ಇಂಜಿನಿಯರಿಂಗ್ ಪದವೀಧರರಾದ ರಾಜೇಂದ್ರಕುಮಾರ್ ಅವರು, ವಿದ್ಯಾರ್ಥಿ ದೆಸೆಯಿಂದ ಸಮಾಜಸೇವೆ ಹಾಗೂ ರೋಟರಿ ಸಂಸ್ಥೆ ಮುಖಾಂತರ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಐತಿಹಾಸಿಕ ‘‘ಬೆಂಗಳೂರು ಕಂಬಳದ’’ ಪ್ರಧಾನ ಕಾರ್ಯದರ್ಶಿಯಾಗಿದ್ದು, ನಿರಂತರವಾಗಿ ಜನರ ಮಧ್ಯೆ ಇದ್ದುಕೊಂಡು ಜನನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಲಾಕ್​ಡೌನ್ ಸಂದರ್ಭದಲ್ಲಿ ನಂದಿನಿ ಬಡಾವಣೆಯಲ್ಲಿ ಸಾವಿರಾರು ಜನರಿಗೆ ಆಹಾರ ಕಿಟ್, ದಿನಸಿ ಕಿಟ್ ವಿತರಿಸಿರುವುದಲ್ಲದೆ ರೋಟರಿ ಸಂಸ್ಥೆ ಮುಖಾಂತರ ಕೋವಿಡ್ ರೋಗಿಗಳಿಗೆ ಔಷಧ, ಚಿಕಿತ್ಸೆ ಹಾಗೂ ಆರೈಕೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಕೈಗೊಂಡು ಆಪದ್ಬಾಂಧವ ಎನಿಸಿಕೊಂಡಿದ್ದಾರೆ. ಕಾಪೋರೇಟರ್ ಆಗಿ ನಂದಿನಿ ವಾರ್ಡ್ ಅನ್ನು ಸ್ಮಾರ್ಟ್ ವಾರ್ಡ್ ಎಂಬ ಪರಿಕಲ್ಪನೆಯೊಂದಿಗೆ ಎಲ್ಲಾ ಮೂಲಭೂತ ಸೌಕರ್ಯವನ್ನು ಕೈಗೊಂಡು ಜನರಿಗೆ ಹೆಚ್ಚು ಸೌಲಭ್ಯ ಒದಗಿಸಿಕೊಟ್ಟಿದ್ದಾರೆ. ನಂದಿನಿ ಉತ್ಸವ, ಸಂಕ್ರಾಂತಿ ಉತ್ಸವ, ಉದ್ಯೋಗ ಮೇಳಗಳ ರೂವಾರಿಯಾಗಿದ್ದಾರೆ. ತುಳು ಸಂಘಟನೆಗಳಿಂದ ತುಳು ತೌಳವ ಪ್ರಶಸ್ತಿ ಸಂದಿದೆ.
“ನನ್ನ ಸಮಾಜ ಸೇವೆಯನ್ನು ಗುರುತಿಸಿ ‘ವಿಜಯವಾಣಿ’ ಪತ್ರಿಕೆಯವರು ‘ಬೆಂಗಳೂರು ರತ್ನ’ ಪ್ರಶಸ್ತಿ ನೀಡಿದ್ದಾರೆ. ಇಂತಹ ಪ್ರಶಸ್ತಿಗಳು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇದು ಇನ್ನಷ್ಟು ಸ್ಪೂರ್ತಿದಾಯಕ ಕೆಲಸ ಮಾಡಲು ಪ್ರೇರಣೆ ನೀಡುತ್ತವೆ” – ಕೆ.ವಿ. ರಾಜೇಂದ್ರಕುಮಾರ್, ಮಾಜಿ ಕಾಪೋರೇಟ್ ಹಾಗೂ ಕೈಗಾರಿಕೋದ್ಯಮಿ
ಸೋಲನ್ನೇ ಗೆಲುವಿನ ಮೆಟ್ಟಿಲು ಮಾಡಿಕೊಂಡರು
ಅಧಿಕಾರವಿದ್ದರೆ ಮತ್ತಷ್ಟು ಜನರ ಸೇವೆ ಮಾಡಬಹುದು ಎಂಬುದನ್ನು ಮನಗಂಡ ರಾಜೇಂದ್ರಕುಮಾರ್, 2010ರಲ್ಲಿ ಬಿಬಿಎಂಪಿ ಕಾಪೋರೇಟರ್ ಚುನಾವಣೆಗೆ ನಿಂತು ಕೆಲವೇ ಮತಗಳ ಅಂತರದಲ್ಲಿ ಸೋಲು ಅನುಭವಿಸಿದರು. ಸೋತರೂ ಧೃತಿಗೆಡದೆ ‘ಸದಾ ನಿಮ್ಮ ಸೇವೆಯಲ್ಲಿ’ ಎಂಬ ಬ್ಯಾನರ್​ಗಳನ್ನು ವಾರ್ಡ್​ನಲ್ಲೆಡೆ ಹಾಕಿ, ಸಂಕಷ್ಟದಲ್ಲಿರುವವರ ಸೇವೆಯನ್ನು ಮಾಡಿಕೊಂಡು ಬಂದರು. ಪರಿಣಾಮ, 2016ರ ಚುನಾವಣೆಯಲ್ಲಿ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಆ ಚುನಾವಣೆಯಲ್ಲಿ ರಾಜೇಂದ್ರ ಅವರು ಮೇಯರ್ ಅಭ್ಯರ್ಥಿಯನ್ನು ಪರಾಭವಗೊಳಿಸಿದ್ದರು. ವಾರ್ಡ್​ನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಹೈಟೆಕ್ ಗ್ರಂಥಾಲಯ ನಿರ್ವಿುಸಲು ಶ್ರಮಿಸಿದ್ದಾರೆ.
ಅಧಿಕಾರ ಇರಲಿ, ಇಲ್ಲದಿರಲಿ ಸದಾ ಜನರ ಸೇವೆ ಮಾಡುವವರು ಕೆ.ವಿ. ರಾಜೇಂದ್ರಕುಮಾರ್. ಕೈಗಾರಿಕೋದ್ಯಮಿ ಹಾಗೂ ರಾಜಕಾರಣಿಯಾಗಿರುವ ಇವರು ಯಾವುದೇ ಪ್ರಚಾರ ಬಯಸದೆ ನಿರಂತರವಾಗಿ ಸೇವೆ ಮಾಡುವ ಮೂಲಕ ಜನನಾಯಕ ಎನಿಸಿಕೊಂಡಿದ್ದಾರೆ.
ನಂದಿನಿ ಲೇಔಟ್ ವಾರ್ಡ್​ನ ಮಾಜಿ ಕಾಪೋರೇಟರ್ ಹಾಗೂ ಎಫ್​ಕೆಸಿಸಿಐ ನಿರ್ದೇಶಕರಾಗಿರುವ ರಾಜೇಂದ್ರಕುಮಾರ್, ಮಂಗಳೂರಿನ ಮಂಗಳಾದೇವಿ (ಜೆಪು್ಪ ಮಂಗಳೂರು) ಊರಿನವರು. ಶಾಲಾ-ಕಾಲೇಜು ವಿದ್ಯಾಭ್ಯಾಸವನ್ನು ಅಲ್ಲಿಯೇ ಮಾಡಿದ್ದಾರೆ. ಮೈಸೂರಿನ ಜಯಚಾಮರಾಜ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡಿದ್ದಾರೆ. ತಂದೆ ಟಿ.ಕೆ. ದಾಮೋದರ್, ತಾಯಿ ಲೀಲಾವತಿ. ತಂದೆ ಟ್ರಾನ್ಸ್​ಪೋರ್ಟ್ ಬಿಜಿನೆಸ್ ಮಾಡುತ್ತಿದ್ದರು. ಪತ್ನಿ ಪುಷ್ಪಲತಾ ಅವರು ಕೂಡ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಎನ್​ಜಿಒ ಮತ್ತು ರೋಟರಿಯೊಂದಿಗೆ ಸೇರಿ ಹಲವು ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು ತೇಜಸ್ ಅವರು ಎಂ.ಎಸ್. ಮಾಡಿದ್ದಾರೆ, ಸಂಜಯ್ ಇಂಜಿನಿಯರ್ ಮಾಡಿದ್ದಾರೆ. ಸದ್ಯ ಇಬ್ಬರೂ ತಂದೆಯ ಒಡೆತನದ ಕೈಗಾರಿಕೆಯನ್ನು ನೋಡಿಕೊಂಡಿದ್ದಾರೆ.

ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕ: ರಾಜೇಂದ್ರ ಕುಮಾರ್ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ಸಮಾಜ ಸೇವೆ ಮಾಡುವುದನ್ನು ರೂಢಿಸಿಕೊಂಡಿದ್ದರು. ವಿದ್ಯಾರ್ಥಿ ಸಂಘದ ನಾಯಕರಾಗಿದ್ದರು. ಕಾಲೇಜಿನ ಬಳಿ ಸರಿಯಾದ ಸಮಯಕ್ಕೆ ಬಸ್ ಬರುತ್ತಿರಲಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿತ್ತು. ಈ ವೇಳೆ ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಈ ರೀತಿ ಹಲವು ಹೋರಾಟಗಳನ್ನು ಇಂಜಿನಿಯರಿಂಗ್ ಓದುವಾಗ ಕೈಗೊಂಡು ವಿದ್ಯಾರ್ಥಿಗಳಿಗೆ ನೆರವಾಗಿದ್ದರು. ಹಾಸ್ಟೆಲ್​ಗಳ ಸೌಲಭ್ಯಗಳಿಗಾಗಿ ಹೋರಾಟ ಮಾಡಿದ್ದರು. ಮೈಸೂರು ಯೂನಿರ್ವಟಿಸಿ ಆಲ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಸಂಘದ ನಾಯಕರಾಗಿದ್ದರು. ನಂತರ ಕೈಗಾರಿಕೆ ಘಟಕದಲ್ಲಿ ಉದ್ಯೋಗಕ್ಕೆ ಸೇರಿಕೊಂಡು ಅಲ್ಲಿ ಮ್ಯಾನೇಜರ್ ಆಗಿದ್ದರು. ಇವರ ಕಾರ್ಯ ವೈಖರಿ ನೋಡಿ ಕೈಗಾರಿಕೆಯ ಮುಖ್ಯಸ್ಥನನ್ನಾಗಿ ಮಾಡಿದರು. ಫೊರೊಸಿ ಇಂಜಿನಿಯರಿಂಗ್ ಲಿಮಿಟೆಡ್​ನಲ್ಲಿ ಪ್ಲ್ಯಾಂಟ್ ಹೆಡ್ ಆಗಿದ್ದರು. ಕೈಗಾರಿಕಾ ಸಮಸ್ಯೆ ಮತ್ತು ಕಾರ್ವಿುಕರ ಸಮಸ್ಯೆಗೆ ಸ್ಪಂದಿಸುತ್ತ ಬಂದರು. ಆಗ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ 8-9 ಲಕ್ಷ ಮಂದಿ ಕೆಲಸ ಮಾಡುತ್ತಿದ್ದರು. ಕೈಗಾರಿಕೆಗಳು ತೊಂದರೆಯಲ್ಲಿದ್ದವು. ಏಷ್ಯಾದ ಅತಿ ದೊಡ್ಡ ಕೈಗಾರಿಕಾ ಸಂಘಟನೆಯಾದ ಪೀಣ್ಯ ಕೈಗಾರಿಕಾ ಸಂಘದಲ್ಲಿ ಸೇರಿಕೊಂಡರು. ನಂತರ ಆ ಸಂಘದ ಅಧ್ಯಕ್ಷರಾದರು.

ಸಂಕ್ರಾಂತಿ ಉತ್ಸವ
ನಂದಿನಿ ಉತ್ಸವದ ಜತೆಗೆ ‘ವಿಜಯವಾಣಿ’ ಮಾಧ್ಯಮ ಸಹಯೋಗದಲ್ಲಿ ಸಂಕ್ರಾಂತಿ ಉತ್ಸವ ವನ್ನು ಮಾಡುವ ಮೂಲಕ ನಾಗರಿಕರಿಗೆ ಎಳ್ಳು-ಬೆಲ್ಲ, ಕಬ್ಬು ಹಂಚುವ ಮೂಲಕ ಸಡಗರದಿಂದ ಹಬ್ಬವನ್ನು ಆಚರಿಸುತ್ತಾರೆ. 50ಕ್ಕೂ ಅಧಿಕ ಎತ್ತಿನ ಮತ್ತು ಕುದುರೆಗಾಡಿಗಳು ಇದರಲ್ಲಿ ಭಾಗವಹಿಸುತ್ತವೆ. ಈ ವೇಳೆ ರಾಸುಗಳ ಕಿಚ್ಚು ಹಾಯಿಸುವುದು ಜತೆಗೆ ಹಳ್ಳಿಯ ಸೊಗಡಿನ ಪ್ರದರ್ಶನವು ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಕಲಾ ತಂಡ ಗಳು ಸಂಕ್ರಾಂತಿ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇದರಲ್ಲಿ ಅಂದಾಜು 5 ಸಾವಿರಕ್ಕೂ ಅಧಿಕ ಜನರು ಭಾಗವಹಿಸುತ್ತಾರೆ.
ಸಂಘದಲ್ಲಿ ಮೂಲಸೌಕರ್ಯ
ಪೀಣ್ಯ ಕೈಗಾರಿಕಾ ಸಂಘದಲ್ಲಿ ಮೂಲಸೌಕರ್ಯ ಗಳಿರಲಿಲ್ಲ. ಸುಸಜ್ಜಿತ ಆಸ್ಪತ್ರೆ ಇರಲಿಲ್ಲ. ಕೈಗಾರಿಕೆಯಲ್ಲಿ ಕೆಲಸ ಮಾಡುವಾಗ ಅವಘಡಗಳಾದಾಗ ಕಾರ್ವಿುಕರನ್ನು ಇಂದಿರಾನಗರಕ್ಕೆ ಕರೆದುಕೊಂಡು ಹೋಗಬೇಕಿತ್ತು. ಎಷ್ಟೋ ಮಂದಿ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ. ಇಲ್ಲಿನ ಕಾರ್ವಿುಕರಿಗೆ ಯಾವುದೇ ರೀತಿಯ ಸುರಕ್ಷತೆ ಇರಲಿಲ್ಲ. ಹೀಗಾಗಿ ಈ ಭಾಗದಲ್ಲಿ ಇಎಸ್​ಐ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ವಿುಸಲು ರಾಜೇಂದ್ರಕುಮಾರ್ ನಿರ್ಧರಿಸಿದರು. ಆಗ ಆಸ್ಕರ್ ಫರ್ನಾಂಡಿಸ್ ಕೇಂದ್ರದಲ್ಲಿ ಕಾರ್ವಿುಕ ಸಚಿವರಾಗಿದ್ದರು. ಅವರನ್ನು ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಕರೆದುಕೊಂಡು ಬಂದು ವಾಸ್ತವ ಸ್ಥಿತಿಯನ್ನು ವಿವರಿಸಿದರು. ಸಚಿವರು ದೆಹಲಿಗೆ ಬರುವಂತೆ ಹೇಳಿ ಹೊರಟು ಹೋದರು. ನಂತರ ಒಂದು ಕಮಿಟಿ ಮೀಟಿಂಗ್ ಮಾಡಿ ಅದಕ್ಕೆ ರಾಜೇಂದ್ರಕುಮಾರ್ ಅವರನ್ನು ಆಹ್ವಾನಿಸಿದರು. ನಂತರ ಸೂಕ್ತವಾದ ಜಾಗ ನೋಡಿ ಆಸ್ಪತ್ರೆ ನಿರ್ವಿುಸೋಣ ಎಂದು ಭರವಸೆ ನೀಡಿದರು. ಕೇಂದ್ರ ಸರ್ಕಾರದ ಜಾಗವನ್ನು ರಾಜೇಂದ್ರಕುಮಾರ್ ಗುರುತಿಸಿ ಸಚಿವರ ಗಮನಕ್ಕೆ ತಂದರು. ಸ್ವಂತ ಖರ್ಚು ಮಾಡಿ ದೆಹಲಿಗೆ ವಿಮಾನದಲ್ಲಿ ಹಲವು ಬಾರಿ ಹೋಗಿ ಬಂದು ಆಸ್ಪತ್ರೆ ನಿರ್ಮಾಣ ಮಾಡಿಸಿದ್ದರು. ಈ ಆಸ್ಪತ್ರೆ ನಿರ್ವಣಕ್ಕೆ ಕಾರಣವಾದ ರಾಜೇಂದ್ರ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತ್ತು.

ಪಕ್ಷ ಸಂಘಟನೆ
ರಾಜೇಂದ್ರ ಕುಮಾರ್ ಅವರು 2011 ರಿಂದ ಪ್ರತಿ ಜಿಲ್ಲೆಯ ಕೈಗಾರಿಕಾ ಸಂಘಟನೆಯೊಂದಿಗೆ ಸೇರಿ ಬಿಜೆಪಿ ಕೈಗಾರಿಕಾ ಪ್ರಕೋಷ್ಠ ಸ್ಥಾಪಿಸಿದರು. ಇವರು 2011 ರಿಂದ 2019ರ ಅವಧಿಯಲ್ಲಿ ಮೂರು ಬಾರಿ ಕೈಗಾರಿಕಾ ಸಂಘಟನೆಗಳಲ್ಲಿ ರಾಜ್ಯ ಸಂಚಾಲಕರಾಗಿ ಕೆಲಸ ನಿರ್ವಹಿಸಿದ್ದಾರೆ.
ಪ್ರಶಸ್ತಿಗಳು
ತುಳು ತವಳವ ಪ್ರಶಸ್ತಿ,  ಪೀಣ್ಯ ಕೈಗಾರಿಕಾ ಸಂಘದ ವತಿಯಿಂದ ದಿ ಬೆಸ್ಟ್ ಎಂಟರ್​ಪ್ರಿನರ್ ಪ್ರಶಸ್ತಿ ರೋಟರಿ ಕ್ಲಬ್​ನಿಂದ ದಿ ಬೆಸ್ಟ್ ಸರ್ವಿಸ್ ಡೈರೆಕ್ಟರ್ ಪ್ರಶಸ್ತಿ.

ಕರೋನಾ ವೇಳೆಯ ವಾರಿಯರ್
ಕೆ.ವಿ. ರಾಜೇಂದ್ರಕುಮಾರ್ ಮಾಜಿ ಕಾಪೋರೇಟರ್ ಆಗಿದ್ದರೂ ಸ್ಮಾರ್ಟ್ ವಾರ್ಡ್ ನಂದಿನಿ ಬಡಾವಣೆಯಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯಹಸ್ತ ಚಾಚಿದ್ದಾರೆ. ಸದಾ ಜನರ ಮಧ್ಯೆ ಬೆರೆಯುತ್ತಿದ್ದಾರೆ. ಲಾಕ್​ಡೌನ್ ಸಂದರ್ಭದಲ್ಲಿ ವಾರ್ಡ್ ವ್ಯಾಪ್ತಿಯಲ್ಲಿ ಅಗತ್ಯವಿರುವವರಿಗೆ 15 ಸಾವಿರ ಆಹಾರ ದಿನಸಿ ಕಿಟ್ ವಿತರಿಸಿ, ಬಡವರ ಸಂಕಷ್ಟಕ್ಕೆ ಶ್ರಮಿಸಿದ್ದರು. ಇಸ್ಕಾನ್ ಮತ್ತು ಉದ್ಯಮಿಗಳು ಸಹಕಾರದಲ್ಲಿ ಲಾಕ್​ಡೌನ್ ಸಮಯದಲ್ಲಿ ಪ್ರತಿನಿತ್ಯ 2,500 ಜನರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದರು. ವಿಶೇಷವಾಗಿ ಲಾಕ್​ಡೌನ್ ಸಮಯದಲ್ಲಿ ಡ್ರೋನ್ ಮೂಲಕ ಔಷಧ ಸಿಂಪಡಿಸಿ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ರೋಟರಿ ವತಿಯಿಂದ 200ಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ಮಾಡಿದ್ದಾರೆ. ಬಡವರಿಗೆ ಆಹಾರ ಸಾಮಗ್ರಿ ವಿತರಣೆ, ಸುಮಾರು 400 ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.
ಸಮಾಜ ಸೇವೆ
ರಾಜೇಂದ್ರಕುಮಾರ್ ಅವರು ರೋಟರಿ ಸಂಸ್ಥೆಗೆ ಸೇರ್ಪಡೆಯಾದ ಬಳಿಕ ಅದರ ಮೂಲಕ ಪಲ್ಸ್ ಪೋಲಿಯೋ ಹಾಕುವುದು, ಆರೋಗ್ಯ ತಪಾಸಣೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ನಂದಿನಿ ಲೇಔಟ್​ನಲ್ಲಿ ವಾಸವಾಗಿದ್ದ ಇವರ ಸೇವೆಯನ್ನು ಗುರುತಿಸಿ ನಂದಿನಿ ಲೇಔಟ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರನ್ನಾಗಿಸಲಾಯಿತು. ಇಲ್ಲಿನ ಕೊಳೆಗೇರಿಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡುತ್ತಿದ್ದರು. 500ಕ್ಕೂ ಹೆಚ್ಚಿನ ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಟ್ಟಿದ್ದಾರೆ. ಹಲವು ಮಂದಿಗೆ ಕೃತಕ ಕಾಲುಗಳ ಜೋಡಣೆ ಮಾಡಿಸಿ ಕೊಟ್ಟಿದ್ದಾರೆ. ಉದ್ಯೋಗ ಮೇಳವನ್ನು ಮಾಡುವ ಮೂಲಕ ಸಾವಿರಾರು ಮಂದಿಗೆ ಕೆಲಸ ದೊರಕಿಸಿಕೊಟ್ಟಿದ್ದಾರೆ. ಗಾರ್ವೆಂಟ್ಸ್ ಕಾರ್ಖಾನೆ, ಇಂಜಿನಿಯರಿಂಗ್ ಇಂಡಸ್ಟ್ರಿಯಲ್ಲಿ ಕೆಲಸ ಕೊಡಿಸಿದ್ದಾರೆ. ಹೈಟೆಕ್ ಗ್ರಂಥಾಲಯ ನಿರ್ವಿುಸಿದರು. ನಂದಿನಿ ಲೇಔಟ್ ಫ್ಯಾಮಿಲಿ ಕ್ಲಬ್ ನಿರ್ವಿುಸಿದ್ದರು. ನಂದಿನಿ ಲೇಔಟ್​ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಆರಂಭವಾಗಲು ಪ್ರಮುಖ ಕಾರಣಕರ್ತರಾಗಿದ್ದಾರೆ. ದುರ್ಗಾಪರಮೇಶ್ವರಿ ಟ್ರಸ್ಟ್ ಮೂಲಕ ಹಲವು ರೀತಿಯ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದಾರೆ. ಅಂಗವಿಕಲರಿಗೆ ಸೈಕಲ್ ವಿತರಣೆ ಮಾಡಿದ್ದಾರೆ.

ನಂದಿನಿ ಉತ್ಸವ ರೂವಾರಿ
ಕೆ.ವಿ. ರಾಜೇಂದ್ರಕುಮಾರ್ ಅವರು ಉತ್ಸವಗಳ ರೂವಾರಿ ಎನಿಸಿದ್ದಾರೆ. ನಂದಿನಿ ಲೇಔಟ್​ನಲ್ಲಿ ನಂದಿನಿ ಉತ್ಸವ, ಸಂಕ್ರಾತಿ ಉತ್ಸವ, ಉದ್ಯೋಗ ಮೇಳ, ಆರೋಗ್ಯ ಶಿಬಿರ ಸೇರಿ ಹಲವು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ನಾಯಕನಾಗಿದ್ದಾಗ ‘ಯುವ ಪ್ರತಿಭೋತ್ಸವ’ ಎಂಬ ಕಾರ್ಯಕ್ರಮ ಆಯೋಜಿಸಿ ಅಂತರ ಕಾಲೇಜು ಸ್ಪರ್ಧೆ ಏರ್ಪಡಿಸುತ್ತಿದ್ದರು. ಕಾಲೇಜಿನ ದಿನಗಳಲ್ಲಿ ರಾಜೇಂದ್ರಕುಮಾರ್ ಪ್ರತಿಭಾವಂತ ಗಿಟಾರ್ ವಾದಕರಾಗಿದ್ದರು. ಆದರೆ, ಅದನ್ನು ಅಭಿವ್ಯಕ್ತಿಸಲು ಸೂಕ್ತ ವೇದಿಕೆ ಸಿಗಲಿಲ್ಲ. ಆ ಕೊರಗು ಸದಾ ಅವರನ್ನು ಕಾಡುತ್ತಿತ್ತು. ಹೀಗಾಗಿ 20 ವರ್ಷಗಳ ಹಿಂದೆ ‘ನಂದಿನಿ ಉತ್ಸವ’ ಎಂಬ ವಿನೂತನ ಕಲ್ಪನೆವುಳ್ಳ 9 ದಿನಗಳ ಕಾರ್ಯಕ್ರಮ ಆಯೋಜಿಸಿ ಅಲ್ಲಿ 2,000- 2,500 ಮಕ್ಕಳಿಗೆ ವೇದಿಕೆಯನ್ನು ಕಲ್ಪಿಸಿದರು. ಅಲ್ಲಿ ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಲು ಪ್ರಾರಂಭಿಸಿದರು. ಈ ಕಾರ್ಯಕ್ರಮ ಅತ್ಯಂತ ಜನಪ್ರಿಯತೆ ಪಡೆಯಿತು. ಅಂದಿನಿಂದ ಪ್ರತಿವರ್ಷ ನಂದಿನಿ ಬಡಾವಣೆಯಲ್ಲಿ ನಂದಿನಿ ಉತ್ಸವವನ್ನು ಆಯೋಜಿಸುತ್ತ ಬರುತ್ತಿದ್ದಾರೆ. ಈ ಉತ್ಸವದಲ್ಲಿ ನಾಲ್ಕೈದು ಸಾವಿರ ಮಂದಿ ಭಾಗವಹಿಸುತ್ತಾರೆ. ಸಿನಿಮಾ ತಾರೆಗಳೂ ಪಾಲ್ಗೊಳ್ಳುತ್ತಾರೆ. ಪ್ರಬಂಧ ಸ್ಪರ್ಧೆ, ನೃತ್ಯ, ಭರತನಾಟ್ಯ, ರಸಪ್ರಶ್ನೆ, ಏಕಪಾತ್ರಾಭಿನಯ ಸೇರಿ ಹಲವು ಸ್ಪರ್ಧೆಗಳನ್ನು ಆಯೋಜಿಸ ಲಾಗುತ್ತದೆ. ಇದರಲ್ಲಿ ಮಕ್ಕಳು ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ.
ಟಿಕೆಟ್ ಕೈತಪ್ಪಿದೆ, ಇವನ ಬಳಿ ಹೇಗೆ ಕೆಲಸಕ್ಕಾಗಿ…. ಕಾರ್ಯಕರ್ತರಲ್ಲಿ ಪ್ರತಾಪ್ ಸಿಂಹ ಮನವಿ

ಪತಿ ಸಾವಿಗೀಡಾಗಿ ಕೆಲವೇ ತಿಂಗಳುಗಳಲ್ಲಿ ಭಾರತೀಯ ವ್ಯಕ್ತಿಯ ಪ್ರೀತಿಯಲ್ಲಿ ಬಿದ್ದ ಜರ್ಮನ್ ನಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
