ಬೆಂಗಳೂರು:ಬೆಂಗಳೂರಿನಲ್ಲಿ ಮೆಟ್ರೋ, ಬಿಎಂಟಿಸಿ ಬಸ್​ ಇದ್ದರೂ ಖಾಸಗಿ ವಾಹನಗಳ ಬಳಕೆ ಹೆಚ್ಚಳವಾಗಿದ್ದು,  ದಸರಾ- ದೀಪಾವಳಿ ಹಬ್ಬದ ಖುತುವಿನ ಅಂತ್ಯದ ವೇಳೆಗೆ ಬೆಂಗಳೂರಿನಲ್ಲಿ ಖಾಸಗಿ ವಾಹನಗಳ ಸಂಖ್ಯೆ ಒಂದು ಕೋಟಿ ದಾಟುವ ನಿರೀಕ್ಷೆಯಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿ ಪ್ರಸ್ತುತ 99.8 ಲಕ್ಷ ಸಾರಿಗೆಯೇತರ ನೋಂದಣಿ ವಾಹನಗಳಿವೆ. ಈ ವಾಹನಗಳು 75.6 ಲಕ್ಷ ದ್ವಿಚಕ್ರ ವಾಹನಗಳು ಮತ್ತು 23.1 ಲಕ್ಷ ಕಾರುಗಳನ್ನು ಒಳಗೊಂಡಿದ್ದು, ಸೆಪ್ಟೆಂಬರ್‌ನಲ್ಲಿ ಪ್ರತಿದಿನ ಸರಾಸರಿ 1,300 ಹೊಸ ಬೈಕ್‌ಗಳು ಮತ್ತು ಸ್ಕೂಟರ್‌ಗಳು ಮತ್ತು 409 ಕಾರುಗಳು ರಸ್ತೆಗಿಳಿಯುತ್ತವೆ.

ಹೆಚ್ಚುತ್ತಲೇ ಇದೆ ಖಾಸಗಿ ವಾಹನಗಳ ಸಂಖ್ಯೆ:ಬೆಂಗಳೂರಿನಲ್ಲಿ 2012-13 ರಲ್ಲಿ ವಾಹನಗಳ ಸಂಖ್ಯೆ 55.2 ಲಕ್ಷ ಇತ್ತು. ಆದರೆ ಈಗ ಈ ವರ್ಷದ ಸೆಪ್ಟೆಂಬರ್ 30ರ ವರೆಗೆ 1.1 ಕೋಟಿಗೆ ದ್ವಿಗುಣಗೊಂಡಿದೆ. ಮೆಟ್ರೋ ಮತ್ತು BMTC ಬೆಂಗಳೂರಿನ ಪ್ರಮುಖ ಸಾರ್ವಜನಿಕ ಸಾರಿಗೆ ನಿರ್ವಾಹಕರು. ಮೆಟ್ರೋ 74 ಕಿಮೀ ಮಾರ್ಗವನ್ನು ಆವರಿಸಿದೆ. ಮತ್ತು ದಿನಕ್ಕೆ 7 ಲಕ್ಷ ಪ್ರಯಾಣಿಕರು ಮೆಟ್ರೋಗೆ ಅವಲಂಬಿಸಿದ್ದಾರೆ.
ಬಿಎಂಟಿಸಿಯಲ್ಲಿ ಪ್ರತಿದಿನ 43 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಾರೆ.ಇನ್ನು ನಮ್ಮ ಮೆಟ್ರೋ ತನ್ನ ಸಂಚಾರ ಮಾರ್ಗವನ್ನು ಹೆಚ್ಚಿಸುತ್ತಿದೆ. ಜತೆಗೆ ಐಟಿ ಬಿಟಿ ಹಬ್​ಗಳೊಂದಿಗೂ ಕೈ ಜೋಡಿಸಿದೆ. ಇಷ್ಟೆಲ್ಲಾ ಆದರೂ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
2023-24ರಲ್ಲಿ ಹೊಸ ವಾಹನಗಳ ನೋಂದಣಿ ಮತ್ತು ಇತರ ಮೂಲಗಳಿಂದ ಈ ಹಣಕಾಸು ವರ್ಷದಲ್ಲಿ ಇಲಾಖೆಯು 5,226 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ ಎಂದು ಸಾರಿಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ, ಬಿಎಂಟಿಸಿಯಂತಹ ಹಲವು ವಿಧಗಳ ಸಾರಿಗೆ ವ್ಯವಸ್ಥೆ ಇದ್ದರೂ ಸಹ ಜನ ತಮ್ಮ ದೈನಂದಿನ ಪ್ರಯಾಣಕ್ಕಾಗಿ ಖಾಸಗಿ ವಾಹನಗಳನ್ನು ಬಳಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 3 =
Remember me
