮಣಿಕಂಠನನ್ನ ವಶಕ್ಕೆ ಪಡೆದಿರುವ ಮಾರತ್ತಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ವೇಳೆ ಸುಪಾರಿ ಕೊಟ್ಟಿರುವ ಬಗ್ಗೆ ಮಣಿಕಂಠ ಬಾಯ್ಬಿಟ್ಟಿರುವುದಾಗಿ ಮಾಹಿತಿ ಇದೆ. ಕೊಲೆ ಆರೋಪಿಗಳಿಗಾಗಿ ಮಾರತ್ತಹಳ್ಳಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಹನಿಮೂನ್​ ರಾತ್ರಿ ಪಕ್ಕದ ಮನೆಯಲ್ಲಿ ಬಚ್ಚಿಟ್ಟುಕೊಂಡ ವರ! ಕಾರಣ ಕೇಳಿ ದಂಗಾದ ಪಾಲಕರು

ಅಯ್ಯೋ ದುರ್ವಿಧಿಯೇ! ಮದುವೆಯಾದ ಮೂರೇ ದಿನದಲ್ಲಿ ದುರಂತ ಅಂತ್ಯ ಕಂಡ ನವದಂಪತಿ

ತರಾತುರಿಯಲ್ಲಿ ಟೆಂಡರ್ ಕರೆಯುವ ಮೂಲಕ ಖಜಾನೆ ಲೂಟಿ: ಸರ್ಕಾರದ ವಿರುದ್ಧ ಕಾಂಗ್ರೆಸ್​ ಗಂಭೀರ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 5 =
Remember me
