ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಗಳಿಸಿದ ಇಕೋ ಪ್ಲಾನೆಟ್ ಎಲಿವೇಟರ್ಸ್ ಆಂಡ್ ಎಸ್ಕಲೇಟರ್ಸ್ ಪ್ರೖೆ.ಲಿ.
‘ಕರ್ಮವನ್ನು ಶ್ರದ್ಧೆಯಿಂದ ನಿಭಾಯಿಸು.. ಫಲಾಫಲವನ್ನು ನಿರೀಕ್ಷಿಸದಿರು’ ಎಂಬುದು ಭಗವದ್ಗೀತೆಯ ಸಂದೇಶ. ಕರ್ಮವನ್ನು ನೆಚ್ಚಿಕೊಂಡೇ ಎಲ್ಲರೂ ಮೆಚ್ಚುವಂತೆ ಬೆಳೆದವರು ಟಿ.ಎಚ್. ಹನುಮಂತರಾಜು (ರಾಜುಗೌಡ). ಖಾಸಗಿ ಕಂಪನಿಯಲ್ಲಿನ ಕೆಲಸ ತ್ಯಜಿಸಿದ ಇವರು, ‘ಇಕೋ ಪ್ಲಾನೆಟ್ ಎಲಿವೇಟರ್ಸ್ ಇಂಟರ್​ನ್ಯಾಷನ್ ಪ್ರೖೆ.ಲಿ.’ ಕಂಪನಿ ಕಟ್ಟಿ ಬೆಳೆಸಿದ ಪರಿ ರೋಚಕ. ಲಿಫ್ಟ್, ಎಲಿವೇಟರ್ ತಯಾರಿಕೆ ಮತ್ತು ಅಳವಡಿಕೆಯಲ್ಲಿ ಹೆಸರಾಗಿರುವ ಈ ಕಂಪನಿ, ಪ್ರತಿ ವರ್ಷ 100 ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಡೆಸುತ್ತಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಶಾಖೆಗಳಿವೆ. ಶ್ರೀಲಂಕಾ, ಕತಾರ್ ಸೇರಿ ವಿದೇಶಗಳಿಗೆ ಲಿಫ್ಟ್, ಎಲಿವೇಟರ್ ಮತ್ತು ಎಸ್ಕಲೇಟರ್ ತಯಾರಿಸಿ ರಫ್ತು ಮಾಡುತ್ತಿದೆ. ಇಂಥ ಅಪೂರ್ವ ಸಾಧನೆ ಮೆರೆದಿರುವ ಹನುಮಂತರಾಜು ಅವರಿಗೆವಿಜಯವಾಣಿ ಪತ್ರಿಕೆ ಬೆಂಗಳೂರು ರತ್ನ ಗೌರವ ನೀಡಿದೆ.
ವಿಜಯವಾಣಿ ಸುದ್ದಿಜಾಲ ಬೆಂಗಳೂರು
‘ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ…’ ವರನಟ ಡಾ. ರಾಜ್​ಕುಮಾರ್ ನಟಿಸಿರುವ ‘ಬಂಗಾರದ ಮನುಷ್ಯ’ ಚಿತ್ರದಲ್ಲಿ ಮೂಡಿಬಂದಿರುವ ಗೀತೆ. ಜೀವನದಲ್ಲಿ ಏನಾದರೂ ಸಾಧನೆ ಮಾಡುವಂತೆ ಹುರುಪು ನೀಡುತ್ತದೆ. ಅದರಂತೆ, ಹಿಡಿದ ಛಲ, ಬಿಡದ ಕೆಲಸ… ಹೀಗೆ ಛಲದಂಕಮಲ್ಲನಂತೆ ಚಿಕ್ಕವಯಸ್ಸಿನಲ್ಲಿ ಎದುರಾದ ಸವಾಲುಗಳನ್ನು ಹಂತ ಹಂತವಾಗಿ ನಿಭಾಯಿಸುತ್ತ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಕಂಡವರು ಹನುಮಂತರಾಜು ಟಿ.ಎಚ್. (ರಾಜುಗೌಡ). ಇವರ ಜೀವನಗಾಥೆ ಯುವಜನಾಂಗಕ್ಕೆ ನಿಜವಾದ ಪ್ರೇರಣಾದಾಯಕ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ತೂಬಿನಕೆರೆ ಗ್ರಾಮದ ಹನುಮಯ್ಯ ಮತ್ತು ಜಯಲಕ್ಷ್ಮಮ್ಮ ದಂಪತಿ ಮಗನಾಗಿ ಹನುಮಂತರಾಜು. ಟಿ.ಎಚ್. ಜನಿಸಿದರು. ಇವರದು ರೈತಾಪಿ ಕುಟುಂಬ. 1ನೇ ತರಗತಿಯಿಂದ 10ನೇ ತರಗತಿವರೆಗೆ ತೂಬಿನಕೆರೆಯಲ್ಲಿ ವ್ಯಾಸಂಗ. ಕುಣಿಗಲ್ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದರು. ಶೇಷಾದ್ರಿಪುರ ಕಾಲೇಜಿನಲ್ಲಿ ಬಿಕಾಂ ಪೂರೈಸಿದರು. ಕಾಲೇಜು ದಿನಗಳಲ್ಲಿ ಹಾಸ್ಟೆಲ್​ನಲ್ಲಿ ಇದ್ದರು. ಕೆಲ ಸಂದರ್ಭದಲ್ಲಿ ಊಟ ಇಲ್ಲದೆ ಖಾಲಿ ಹೊಟ್ಟೆಯಲ್ಲಿ ಮಲಗಿದ್ದೂ ಉಂಟು. ಕಾಲೇಜಿನಲ್ಲಿ ಓದುತ್ತಿದ್ದಾಗಲೇ ತುಂಬ ಕಷ್ಟಗಳನ್ನು ಅನುಭವಿಸಿದ್ದರು. ಜರ್ಮನ್ ಮೂಲದ ಎಲಿವೇಟರ್ ಕಂಪನಿಯೊಂದರಲ್ಲಿ ಅರೆಕಾಲಿಕ ಕೆಲಸಕ್ಕೆ ಸೇರಿಕೊಂಡರು. ಪಾಲಕರ ಬಳಿ ಹಣ ಕೇಳದೆ ಸ್ವಂತ ದುಡಿಮೆಯಲ್ಲೇ ಕಾಲೇಜು ಶುಲ್ಕ, ಊಟ ಸೇರಿ ಇತರೆ ಖರ್ಚು-ವೆಚ್ಚಕ್ಕೆ ನೋಡಿಕೊಳ್ಳುತ್ತ ವಿದ್ಯಾಭ್ಯಾಸ ಮುಗಿಸಿದ್ದು ಇವರ ಹೆಗ್ಗಳಿಕೆ. ಪದವಿ ಮುಗಿದ ಬಳಿಕ ರಾಜುಗೌಡ ಅವರ ಕಾರ್ಯಕ್ಷಮತೆ ನೋಡಿ ಇದೇ ಕಂಪನಿಯು ಪೂರ್ಣಕಾಲಿಕ ತಾಂತ್ರಿಕ ಮುಖ್ಯಸ್ಥ ಹುದ್ದೆಗೆ ನೇಮಿಸಿಕೊಂಡಿತ್ತು. ಹಲವು ವರ್ಷಗಳ ಕಾಲ ಕಂಪನಿಯಲ್ಲಿ ಕೆಲಸ ಮಾಡುತ್ತ ಲಿಫ್ಟ್/ಎಲಿವೇಟರ್ ತಯಾರಿಕೆ ಮತ್ತು ಅಳವಡಿಕೆಯಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡರು.‘

ಉದ್ಯೋಗಿಯಿಂದ ಉದ್ಯಮಿ…:ಖಾಸಗಿ ಕಂಪನಿಯಲ್ಲಿ ಮಾಡುತ್ತಿದ್ದ ಕೆಲಸ ತ್ಯಜಿಸಿದ ಹನುಮಂತರಾಜು ಟಿ.ಎಚ್. (ರಾಜುಗೌಡ), 2010ರಲ್ಲಿ ಬೆಂಗಳೂರಿನ ಪೀಣ್ಯದಲ್ಲಿ ಸಣ್ಣದಾಗಿ ಲಿಫ್ಟ್, ಎಲಿವೇಟರ್ ತಯಾರಿಸುವ ಸ್ವಂತ ಕಂಪನಿ ಆರಂಭಿಸಿದರು. ಕಂಪನಿಯು ಕಡಿಮೆ ಅವಧಿಯಲ್ಲಿ ಜನಪ್ರಿಯತೆ ಗಳಿಸಿತು. ಕಂಪನಿಗೆ ‘ಇಕೋ ಪ್ಲಾನೆಟ್ ಎಲಿವೇಟರ್ಸ್ ಆಂಡ್ ಎಸ್ಕಲೇಟರ್ಸ್ ಪ್ರೖೆ.ಲಿ .’ ಎಂದು ಹೆಸರು ಇಟ್ಟರು. ಜರ್ಮನಿ ಮೂಲದ ಕಂಪನಿ ಜತೆ ತಾಂತ್ರಿಕ ಒಡಂಬಡಿಕೆ ಮಾಡಿಕೊಂಡು ಅತ್ಯಾಧುನಿಕ, ವಿನ್ಯಾಸದ ಮೂಲಕ ಲಿಫ್ಟ್, ಎಲಿವೇಟರ್ಸ್ ಮತ್ತು ಎಸ್ಕಲೇಟರ್ ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಲಿಫ್ಟ್ ತಯಾರಿಕಾ ಕಂಪನಿಯಾಗಿ ಬೆಳೆದಿದ್ದು, ಇತರೆ ಕಂಪನಿಗಳಿಗೆ ಪೈಪೋಟಿ ನೀಡುತ್ತಿದೆ. ಪೀಣ್ಯದಲ್ಲಿ 35 ಸಾವಿರ ಚದರಡಿ ವಿಸ್ತೀರ್ಣದಲ್ಲಿ ಉತ್ಪಾದನಾ ಘಟಕ ಮತ್ತು ಡೆಮೋ ಸೆಂಟರ್ ಹೊಂದಿರುವ ಕಂಪನಿಯು, ಉತ್ಪನ್ನಗಳ ತಯಾರಿಕೆಗೆ ಸರ್ಕಾರದಿಂದ ಎ-ಕ್ಲಾಸ್ ಪರವಾನಗಿ ಪಡೆದಿದೆ. 2015ರಲ್ಲಿ ಮೇಘನಾ ಅವರನ್ನು ಹನುಮಂತರಾಜು ಮದುವೆಯಾಗಿದ್ದಾರೆ. ಸಿವಿಲ್ ಇಂಜಿನಿಯರ್ ಆಗಿರುವ ಮೇಘನಾ ಕಂಪನಿಯ ಲಿಫ್ಟ್ ಮತ್ತು ಎಲಿವೇಟರ್ ವಿನ್ಯಾಸ ಹಾಗೂ ಮಾರಾಟ ವಿಭಾಗದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಮೇಘನಾ ಅವರಿಗೂ ತಮ್ಮ ಕಂಪನಿಯ ವಹಿವಾಟನ್ನು ಭಾರತಾದ್ಯಂತ ಹಾಗೂ ವಿದೇಶಗಳಿಗೂ ವಿಸ್ತರಿಸುವ ಕನಸು ಇದೆ. ಕನಸು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಶ್ರಮ ವಹಿಸಿದ್ದಾರೆ. ಇಕೋ ಪ್ಲಾನೆಟ್ ಎಲಿವೇಟರ್ಸ್ ಆಂಡ್ ಎಸ್ಕಲೇಟರ್ಸ್ ಪ್ರೖೆ. ಲಿ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಎಲಿವೇಟರ್ಸ್ ಉತ್ಪಾದಿಸಿ ಮಾರಾಟ ಮಾಡುತ್ತಿದೆ. ಗೃಹ, ವಾಣಿಜ್ಯ, ಆಸ್ಪತ್ರೆ, ವಿಲ್ಲಾ, ಅಪಾರ್ಟ್​ವೆುಂಟ್, ಮಾಲ್​ಗಳಿಗೆ ಸಾವಿರಾರು ಎಲಿವೇಟರ್ಸ್, ಲಿಷ್ಟ್ ಗಳನ್ನು ಅಳವಡಿಸಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೈಗೆಟುಕುವ ದರದಲ್ಲಿ ಎಲ್ಲ ರೀತಿಯ ಉತ್ಪನ್ನಗಳನ್ನು ಒದಗಿಸುತ್ತಿದೆ. ಕಂಪನಿ, ಸೇಫ್ಟಿ, ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ. ಇಂಡಿಯನ್ ಸ್ಟಾ್ಯಂಡರ್ಡ್ ಅರ್ಗನೈಜೇಷನ್, ಟಿಯು ವಿಎಸ್​ಯುುಡಿ ಸಂಸ್ಥೆಯಿಂದ ಮಾನ್ಯತೆ ಪಡೆದಿದೆ. ಪ್ರತಿ ವರ್ಷ 100 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಹಿವಾಟು ನಡೆಸುವ ಗುರಿ ಹಾಕಿಕೊಂಡಿದೆ.

ಗುಣಮಟ್ಟವೇ ಧ್ಯೇಯ:ಭಾರತದಲ್ಲಿ ‘ಇಕೋ ಪ್ಲಾನೆಟ್ ಎಲಿವೇಟರ್ಸ್ ಆಂಡ್ ಎಸ್ಕಲೇಟರ್ಸ್ ಪ್ರೖೆ.ಲಿ.’ ಕಂಪನಿ ಜತೆ ಸಹಯೋಗ ಮಾಡಿಕೊಂಡಿರುವ ಜರ್ಮನ್ ಕಂಪನಿ, ಜರ್ಮನಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಲಿಫ್ಟ್, ಎಲಿವೇಟರ್ಸ್ ಮತ್ತು ಎಸ್ಕಲೇಟರ್ ತಯಾರಿಸುತ್ತಿದೆ. ಇದುವರೆಗೆ ಕೆಟ್ಟು ನಿಂತಿಲ್ಲ. ಲಿಫ್ಟ್ನಲ್ಲಿ ಎಲೆಕ್ಟ್ರಿಕ್ ಸೇಫ್ಟಿ, ಚಿಲನ್ ಸೇಫ್ಟಿ, ಹೈ ಕಾಂಟಾಕ್ಟ್ ಸೆನ್ಸರ್, ಮೊಬೈಲ್ ಆಪ್, ಅಲೆಕ್ಸಾ ಸೇರಿ ವಿಶ್ವದರ್ಜೆಯ ಸುರಕ್ಷತಾ ಮಾನದಂಡಗಳನ್ನು ಅಳವಡಿಸಿದೆ. ಲಿಫ್ಟ್ ಚಲಿಸುವಾಗ ದಿಢೀರನೇ ವಿದ್ಯುತ್ ಪೂರೈಕೆ ಸ್ಥಗಿತವಾದರೆ ಅಥವಾ ಲಿಫ್ಟ್ನ ವೈರ್​ರೋಪ್ ತುಂಡಾದರೂ, ಬ್ರೇಕ್ ಕಟ್ಟಾದರೂ, ನೆಲಕ್ಕೆ ಅಪ್ಪಳಿಸದಂತೆ ಇಕೋ ಪ್ಲಾನೆಟ್ ಕಂಪನಿ ಮೊದಲ ಬಾರಿಗೆ ಖಿಇM ಈಛಿಡಜ್ಚಿಛಿ ಅನ್ನು ವಿಶೇಷವಾಗಿ ಪರಿಚಯಿಸಿದೆ. ಇದರಿಂದ ಲಿಫ್ಟ್ ಯಾವುದೇ ಕಾರಣಕ್ಕೂ ಕೆಳಗೆ ಬೀಳದಂತೆ ನೋಡಿಕೊಳ್ಳುತ್ತದೆ. ಜೀರೋ ಆಕ್ಸಿಡೆಂಟ್ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ಅದೇ ಮಾದರಿಯಲ್ಲಿ ಇಕೋ ಪ್ಲಾನೆಟ್ ಎಲಿವೇಟರ್ಸ್ ಆಂಡ್ ಎಸ್ಕಲೇಟರ್ಸ್ ಪ್ರೖೆ.ಲಿ. ಕಂಪನಿ ಸಹ ದೇಶದಲ್ಲಿ ಲಿಫ್ಟ್, ಎಲಿವೇಟರ್ಸ್ ಮತ್ತು ಎಸ್ಕಲೇಟರ್ ತಯಾರಿಸಿ ಮಾರಾಟ ಮಾಡುತ್ತಿದೆ. ‘ಗುಣಮಟ್ಟವೇ ನಮ್ಮ ಧ್ಯೇಯ’ ಎಂಬುದನ್ನು ಅಳವಡಿಸಿಕೊಂಡಿರುವ ಕಂಪನಿ, ಇದುವರೆಗೆ 3 ಸಾವಿರಕ್ಕೂ ಅಧಿಕ ಲಿಫ್ಟ್, ಎಲಿವೇಟರ್ಸ್ ತಯಾರಿಸಿ ಮಾರಾಟ ಮಾಡಿದೆ. ಗ್ರಾಹಕರಿಂದ ಉತ್ಪನ್ನಕ್ಕೆ ಸಾಕಷ್ಟು ಬೇಡಿಕೆ ಬರಲಾರಂಭಿಸಿದೆ.
24 ತಾಸು ಸಹಾಯವಾಣಿ ಸೇವೆ: ಇಕೋ ಪ್ಲಾನೆಟ್ ಎಲಿವೇಟರ್ಸ್ ಆಂಡ್ ಎಸ್ಕಲೇಟರ್ಸ್ ಪ್ರೖೆ.ಲಿ. ನಿರ್ವಹಣೆ, ಸೇವೆಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಕಂಪನಿ ಅಳವಡಿಸುವ ಲಿಫ್ಟ್, ಎಲಿವೇಟರ್ಸ್ ಮತ್ತು ಎಸ್ಕಲೇಟರ್ ಸರ್ವೀಸ್ ಮಾಡಿಸಲು ಗ್ರಾಹಕರಿಗಾಗಿ 18001239096 ಸಹಾಯವಾಣಿ ಆರಂಭಿಸಿದೆ. ಇದು 24 ಗಂಟೆ ಕಾರ್ಯನಿರ್ವಹಿಸುತ್ತಿದೆ. ಗ್ರಾಹಕರು ಕರೆ ಮಾಡಿದ ಒಂದು ಗಂಟೆಯೊಳಗೆ ಕಂಪನಿಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸರ್ವೀಸ್ ಮಾಡಿಕೊಡುತ್ತಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಿ ಸೇರಿ ಆಯಾ ರಾಜ್ಯದ ಪ್ರಾದೇಶಿಕ ಭಾಷೆಯಲ್ಲಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾತನಾಡಬಹುದು. ಇಕೋ ಪ್ಲಾನೆಟ್ ಕಂಪನಿಯು ಕಡಿಮೆ ದರಕ್ಕೆ ಲಿಫ್ಟ್ಗಳನ್ನೂ ಸರ್ವೀಸ್ ಮಾಡಿಕೊಡುತ್ತದೆ. ಬೇರೆ ಕಂಪನಿಯ ತಯಾರಿಸಿರುವ ಲಿಫ್ಟ್ಗಳನ್ನೂ ಸರ್ವಿಸ್ ಮಾಡಿಕೊಡಲಾಗುವುದು. ಬ್ರ್ಯಾಂಡ್ ಆಧಾರದ ಮೇರೆಗೆ ಬೇರೆ ಕಂಪನಿಗಳ ಹಳೆಯ ಲಿಫ್ಟ್ ಖರೀದಿಸಿ ಕಸ್ಟಮೈಸ್ಡ್ ವಿನ್ಯಾಸದೊಂದಿಗೆ ತಯಾರಿಸಿ ಅಳವಡಿಸಲಾಗುವುದು ಎನ್ನುತ್ತಾರೆ ಹನುಮಂತರಾಜು ಟಿ.ಎಚ್.

ದೇಶಾದ್ಯಂತ ಉದ್ಯಮ ವಿಸ್ತರಣೆ :ಪೀಣ್ಯ ಕೈಗಾರಿಕಾ ಪ್ರದೇಶದ ವಿಧಾನಸೌಧ ಲೇಔಟ್​ನಲ್ಲಿ 12 ಸಾವಿರ ಚದರಡಿ ವಿಸ್ತೀರ್ಣದಲ್ಲಿ ಕಂಪನಿಯ ಕೇಂದ್ರ ಕಚೇರಿ ಇದೆ. ಇದರಲ್ಲಿ ಡೆಮೋ ಸೆಂಟರ್ ಸೇರಿ ಇತರೆ ಸೌಲಭ್ಯಗಳಿವೆ. ಪೀಣ್ಯ, ಕೆ.ಆರ್.ಪುರ, ಎಚ್​ಎಸ್​ಆರ್ ಲೇಔಟ್​ನಲ್ಲಿ ಸರ್ವೀಸ್ ಸೆಂಟರ್​ಗಳಿವೆ. ಮೈಸೂರು, ಹಾಸನ, ತುಮಕೂರು, ದಾವಣಗೆರೆ, ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ಸರ್ವೀಸ್ ಸೆಂಟರ್ ಮತ್ತು ಡೆಮೋ ಸೆಂಟರ್​ಗಳಿವೆ. ದಕ್ಷಿಣ ಭಾರತದಲ್ಲಿ ಉದ್ಯಮ ನಡೆಸುತ್ತಿರುವ ಕಂಪನಿ, ಬರುವ ದಿನಗಳಲ್ಲಿ ಉತ್ತರ ಭಾರತದಲ್ಲಿ ವಿಸ್ತರಣೆಯಾಗಲಿದೆ. ವಿದೇಶಗಳಲ್ಲಿಯೂ ಹೊಸದಾಗಿ ಸರ್ವೀಸ್ ಸೆಂಟರ್ ತೆರೆಯಲು ಆಲೋಚಿಸಲಾಗಿದೆ ಎನ್ನುತ್ತಾರೆ ಕಂಪನಿ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹನುಮಂತ ರಾಜು ಟಿ.ಎಚ್.
ಸಮಾಜಮುಖಿ ಕಾರ್ಯ:ಕೋವಿಡ್ ವೇಳೆ ಬೀದಿಬದಿ ವ್ಯಾಪಾರಿಗಳಿಗೆ ಫುಡ್ ಕಿಟ್ ವಿತರಿಸಿ ಕಷ್ಟಕ್ಕೆ ನೆರವಾಗಿದ್ದವರು ಹನುಮಂತರಾಜು. ಊರಿನ ಜತೆ ಅವಿನಾಭವ ಸಂಬಂಧ ಇಟ್ಟುಕೊಂಡಿರುವ ಇವರು, ಊರಿನಲ್ಲಿರುವ ದೇವಸ್ಥಾನಗಳ ಅಭಿವೃದ್ಧಿಗೆ ಹಣ ಸಹಾಯ ಸೇರಿ ಹಲವು ಸಮಾಜಮುಖಿ ಕಾರ್ಯ ಮಾಡಿದ್ದಾರೆ. ತಮ್ಮ ಪುತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಂಪನಿ ಬೆಳೆಸಿದ್ದರೂ, ಹನುಮಂತರಾಜು ಅವರ ಪಾಲಕರು ಊರಿನಲ್ಲೇ ಸರಳ ಜೀವನ ನಡೆಸುತ್ತಿದ್ದಾರೆ. ಇದು ನಮಗೆಲ್ಲರಿಗೂ ಮಾದರಿಯಾಗಿದೆ.

400 ಜನರಿಗೆ ಉದ್ಯೋಗ:ಕಂಪನಿಯಲ್ಲಿ 400ಕ್ಕೂ ಅಧಿಕ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ 4 ಉದ್ಯೋಗಿ ಗಳಿದ್ದರು. ಗ್ರಾಮೀಣ ಪ್ರದೇಶಗಳಿಂದ ಬರುವ ಪ್ರತಿಭೆಗಳಿಗೆ ಅನುಭವ ನೀಡಿ ಹೊಸಬರಿಗೆ ಮೊದಲ ಆದ್ಯತೆ ನೀಡಿ ಕೆಲಸಕ್ಕೆ ನೇಮಿಸಿಕೊಳ್ಳಲಾಗುತ್ತದೆ. ಐಟಿಐ ಕಾಲೇಜುಗಳಲ್ಲಿ ಕ್ಯಾಂಪಸ್ ಸಂದರ್ಶನ ನಡೆಸಿ ಪ್ರತಿಭಾವಂತ ವಿದ್ಯಾರ್ಥಿ ಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ. ಕೌಶಲ ಸೇರಿ ಇತರೆ ತರಬೇತಿ ನೀಡಲಾಗುತ್ತದೆ. ಕಂಪನಿಯಲ್ಲಿ ಕೆಲಸ ಮಾಡಿರುವ 15-16 ಮಂದಿ ಸಣ್ಣದಾಗಿ ಎಲಿವೇಟರ್ ಸರ್ವೀಸ್ ಕಂಪನಿ ಆರಂಭಿಸಿದ್ದಾರೆ ಎಂದು ಹನುಮಂತರಾಜು ಹೇಳುತ್ತಾರೆ. ಹೊಸಬರಿಗೆ ಕೆಲಸ ನೀಡುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡಲಾಗುತ್ತದೆ. ನೇಮಕ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ ಎಂದವರು ತಿಳಿಸುತ್ತಾರೆ. ಕರ್ನಾಟಕ ಎಲಿವೇಟರ್ ಉತ್ಪಾದನಾ ಸಂಘ, ಪೀಣ್ಯ ಕೈಗಾರಿಕಾ ಸಂಘ, ಟೈಮ್ಸ್ ಗ್ರೂಪ್, ಅಇಉ ಟೆಕ್ ಅವರಿಂದ ಬೆಸ್ಟ್ ಆರ್ಕಿಟೆಕ್ಟ್ ಡಿಸೈನ್ ಮತ್ತು ಸೇಫೆಸ್ಟ್ ಎಲಿವೇಟರ್ಸ್ ಇನ್ ಇಂಡಿಯಾ, ಕೀಮಾ, ಎಂಎಸ್​ಎಂಇ ವತಿಯಿಂದ ಬಿಜಿನೆಸ್ ಲೀಡರ್​ಶಿಪ್, ಸುವರ್ಣ ನ್ಯೂಸ್ ಅವರಿಂದ ದುಬೈ ಇಂಟರ್​ನ್ಯಾಷನಲ್ ಅವಾರ್ಡ್ ಸೇರಿ ಹತ್ತಾರು ಪ್ರಶಸ್ತಿಗಳು ಕಂಪನಿಗೆ ಲಭಿಸಿವೆ.
ಶೇ.80 ವಿದ್ಯುತ್ ಉಳಿತಾಯ:ಇಕೋ ಪ್ಲಾನೆಟ್ ಕಂಪನಿ ತಯಾರಿಸುವ ಲಿಫ್ಟ್, ಎಲಿವೇಟರ್​ಗಳು ಶೇ.80 ವಿದ್ಯುತ್ ಉಳಿತಾಯ ಮಾಡುತ್ತವೆ. ದೇಶದಲ್ಲೇ ಮೊದಲ ಬಾರಿ ಸೋಲಾರ್ ಪವರ್​ನಲ್ಲಿ ಲಿಫ್ಟ್ ಕಾರ್ಯನಿರ್ವಹಿಸುವಂತ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಕಾರ್ಯರೂಪಕ್ಕೆ ತರಲಾಗಿದೆ. ಇದು ಕಂಪನಿಯ ವೈಶಿಷ್ಟ ್ಯ ವಾಗಿದೆ. ಸಾಮಾನ್ಯವಾಗಿ ಒಂದು ಲಿಫ್ಟ್ ಕಾರ್ಯನಿರ್ವಹಣೆಗೆ 5 ಕಿಲೋವ್ಯಾಟ್ ವಿದ್ಯುತ್ ಬೇಕಾಗುತ್ತದೆ. ಆದರೆ, ಕಂಪನಿ ತಯಾರಿಸಿದ ಲಿಫ್ಟ್ಗೆ ಕೇವಲ 2 ಕಿಲೋವ್ಯಾಟ್ ಸಾಕಾಗುತ್ತದೆ. ಸಿಂಗಲ್ ಫೇಸ್, ತ್ರೀ ಪೇಸ್, ಬ್ಯಾಟರಿ, ಸೋಲಾರ್ ಪ್ಯಾನಲ್ ಮೂಲಕ ಲಿಫ್ಟ್ ಕಾರ್ಯಾಚರಣೆ ಮಾಡಲಿದೆ. ಲಿಫ್ಟ್ಗಳಲ್ಲಿ ಶಬ್ದ, ಕಂಪನ ಆಗದಂತೆ ಪರಿಸರಸ್ನೇಹಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಸ್ಟಮೈಸ್ಡ್ ವಿನ್ಯಾಸ ಮತ್ತು ಬೆಲೆಗೆ ಅನುಗುಣವಾಗಿ ಲಿಫ್ಟ್ಗಳು ದೊರೆಯಲಿವೆ. ಎಂಎನ್​ಸಿ ಕಂಪನಿಗಳಿಗಿಂತ ಇಕೋ ಪ್ಲಾನೆಟ್ ಕಂಪನಿ, ಕೈಗೆಟುಕುವ ದರದಲ್ಲಿ ಎಲ್ಲ ಬಗೆಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಲಿಫ್ಟ್ಗಳನ್ನು ಅಳವಡಿಸುತ್ತದೆ.

ಪ್ರಥಮ ಬಾರಿಗೆ ಹೈಸ್ಪೀಡ್ ಲಿಫ್ಟ್ ಅಳವಡಿಕೆ:ವಿಶೇಷ ತಂತ್ರಜ್ಞಾನ ಮೂಲಕ ಅಭಿವೃದ್ಧಿಪಡಿಸಿ ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಂಪನಿಯು ಹೈಸ್ಪೀಡ್ ಲಿಫ್ಟ್ ಅಳವಡಿಸಿರುವುದು ಗಮನಾರ್ಹ. ಅದೇ ರೀತಿ, ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿಗಳು ಕಟ್ಟಿರುವ ವಿಲ್ಲಾ, ಮಾಲ್​ಗಳು, ಹಾಸ್ಪಿಟಲ್, ಸ್ಕೈವಾಕ್​ಗಳು, ಅಪಾರ್ಟ್​ವೆುಂಟ್​ಗಳಿಗೂ ಲಿಫ್ಟ್, ಎಲಿವೇಟರ್ಸ್, ಎಸ್ಕಲೇಟರ್ ತಯಾರಿಸಿ ಅಳವಡಿಸಿದೆ. ಲಿಫ್ಟ್ನಲ್ಲಿ ಸುರಕ್ಷತಾ ಮಾನದಂಡಗಳನ್ನು ಅಳವಡಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೈಸ್ಪೀಡ್ ಲಿಫ್ಟ್ ತಯಾರಿಕೆಗೆ ಆಲೋಚಿಸಿದೆ. 2025ರ ವೇಳೆಗೆ ಭಾರತದಲ್ಲಿ ವರ್ಟಿಕಲ್ ಮೊಬಿಲಿಟಿ ಸಲ್ಯೂಷನ್ ವಿಭಾಗದಲ್ಲಿ ಮನ್ನಣೆ ಪಡೆಯಲು ಹೋಮ್ ಎಲಿವೇಟರ್ ಬ್ರ್ಯಾಂಡ್​ಗೆ ಆದ್ಯತೆ ನೀಡುತ್ತಿದೆ. ಬರುವ ದಿನಗಳಲ್ಲಿ ಮೊಬೈಲ್ ಎಕ್ಸ್​ಪೀರಿಯನ್ಸ್ ಸೆಂಟರ್ ಪರಿಚಯಿಸುವ ಗುರಿಯನ್ನು ಕಂಪನಿ ಹಾಕಿಕೊಂಡಿದೆ. ಎಲ್ಲ ವಿನ್ಯಾಸದ ಲಿಫ್ಟ್ಗಳನ್ನು ಅಳವಡಿಸಿ ಗ್ರಾಹಕರಿಗೆ ಪರಿಚಯಿಸುವುದು, ಜಾಗೃತಿ ಮೂಡಿಸುವುದು ಕಂಪನಿ ಉದ್ದೇಶವಾಗಿದೆ.
ಕಂಪನಿ ವಿಶೇಷ?
ಇಕೋ ಪ್ಲಾನೆಟ್ ಎಲಿವೇಟರ್ಸ್ ಆಂಡ್ ಎಸ್ಕಲೇಟರ್ಸ್ ಪ್ರೖೆ.ಲಿ. ವ್ಯವಸ್ಥಾಪಕ ನಿದೇಶಕ ಹನುಮಂತರಾಜು ಅವರು ಯುವ ಜನಾಂಗಕ್ಕೆ ಪ್ರೇರಣೆ. ಚಿಕ್ಕವಯಸ್ಸಿನಲ್ಲೇ ಎದುರಾದ ಕಷ್ಟಗಳನ್ನು ಮೆಟ್ಟಿನಿಂತು ಅಂತಾರಾಷ್ಟ್ರೀಯ ಮಟ್ಟದ ಕಂಪನಿಯನ್ನು ಕಟ್ಟಿ ಬೆಳೆಸಿದ್ದಾರೆ. ಕಾಲಕ್ಕೆ ತಕ್ಕಂತೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಗೃಹ, ವಾಣಿಜ್ಯ, ಆಸ್ಪತ್ರೆ, ವಿಲ್ಲಾ, ಅಪಾರ್ಟ್​ವೆುಂಟ್, ಮಾಲ್​ಗಳಿಗೆ ಗುಣಮಟ್ಟದ ಲಿಫ್ಟ್, ಎಲಿವೇಟರ್ಸ್ ಪೂರೈಸಲಾಗುತ್ತಿದೆ. ಇದುವರೆಗೆ ಯಾವುದೇ ಲಿಫ್ಟ್ಗಳು ಕೆಟ್ಟು ನಿಂತಿರುವ ಉದಾಹರಣೆಗಳಿಲ್ಲ. ಕಂಪನಿ ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಲಿ.
| ರಜತ್ ಕುಮಾರ್
ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ
ಕಂಪನಿ ತಯಾರಿಸುವ ಉತ್ಪನ್ನಗಳನ್ನು ಖರೀದಿಸುವ ಪ್ರತಿಯೊಬ್ಬ ಗ್ರಾಹಕ ನಮಗೆ ಪ್ರಭುಗಳಿದ್ದಂತೆ. ಕಂಪನಿ ಪ್ರಗತಿಗಾಗಿ ಶ್ರಮಿಸುತ್ತಿರುವ ಉದ್ಯೋಗಿಗಳೇ ನಮಗೆ ಆಸ್ತಿ ಇದ್ದಂತೆ. ಗ್ರಾಹಕರು ಇಲ್ಲದಿದ್ದರೆ ನಾವೆಲ್ಲರೂ ಶೂನ್ಯ. ಹಾಗಾಗಿ, ಗ್ರಾಹಕರಿಗೆ ಇನ್ನಷ್ಟು ಅತ್ಯುತ್ತಮ ಸೇವೆ ನೀಡಲಾಗುತ್ತಿದೆ. ‘ಬೆಂಗಳೂರು ರತ್ನ’ ಪ್ರಶಸ್ತಿ ಸಿಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ‘ವಿಜಯವಾಣಿ’ ಪತ್ರಿಕೆ ನನ್ನನ್ನು ಗುರುತಿಸಿ ಪ್ರಶಸ್ತಿ ಕೊಟ್ಟಿರುವುದಕ್ಕೆ ಸಂತಸವಾಗಿದೆ. ಬರುವ ದಿನಗಳಲ್ಲಿ ಗ್ರಾಹಕರಿಗೆ ಇನ್ನಷ್ಟು ಸೇವೆ ನೀಡಲು ನಮ್ಮ ಮೇಲೆ ಹೊಣೆಗಾರಿಕೆಯೂ ಹೆಚ್ಚಿದೆ.
| ಹನುಮಂತರಾಜು ಟಿ.ಎಚ್. (ರಾಜುಗೌಡ) ವ್ಯವಸ್ಥಾಪಕ ನಿರ್ದೇಶಕ. ಇಕೋ ಪ್ಲಾನೆಟ್ ಎಲಿವೇಟರ್ಸ್ ಇಂಟರ್​ನ್ಯಾಷನಲ್ ಪ್ರೖೆ.ಲಿ.
25 ವರ್ಷಗಳಿಂದ ಬಾಷ್ ಕಂಪನಿಯಲ್ಲಿ ಕ್ವಾಲಿಟಿ ಕಂಟ್ರೋಲ್ ಹೆಡ್ ಆಗಿ ಕೆಲಸ ಮಾಡುತ್ತಿದ್ದೆ. ನಂತರ ಇಕೋ ಪ್ಲಾನೆಟ್ ಎಲಿವೇಟರ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡೆ. 4 ವರ್ಷದಿಂದ ಕಂಪನಿಯ ಮಾರಾಟ ವಿಭಾಗದ ಹಿರಿಯ ವ್ಯವಸ್ಥಾಪಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಮ್ಮ ಕಂಪನಿ ಅತ್ಯಂತ ವಿಶಿಷ್ಟ ರೀತಿಯಲ್ಲಿ ಉತ್ಪನ್ನ ತಯಾರಿಸಿ ಮಾರಾಟ ಮಾಡುತ್ತಿದೆ. ಸಾವಿರಾರು ಗ್ರಾಹಕರು ನಮ್ಮ ಉತ್ಪನ್ನವನ್ನು ಇಷ್ಟಪಟ್ಟಿದ್ದಾರೆ. ಹನುಮಂತರಾಜು ಅವರು ನಮ್ಮನ್ನು ಮನೆಯ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ. ಹೊಸಬರಿಗೆ ಸದಾ ಅವಕಾಶ ಕೊಟ್ಟು ಕೆಲಸ ಮಾಡುವಂತೆ ಪ್ರೇರೇಪಿಸುತ್ತಾರೆ. ಮುಂದಿನ ದಿನಗಳಲ್ಲಿ ಕಂಪನಿ ವಹಿವಾಟು ಇನ್ನಷ್ಟು ವೃದ್ಧಿಸುವಂತಾಗಲಿ.
| ಟಿ.ದಿವಾಕರ್ ಹಿರಿಯ ವ್ಯವಸ್ಥಾಪಕ (ಮಾರುಕಟ್ಟೆ ವಿಭಾಗ)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 2 =
Remember me
