ಬೆಂಗಳೂರು:ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರಿಗೆ ಜನಪ್ರತಿನಿಧಿಗಳ ಆಸೆ-ಆಮಿಷದ ಭರಾಟೆ ಜೋರಾಗಿದೆ. ಇಷ್ಟು ದಿನ ಬೆಳಗಾವಿಯಲ್ಲಿ ಕೇಳುತ್ತಿದ್ದ ಕುಕ್ಕರ ಸದ್ದು ಇದೀಗ ಬೆಂಗಳೂರಿನ ಬಿಟಿಎಂ ಲೇಔಟ್​ನಲ್ಲೂ ಕೇಳುತ್ತಿದೆ.
ಹೌದು, ಇಷ್ಟು ದಿನ ಕುಕ್ಕರ್​ ಅಂದರೆ ಸಾಕು ಬೆಳಗಾವಿಯ ಲಕ್ಷ್ಮೀ ಹೆಬ್ಬಾಳ್ಕರ್​ ಅವರು ನೆನಪಾಗುತ್ತಿದ್ದರು. ಏಕೆಂದರೆ ಪ್ರತಿ ಬಾರಿ ಚುನಾವಣೆ ಬಂದಾಗ ಹೆಬ್ಬಾಳ್ಕರ್​ ಅವರು ಕುಕ್ಕರ್​ ಹಂಚುವುದು ಸಾಮಾನ್ಯ. ಇದೀಗ ಕಾಂಗ್ರೆಸ್​ನ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮಲಿಂಗ ರೆಡ್ಡಿ ಅವರು ಹೆಬ್ಬಾಳ್ಕರ್​ ಹಾದಿಯನ್ನು ಅನುಸರಿಸಿದ್ದಾರೆ. ಕುಕ್ಕರ್​ ಹಂಚುವ ಮೂಲಕ ಬಿಟಿಎಂ ಲೇಔಟ್​ ಮತದಾರರನ್ನು ಸೆಳೆಯುವ ಯತ್ನ ಮಾಡಿದ್ದಾರೆ.
ಒಂದು ಕಡೆ ಕಾಂಗ್ರೆಸ್​ ನಾಯಕರು ಮತದಾರರಿಗೆ ಆಮಿಷ ನೀಡಿದ್ದಾರೆ ಎಂದು ಬಿಜೆಪಿ ನಾಯಕ ರಮೇಶ್​ ಜಾರಕಿಹೊಳಿ ವಿರುದ್ಧ ಆರೋಪ ಹೊರಿಸಿ ದೂರು ನೀಡಿದ್ದಾರೆ. ಆದರೆ, ಅವರದೇ ಪಕ್ಷದ ಹಿರಿಯ ನಾಯಕ ಕುಕ್ಕರ್​ ನೀಡುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್​ನ ಹಿರಿಯ ಮುಖಂಡ ರಾಮಲಿಂಗರೆಡ್ಡಿ ಅವರು ಸ್ವಕ್ಷೇತ್ರದಲ್ಲಿ ಮಹಿಳೆಯರಿಗೆ ಕುಕ್ಕರ್ ಹಂಚುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲೂ ವೈರಲ್​ ಆಗಿದ್ದು, ಇದು ಬಿಜೆಪಿಗೆ ಅಸ್ತ್ರವಾಗಿದೆ.(ದಿಗ್ವಿಜಯ ನ್ಯೂಸ್​​)
ವಿಶ್ವದ ಮೊದಲ ಹಾಗೂ ತನ್ನದೇಯಾದ ಕರೊನಾ ಮೂಗಿನ ಲಸಿಕೆ ಬಿಡುಗಡೆ ಮಾಡಿದ ಭಾರತ: 1 ಡೋಸ್​ಗೆ 800 ರೂ.

ಕೇಂದ್ರದಿಂದ ಯಾವುದೇ ನೋಟಿಸ್ ಬಂದಿಲ್ಲ; ಪದೇ ಪದೇ ಊಹಾಪೋಹ ಯಾಕೆ ಹರಡುತ್ತಿದೆಯೋ ಗೊತ್ತಿಲ್ಲ!

ಸಮರ್ಥ ಅಭ್ಯರ್ಥಿಗಳಿದ್ದಾಗ ನಮ್ಮ ಕುಟುಂಬದಿಂದ ಯಾರನ್ನೂ ಸ್ಪರ್ಧೆಗೆ ಇಳಿಸುವುದಿಲ್ಲ; ಎಚ್​​ಡಿಕೆ ಸ್ಪಷ್ಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 9 =
Remember me
