ಬೆಂಗಳೂರು:ನಗರದಲ್ರೇಲಿ ನಡೆದ ರೇವ್ ಪಾರ್ಟಿ ಭಾರೀ ಸಂಚಲನ ಮೂಡಿಸುತ್ತಿದೆ. ಕೆಲವು ಉದ್ಯಮಿಗಳು, ನಟ, ನಟಿಯರು ಸಲೆಬ್ರೆಟಿಗಳೂ ಭಾಗಿಯಾಗಿದ್ದರು ಎನ್ನುವ ಸುದ್ದಿ ವೈರಲ್​​ ಆಗುತ್ತಿದ್ದಂತೆ ನಟಿ ಹೇಮಾ ನಾನು ಆ ರೇವ್​ ಪಾರ್ಟಿಯಲ್ಲಿ  ಭಾಗಿಯಾಗಿಲ್ಲ ಎಂದು ವಿಡಿಯೋ ರಿಲೀಸ್​​ ಮಾಡಿದ್ದ ಬೆನ್ನಲ್ಲೇ ನಟಿ ಆಶಿ ರಾಯ್ ಕೂಡಾ ಅದು ರೇವ್​ ಪಾರ್ಟಿ ಅಲ್ಲ ಬರ್ತಡೆ ಪಾರ್ಟಿ ಎಂದು ಹೇಳಿದ್ದರು. ಪೊಲೀಸರ ಹಾಗೂ ಮಾಧ್ಯಮದವರ ದಾರಿ ತಪ್ಪಿಸುತ್ತಿದ್ದ ನಟಿ ಮಣಿಯರಿಗೆ ಶಾಕಿಂಗ್​ ಸುದ್ದಿಯನ್ನು ಬೆಂಗಳೂರು ಪೊಲೀಸರು ನೀಡಿದ್ದಾರೆ.
ಹೇಮಾ ಜೊತೆಗೆ ಹಲವು ತೆಲುಗು ನಟರಿದ್ದರು ಎಂದು ಹೇಳಿರುವ ಬೆಂಗಳೂರು ಪೊಲೀಸರು ಅವರ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ಆ ರೇವ್ ಪಾರ್ಟಿಯಲ್ಲಿ ನಾನಿರಲಿಲ್ಲ ಎಂದು ನಟಿ ಹೇಮಾ ವಿಡಿಯೋ ಬಿಡುಗಡೆ ಮಾಡಿದ್ದರು. ಆದರೆ ಆಕೆಯ ವಿಡಿಯೋ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಬೆಂಗಳೂರು ಪೊಲೀಸರು ಹೇಮಾಳ ಫೋಟೋವನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು.
ಮತ್ತೊಬ್ಬ ತೆಲುಗು ನಟಿ ಅವರೇ ಆಶಿ ರಾಯ್. ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಆಶಿ ರಾಯ್ ಪಾಲ್ಗೊಂಡಿದ್ದರು ಎಂಬ ವರದಿಗಳಿವೆ. ಆಶಿರಾಯ್ ಅವರು ಪಾರ್ಟಿಗೆ ಹೋಗಿದ್ದು ನಿಜ, ಆದರೆ ಅದು ಹುಟ್ಟುಹಬ್ಬದ ಪಾರ್ಟಿ. ವಾಸು ಎಂಬ ವ್ಯಕ್ತಿ ಸೂರ್ಯಾಸ್ತದಿಂದ ಸೂರ್ಯೋದಯ ಎಂಬ ಪರಿಕಲ್ಪನೆಯೊಂದಿಗೆ ಈ ರೇವ್ ಪಾರ್ಟಿಯನ್ನು ಆಯೋಜಿಸಿದ್ದ. ವಾಸು ತೆಲುಗು ರಾಜ್ಯಗಳಲ್ಲಿ ಬಿಲ್ಡರ್ ಮತ್ತು ಬುಕ್ಕಿಯಾಗಿ ಪ್ರಸಿದ್ಧ ವ್ಯಕ್ತಿ ಎಂದು ವರದಿಯಾಗಿದೆ. ಅವರ ಪರಿಚಯದಿಂದಲೇ ಬರ್ತ್ ಡೇ ಪಾರ್ಟಿಗೆ ಹೋಗಿದ್ದೆ ಎಂದಿದ್ದಾರೆ. ಅದೊಂದು ಬರ್ತ್‌ಡೇ ಪಾರ್ಟಿ ಅಷ್ಟೆ, ಆದರೆ ಅಲ್ಲಿ ಏನಾಯಿತು ಎಂದು ತನಗೆ ತಿಳಿದಿಲ್ಲ ಎಂದಿದ್ದಾಳೆ. ಪೊಲೀಸರು ಬಂದಾಗ ಅಲ್ಲಿಯೇ ಇದ್ದೆ ಎಂದು ರಕ್ತದ ಮಾದರಿಯನ್ನು ನೀಡಿದ್ದೇನೆ. ಅಲ್ಲಿ ನಟಿ ಹೇಮಾಳನ್ನು ನೋಡಿಲ್ಲ.. ಒಳಗೆ ಏನು ಮಾಡುತ್ತಿದ್ದಾರೋ ಗೊತ್ತಿಲ್ಲ.. ಕೊಕೇನ್ ಮತ್ತಿತರ ಅಮಲು ಪದಾರ್ಥಗಳು ಸಿಕ್ಕಿದ್ದಕ್ಕೆ ಏನು ಗೊತ್ತಿಲ್ಲ ಎಂದು ಹೇಳಿದ್ದಳು.
ಅನುಮತಿ ಪಡೆಯದೇ ದೊಡ್ಡ ಮಟ್ಟದಲ್ಲಿ ಪಾರ್ಟಿ ಆಯೋಜಿಸಿ ತಡರಾತ್ರಿಯಲ್ಲಿ ಗಲಾಟೆ ಮಾಡುತ್ತಿದ್ದ ಪಾರ್ಟಿಯ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ತೆಲುಗು ಸಿನಿಮಾ ನಟ-ನಟಿಯರು ಹಾಗೂ ಶ್ರೀಮಂತರ ಮಕ್ಕಳು, ಉದ್ಯಮಿಗಳ ಮಕ್ಕಳು ಇರುವುದು ಕಂಡುಬಂದಿದ್ದರು. ಮಾದಕ ವಸ್ತುಗಳಾದ ಎಂಡಿಎಂಎ, ಕೊಕೇನ್, ಹೈಡ್ರೋ ಗಾಂಜಾ ಪತ್ತೆಯಾಗಿದ್ದವು. ಪಾರ್ಟಿಯಲ್ಲಿದ್ದವರ ರಕ್ತವನ್ನು ಸ್ಯಾಂಪಲ್​ ಪಡೆದುಕೊಳ್ಳಲಾಗಿತ್ತು.
ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ 103 ಮಂದಿಯ ಪೈಕಿ 86 ಮಂದಿ ಡ್ರಗ್ ಸೇವನೆ ಮಾಡಿರುವುದು ಖಚಿತವಾಗಿದೆ. ಈ ಪೈಕಿ ಪಾರ್ಟಿಯಲ್ಲಿ ಭಾಗಿಯಾಗಿದ್ದ 73 ಮಂದಿ ಪುರುಷರಲ್ಲಿ 59 ಮಂದಿ ಬ್ಲಡ್ ರಿಪೋರ್ಟ್ ಡ್ರಗ್ಸ್ ಪಾಸಿಟಿವ್ ಬಂದಿದೆ. ಜೊತೆಗೆ, 30 ಮಂದಿ ಯುವತಿಯರ ಪೈಕಿ 27 ಮಂದಿಯ ಬ್ಲಡ್ ರಿಪೋರ್ಟ್ ಡ್ರಗ್ಸ್ ಪಾಸಿಟಿವ್ ಬಂದಿದೆ. ಇದರಲ್ಲಿ ತೆಲುಗು ನಟಿ ಹೇಮಾ ಅವರ ಡ್ರಗ್ಸ್ ರಿಪೋರ್ಟ್ ಕೂಡ ಪಾಸಿಟಿವ್ ಬಂದಿದೆ. ಅದರಲ್ಲಿ ತೆಲುಗು ನಟಿಯರಾದ ಹೇಮಾ ಮತ್ತು ಆಶಿ ರಾಯ್ ಬ್ಲಡ್ ರಿಪೋರ್ಟ್ ಕೂಡ ಪಾಸಿಟಿವ್ ಬಂದಿದೆ. ನಟಿಯರಿಬ್ಬರಿಗೂ ಈ ಮೂಲಕವಾಗಿ ಶಾಕ್​ ನೀಡಲಾಗಿದೆ.
ತಗ್ಲಾಕ್ಕೊಂಡಳು ನಟಿ ಹೇಮಾ; ಬೆಂಗಳೂರು ರೇವ್ ಪಾರ್ಟಿಗೆ ಬಂದಿಲ್ಲ ಎಂದವಳ ರಕ್ತದಲ್ಲಿ ಡ್ರಗ್ಸ್ ಪತ್ತೆ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − nine =
Remember me
