ಬೆಂಗಳೂರು: ಪೊಲೀಸರ ಕೆಲಸದ ಒತ್ತಡದ ಬಗ್ಗೆ ಕೇಳಬೇಕೆಂದೇ ಇಲ್ಲ. ನಾನಾ ಒತ್ತಡಗಳಿಗೆ ಸಿಲುಕಿ ಹೈರಾಣಾಗುವ ಕೆಲಸದ ನಡುವೆ ಎಂಥವರ ಮನಸ್ಸೂ ಒಂದಿಷ್ಟು ರಿಲಾಕ್ಸ್​ ಬಯಸುವುದು ಸಹಜ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ವಿಭಿನ್ನ ಚಿಂತನೆ, ಇನಿಯೇಟಿವ್​ಗಳ ಮೂಲಕ ಪೊಲೀಸರ ಒತ್ತಡ, ಟೆನ್ಶನ್ ಕಡಿಮೆ ಮಾಡುವ ಪ್ರಯತ್ನ ಮಾಡಿ ಗಮನ ಸೆಳೆದಿದ್ದಾರೆ.
ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿರ್ವಹಿಸುವ ಸಂಚಾರ ಪೊಲೀಸರಿಗೆ ಬಾಡಿ ಮಸಾಜ್ ಮಾಡಿಸಿ, ರಿಲಾಕ್ಸ್​ ಆಗುವಂತೆ ಮಾಡಲಾಗಿತ್ತು. ಈಗ ಪೊಲೀಸರ ಕೆಲಸದಲ್ಲಿ ಚುರುಕು ಮೂಡಿಸಲು, ಲವಲವಿಕೆ ತುಂಬಲು ಜುಂಬಾ ಡ್ಯಾನ್ಸ್ ಕಲಿಸುವ ಕೆಲಸಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಇದರಂತೆ ಗುರುವಾರ ಬೆಂಗಳೂರಿನ ಮಾನ್ಯತಾ ಟೆಕ್​ ಪಾರ್ಕ್​ನ ಕನ್ವೆನ್ಶನ್ ಹಾಲ್​ನಲ್ಲಿ ಈಶಾನ್ಯ ವಿಭಾಗದ 900 ಪೊಲೀಸ್ ಸಿಬ್ಬಂದಿಗೆ ಜುಂಬಾ ಡ್ಯಾನ್ಸ್ ತರಬೇತಿ ಶುರುವಾಗಿದೆ. ನಟ ಪುನೀತ್ ರಾಜ್​ ಕುಮಾರ್ ಮತ್ತು ಪೊಲೀಸ್ ಆಯುಕ್ತ ಭಾಸ್ಕರ ರಾವ್ ಅವರು ಈ ತರಬೇತಿಗೆ ಚಾಲನೆ ನೀಡಿದ್ದಾರೆ.
ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಇದಕ್ಕೆ ನೇತೃತ್ವವಹಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಬೇರೆ ಬೇರೆ ಹಾಡುಗಳಿಗೆ ನೃತ್ಯಾಭ್ಯಾಸ ಮಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. 300 ಸಿಬ್ಬಂದಿ ಒಂದು ಪಾಳಿಯಂತೆ ಒಟ್ಟು ಮೂರು ಪಾಳಿಯಲ್ಲಿ ನೃತ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕೆಲಸದ ಅವಧಿ ಮುಗಿದ ನಂತರ ಈ ಡ್ಯಾನ್ಸ್ ಕಲಿಕೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಗಳೂರು ಪೊಲೀಸರ#WorkPlaceHappyಡ್ಯಾನ್ಸ್​ !ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿರ್ವಹಿಸುವ ಸಂಚಾರ ಪೊಲೀಸರಿಗೆ ಬಾಡಿ ಮಸಾಜ್ ಮಾಡಿಸಿ, ರಿಲಾಕ್ಸ್​ ಆಗುವಂತೆ ಮಾಡಲಾಗಿತ್ತು. ಈಗ ಪೊಲೀಸರ ಕೆಲಸದಲ್ಲಿ ಚುರುಕು ಮೂಡಿಸಲು, ಲವಲವಿಕೆ ತುಂಬಲು ಜುಂಬಾ ಡ್ಯಾನ್ಸ್ ಕಲಿಸುವ ಕೆಲಸ ಶುರುವಾಗಿದೆ.-https://t.co/sM0hrvHfE2pic.twitter.com/3mSG6o90Be
— Vijayavani (@VVani4U)February 20, 2020

ಬೆಂಗಳೂರು ಪೊಲೀಸರ#WorkPlaceHappyಡ್ಯಾನ್ಸ್​ !ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿರ್ವಹಿಸುವ ಸಂಚಾರ ಪೊಲೀಸರಿಗೆ ಬಾಡಿ ಮಸಾಜ್ ಮಾಡಿಸಿ, ರಿಲಾಕ್ಸ್​ ಆಗುವಂತೆ ಮಾಡಲಾಗಿತ್ತು. ಈಗ ಪೊಲೀಸರ ಕೆಲಸದಲ್ಲಿ ಚುರುಕು ಮೂಡಿಸಲು, ಲವಲವಿಕೆ ತುಂಬಲು ಜುಂಬಾ ಡ್ಯಾನ್ಸ್ ಕಲಿಸುವ ಕೆಲಸ ಶುರುವಾಗಿದೆ.-https://t.co/sM0hrvHfE2pic.twitter.com/Vgqmsk03DY
— Vijayavani (@VVani4U)February 20, 2020

ಬೆಂಗಳೂರು ಪೊಲೀಸರ#WorkPlaceHappyಡ್ಯಾನ್ಸ್​ !ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿರ್ವಹಿಸುವ ಸಂಚಾರ ಪೊಲೀಸರಿಗೆ ಬಾಡಿ ಮಸಾಜ್ ಮಾಡಿಸಿ, ರಿಲಾಕ್ಸ್​ ಆಗುವಂತೆ ಮಾಡಲಾಗಿತ್ತು. ಈಗ ಪೊಲೀಸರ ಕೆಲಸದಲ್ಲಿ ಚುರುಕು ಮೂಡಿಸಲು, ಲವಲವಿಕೆ ತುಂಬಲು ಜುಂಬಾ ಡ್ಯಾನ್ಸ್ ಕಲಿಸುವ ಕೆಲಸ ಶುರುವಾಗಿದೆ.-https://t.co/sM0hrvHfE2pic.twitter.com/6hOiR9lSIq
— Vijayavani (@VVani4U)February 20, 2020

https://www.instagram.com/tv/B8yaBhGHOxC/?utm_source=ig_web_copy_link
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + eight =
Remember me
