ಬೆಂಗಳೂರು:ವಿಡಿಯೋ ಕಾಲ್​ ಮಾಡು ನಿನ್ನ ಹೆಂಡತಿಯನ್ನು ನೋಡುತ್ತೇನೆ ಎಂದು ಒತ್ತಾಯಿಸಿದ್ದನ್ನು ನಿರಾಕರಿಸಿದ ವ್ಯಕ್ತಿಗೆ ದುಷ್ಕರ್ಮಿಯೊಬ್ಬ ಚಾಕು ಇರಿದಿರುವ ವಿಚಿತ್ರ ಘಟನೆ ಎಚ್​ಎಸ್ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರಾಜೇಶ್ ಮಿಶ್ರಾ ಎಂಬಾತನಿಗೆ ಸುರೇಶ್ ಎಂಬಾತ ಚಾಕು ಇರಿದಿದ್ದಾನೆ. ಇಬ್ಬರು ಎಚ್​ಎಸ್ಆರ್ ಲೇಔಟ್​ನ ಲೆನಿನ್ ಕಲೆಕ್ಷನ್​ ಉದ್ಯೋಗಿಗಳು. ಸೇಲ್ಸ್​ಮ್ಯಾನ್​ ಅಗಿ ಕೆಲಸ ಮಾಡುತ್ತಿದ್ದ ರಾಜೇಶ್​ ಮಿಶ್ರಾ ಜ.27ರಂದು ಸಂಜೆ 5.30ರ ಸಮಯದಲ್ಲಿ ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಪತ್ನಿಗೆ ಕರೆ ಮಾಡಿ ಮಾತನಾಡುತ್ತಿದ್ದರು. ಈ ವೇಳೆ ಆರೋಪಿ ಸುರೇಶ್​, ರಾಜೇಶ್​ರನ್ನು ನೋಡಿದ್ದಾರೆ.
ರಾಜೇಶ್​ ಬಳಿ ಬಂದ ಸುರೇಶ್​, ನಿನ್ನ ಪತ್ನಿಗೆ ವಿಡಿಯೋ ಕಾಲ್​ ಮಾಡು ನಾನು ನೋಡುತ್ತೇನೆ ಎಂದು ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ರಾಜೇಶ್​, ಆತನಿಗೆ ಬೈಯ್ಯುತ್ತಾರೆ. ಇದರಿಂದ ಸ್ಥಳದಲ್ಲೇ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಿದೆ. ವಾಗ್ವಾದ ತಾರಕಕ್ಕೇರಿ ತಾಳ್ಮೆ ಕಳೆದುಕೊಳ್ಳುವ ಸುರೇಶ್​, ಅಲ್ಲಿಯೇ ಇದ್ದ ಕತ್ತರಿಯಿಂದ ರಾಜೇಶ್​ ಹೊಟ್ಟೆಗೆ ಚುಚ್ಚಿದ್ದಾರೆ.
ಬಳಿಕ ಸ್ನೇಹಿತನ ನೆರವಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡ ನಂತರ ಆರೋಪಿ ಸುರೇಶ್​ ವಿರುದ್ಧ ರಾಜೇಶ್​ ದೂರು ದಾಖಲಿಸಿದ್ದು, ಇದೀಗ ಆರೋಪಿ ಸುರೇಶ್​ನನ್ನು ಎಚ್​ಎಸ್ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಕಂಪನಿಯ ಏಳಿಗೆಗೆ ದುಡಿದ ಉದ್ಯೋಗಿಗಳಿಗೆ ದುಬಾರಿ ಕಾರು ಗಿಫ್ಟ್​! ಗಮನ ಸೆಳೆದ​ ಗುಜರಾತ್​ ಟೆಕ್​ ಕಂಪನಿ!

ಮದ್ವೆ ಬಳಿಕ ಮೊದಲ ಬಾರಿ ಮನೆಗೆ ಬಂದ ಅಳಿಯನಿಗೆ 108 ಬಗೆಯ ಖಾದ್ಯ ತಯಾರಿಸಿದ ಅತ್ತೆ!

ಹೆಂಡತಿ ಸಾಯುವವರೆಗೂ ಡಂಬೆಲ್ಸ್​ನಿಂದ ಹೊಡೆಯುತ್ತಲೇ ಭೀಕರವಾಗಿ ಕೊಲೆ ಮಾಡಿದ ಪತಿರಾಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + eight =
Remember me
