ಬೆಂಗಳೂರು:ಸಾಫ್ಟ್​ವೇರ್​ ಇಂಜಿನಿಯರ್​​ ಗಂಡನ ಕಿರುಕುಳ ಸಹಿಸದೇ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ನಗರದ ವರ್ತೂರಿನಲ್ಲಿ ನಡೆದಿದೆ.
ಪದ್ಮಾವತಿ (38) ಮೃತ ದುರ್ದೈವಿ. ಜನವರಿ 28ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 15 ವರ್ಷಗಳ ಹಿಂದೆ ಪದ್ಮಾವತಿಗೆ ಟೆಕ್ಕಿ ಭಾಸ್ಕರ್ ಜತೆ ಮದುವೆಯಾಗಿತ್ತು. ದಂಪತಿಗೆ 11 ವರ್ಷದ ಗಂಡು ಮಗು ಇದೆ.
ಇದನ್ನೂ ಓದಿರಿ:ಮನೆಗೆ ಬಂದ ಮಹಾಲಕ್ಷ್ಮೀ… ಕಳೆದ 30 ವರ್ಷ ಎಲ್ಲಿದ್ದರು? ನಟಿ ಬಾಯ್ಬಿಟ್ಟ ಎಕ್ಸ್​ಕ್ಲೂಸಿವ್ ಮಾಹಿತಿ ಇಲ್ಲಿದೆ
ಟೆಕ್ಕಿ ಭಾಸ್ಕರ್​ ಅತಿಯಾದ ಪಾರ್ಟಿ-ಮೋಜು-ಮಸ್ತಿ ಮೈಗೂಡಿಸಿಕೊಂಡಿದ್ದ. ಪದೇ-ಪದೇ ಪಾರ್ಟಿಗಳಲ್ಲಿ ಭಾಗವಹಿಸುತ್ತಿದ್ದಲ್ಲದೆ, ಮನೆಗೆ ಬಂದು ಪದ್ಮಾವತಿಗೆ ಚಿತ್ರಹಿಂಸೆ ನೀಡುತ್ತಿದ್ದ. ತಾನೂ ಬೇರೆ ಯುವತಿಯರ ಜತೆ ಡ್ಯಾನ್ಸ್​ ಮಾಡಿದ್ದಲ್ಲದೆ, ಫ್ರೆಂಡ್ಸ್​ ಜತೆ ಕುಣಿಯುವಂತೆ ಪದ್ಮಾವತಿಗೆ ಒತ್ತಾಯ ಮಾಡುತ್ತಿದ್ದನಂತೆ. ಒಪ್ಪದಿದ್ದರೆ, ಕಿರುಕುಳ ನೀಡುತ್ತಿದ್ದನಂತೆ.
ಗಂಡನ ಕಿರುಕುಳ ತಾಳಲಾರದೇ ಪದ್ಮಾವತಿ ಈ ಹಿಂದೆ ಮೂರು ಬಾರೀ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಳು. ನಾಲ್ಕನೇ ಬಾರಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಭಾಸ್ಕರ್​ ವಿರುದ್ಧ ವರ್ತೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ಭಾಸ್ಕರ್​ನನ್ನು ಬಂಧಿಸಲಾಗಿದೆ.(ದಿಗ್ವಿಜಯ ನ್ಯೂಸ್​)
ಮಾಜಿ ಪ್ರಿಯಕರನನ್ನು ಇನ್ನೊಂದು ಬಾರಿ ತಬ್ಬಿಕೊಳ್ಳಬಹುದೇ?: ವರನನ್ನು ಕೇಳಿದ ವಧುವಿನ ಗತಿ ಏನಾಯ್ತು?

ಅತ್ತ ಅಮೆರಿಕದಲ್ಲಿ ಟೆಕ್ಕಿ ಪತಿ ವಾಸ: ಇತ್ತ ಮಗಳ ಜತೆ ಮಹಿಳೆ ನೇಣಿಗೆ ಶರಣಾಗಿದ್ದೇಕೆ?

ಕರೊನಾ ಲಸಿಕೆ ಪಡೆಯಲು ಆರೋಗ್ಯ ಸಿಬ್ಬಂದಿ ಹಿಂದೇಟು: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × 1 =
Remember me
